ರೇಷನ್ ಕಾರ್ಡ್ ಇರುವವರಿಗೆ ಗುಡ್ ನ್ಯೂಸ್ | ಕಾರ್ಡ್ ಹೊಂದಿರುವ ಪ್ರತಿಮನೆಗೂ ವಿದ್ಯುತ್ ಸಂಪರ್ಕ – ಸಚಿವ ಸುನಿಲ್ ಕುಮಾರ್

ರೇಷನ್ ಕಾರ್ಡ್ ಇರುವ ಎಲ್ಲ ಮನೆಗಳಿಗೂ ವಿದ್ಯುತ್ ಸಂಪರ್ಕ ಕಲ್ಪಿಸುವುದರ ಜೊತೆಗೆ ‌ಬಜೆಟ್ ಕಾರ್ಯಕ್ರಮಗಳಿಗೆ ಕಾಲಮಿತಿ ವಿಧಿಸಿದ್ದು, ಯಾವುದೇ ಯೋಜನೆಗಳನ್ನು ಮುಗಿಸುವ ವಿಷಯದಲ್ಲಿ ರಾಜಿ ಇಲ್ಲವೆಂದು ಇಂಧನ ಸಚಿವ ಸುನಿಲ್ ಕುಮಾರ್ ಹೇಳಿದ್ದಾರೆ.

ಕಾವೇರಿ ಭವನದಲ್ಲಿ ಕೆಪಿಟಿಸಿಎಲ್ ಕಚೇರಿಯ ಸಮ್ಮೇಳನ ಸಭಾಂಗಣದಲ್ಲಿ ಇಂಧನ ಇಲಾಖೆ, ವಿದ್ಯುತ್ ಸರಬರಾಜು ಕಂಪನಿಗಳ ಅಧಿಕಾರಿಗಳೊಂದಿಗೆ ಕಾರ್ಯನಿರ್ವಹಣೆ ಕುರಿತಂತೆ ಅವರು ಸಭೆ ನಡೆಸಿದರು.

ಕಾಲಮಿತಿಯೊಳಗೆ ಬಜೆಟ್ನಲ್ಲಿ ಘೋಷಿಸಿದ ಕಾರ್ಯಕ್ರಮ ಮತ್ತು ಕೇಂದ್ರ ಸರ್ಕಾರದ ಸಹಯೋಗದ ಯೋಜನೆಗಳನ್ನು ಪೂರ್ಣಗೊಳಿಸಬೇಕು ಎಂದು ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ.

Ad Widget
Ad Widget

Ad Widget

Ad Widget

ಟ್ರಾನ್ಸ್ ಫಾರ್ಮರ್ ಬದಲಾವಣೆ ಅಥವಾ ದುರಸ್ತಿಗೆ ತಕ್ಷಣವೇ ಕ್ರಮ ಕೈಗೊಳ್ಳಬೇಕು. ಗಂಗಾ ಕಲ್ಯಾಣ ಯೋಜನೆಯಡಿ ವಿದ್ಯುತ್ ಸಂಪರ್ಕವನ್ನು ಕಾಲಮಿತಿಯೊಳಗೆ ನೀಡಬೇಕು. ಅನಧಿಕೃತ ವಿದ್ಯುತ್ ಸಂಪರ್ಕ, ಸೋರಿಕೆ ತಡೆಯಬೇಕು. ವಿದ್ಯುತ್ ಸಂಪರ್ಕ ಮತ್ತು ಮೀಟರ್ ಅಳವಡಿಕೆಯಲ್ಲಿ ವಿಳಂಬ ನೀತಿ ಅನುಸರಿಸಬಾರದು ಎಂದು ತಿಳಿಸಿದ್ದಾರೆ.

ಕೃಷಿ ಕೈಗಾರಿಕೆ ಸೇರಿದಂತೆ ಎಲ್ಲಾ ವರ್ಗದ ಗ್ರಾಹಕರಿಗೆ ಗುಣಮಟ್ಟದ ವಿದ್ಯುತ್ ಪೂರೈಕೆಗೆ ಕ್ರಮ ಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ಸಚಿವ ಸುನಿಲ್ ಕುಮಾರ್ ಸೂಚಿಸಿದ್ದಾರೆ.

Leave a Reply

error: Content is protected !!
Scroll to Top
%d bloggers like this: