ಶಿರ್ವ ಸಂತ ಮೇರಿ ಮಹಾವಿದ್ಯಾಲಯದಲ್ಲಿ 2021ರ ಆಗಸ್ಟ್ 15 ರಂದು 75ನೇ ಸ್ವಾತಂತ್ರ್ಯ ಸಂಭ್ರಮದ “ಅಮೃತ ಮಹೋತ್ಸವ” ದಿನಾಚರಣೆ

ಶಿರ್ವ: ಇಲ್ಲಿನ ಸಂತ ಮೇರಿ ಮಹಾವಿದ್ಯಾಲಯದಲ್ಲಿ 2021ರ ಆಗಸ್ಟ್ 15 ರಂದು 75ನೇ ವರ್ಷದ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಆಚರಣೆಯನ್ನು, ಆ. 15 ರಂದು ವಾರಾಂತ್ಯ ಕರ್ಪ್ಯೂ ಮತ್ತು ಕೋವಿಡ್ 19 ಮಾರ್ಗಸೂಚಿಯಂತೆ ಆಚರಿಸಲಾಯಿತು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕಾಲೇಜಿನ ಆಡಳಿತಾತ್ಮಕ ಸಹಾಯಕ ಸಿಬ್ಬಂದಿ ಶ್ರೀರಂಗ ರವರು ಧ್ವಜಾರೋಹಣವನ್ನು ನೆರವೇರಿಸಿದರು.

 

ಪ್ರಾಂಶುಪಾಲರಾದ ಡಾ| ಹೆರಾಲ್ಡ್ ಐವನ್ ಮೋನಿಸರವರು , ದೇಶದ ಬುನಾದಿಯಾದ ಯುವಜನರು ಹಲವಾರು ಕ್ಷೇತ್ರಗಳಲ್ಲಿ ಸರ್ವತೋಮುಖವಾಗಿ ಪ್ರಗತಿ ಸಾಧಿಸಲು ಕಠಿಣ ಪರಿಶ್ರಮ,ಸರಿಯಾದ ಮಾರ್ಗದರ್ಶನವನ್ನು ಪಡೆದುಕೊಂಡು ನವಸಮಾಜ ನಿರ್ಮಾಣ ಜೊತೆಗೆ ದೇಶಾಭಿವೃದ್ಧಿಗಾಗಿ ತಮ್ಮ ಕೈಲಾದ ಸಹಾಯವನ್ನು ಮಾಡಬೇಕಿದೆ. ನಿಜವಾದ ಸ್ವಾತಂತ್ರ್ಯ ಸಂಭ್ರಮಾಚರಣೆ ಎಂದರೆ ಮಾನವರಾದ ನಾವು ಮಾನವೀಯತೆ ಮೆರೆದು ಬಂದಿರುವ ಸಂಕಷ್ಟಗಳು ಸಹಾಯ ಹಸ್ತದ ಮೂಲಕ ನಿವಾರಣೆಯಾಗಲೆಂದು ಪ್ರಾರ್ಥಿಸೋಣ,ನಮ್ಮ ಯೋಧರ ತ್ಯಾಗಗಳನ್ನು ಸ್ಮರಿಸೋಣ, ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹನೀಯರನ್ನು ಸದಾ ನೆನೆಯೋಣ ಎಂದು ಸ್ವಾತಂತ್ರ್ಯ ಸಂದೇಶವನ್ನು ಅಧ್ಯಕ್ಷ ನೆಲೆಯಲ್ಲಿ ನೀಡಿದ್ದರು.

ಎನ್.ಸಿ.ಸಿ ಅಧಿಕಾರಿ ಲೆಫ್ಟಿನೆಂಟ್ ಶ್ರೀ ಕೆ.ಪ್ರವೀಣ್‌ಕುಮಾರ್‌,ಕ್ಯಾಡೆಟ್ ಸೀನಿಯರ್ ಅಂಡರ್ ಆಫೀಸರ್ ಭಟ್ ರಾಮದಾಸ್ ಸತೀಶ್, ಕ್ಯಾಡೆಟ್ ಜೂನಿಯರ್ ಆಫೀಸರ್ ಪ್ರವಿತ ಆಚಾರ್ಯ, ರಿಯಾನ್ ರಿಷಿ ಆಲ್ಫೋನ್ಸೋ, ಕಂಪನಿ ಸಾರ್ಜೆಂಟ್ ಮೇಜರ್ ಪ್ರತಿಮ, ಕ್ವಾರ್ಟರ್ ಮಾಸ್ಟರ್ ರೈನ್ ಅಂದ್ರಾದೆ ಪರೇಡ್ ನ ನೆರವೇರಿಸಿಕೊಟ್ಟರು.

ಈ ಸಂದರ್ಭದಲ್ಲಿ ಎನ್.ಸಿ.ಸಿ, ಎನ್.ಎಸ್.ಎಸ್, ರೋವೇರ್ಸ್ ಹಾಗೂ ರೇಂಜರ್ಸ್ ವಿದ್ಯಾಥಿಗಳು ಹಾಗು ಅಧ್ಯಾಪಕರಿಂದ ದೇಶ-ಭಕ್ತಿ ಗೀತೆ ಗಳನ್ನು ಹಾಡಿದರು.

ಎನ್.ಸಿ.ಸಿ ಅಧಿಕಾರಿ ಲೆಫ್ಟಿನೆಂಟ್ ಶ್ರೀ ಕೆ.ಪ್ರವೀಣ್‌ಕುಮಾರ್‌,ಕ್ಯಾಡೆಟ್ ಸೀನಿಯರ್ ಅಂಡರ್ ಆಫೀಸರ್ ಭಟ್ ರಾಮದಾಸ್ ಸತೀಶ್, ಕ್ಯಾಡೆಟ್ ಜೂನಿಯರ್ ಆಫೀಸರ್ ಪ್ರವಿತ ಆಚಾರ್ಯ, ರಿಯಾನ್ ರಿಷಿ ಆಲ್ಫೋನ್ಸೋ, ಕಂಪನಿ ಸಾರ್ಜೆಂಟ್ ಮೇಜರ್ ಪ್ರತಿಮ, ಕ್ವಾರ್ಟರ್ ಮಾಸ್ಟರ್ ರೈನ್ ಅಂದ್ರಾದೆ ಪರೇಡ್ ನ ನೆರವೇರಿಸಿಕೊಟ್ಟರು.

ಈ ಕಾರ್ಯಕ್ರಮದಲ್ಲಿ ಎನ್ಎಸ್ಎಸ್ ಯೋಜನಾಧಿಕಾರಿ ಶ್ರೀರಕ್ಷಾ, ರೋವರ್ಸ್ ಮತ್ತು ರೇಂಜರ್ಸ್ ಸ್ಕೌಟ್ ಲೀಡರ್ ಗಳಾದ ಶ್ರೀ ಪ್ರಕಾಶ್, ಶ್ರೀಮತಿ ಸಂಗೀತ ಪೂಜಾರಿ, ಎನ್ ಎಸ್ ಎಸ್ ಘಟಕದ ವಿದ್ಯಾರ್ಥಿ ನಾಯಕರಾದ ಅಕ್ಷಯ್, ಸುರೇಖಾ, ವೈಷ್ಣವಿ, ಅಪೇಕ್ಷಾ, ರೋವರ್ಸ್ ಮತ್ತು ರೇಂಜರ್ಸ್ ಘಟಕದ ವಿದ್ಯಾರ್ಥಿ ನಾಯಕರಾದ ಫ್ರಾಂಕ್ಲಿನ್ ಮತಾಯಸ್ ಮತ್ತು ಪ್ರತೀಕ್ಷಾ,ಕಾಲೇಜಿನ ಎಲ್ಲಾ ಭೋಧಕ ಹಾಗು ಭೋಧಕೆತರ ವೃಂದದವರು ಉಪಸ್ಥಿತರಿದ್ದರು.

ಎನ್ಎಸ್ಎಸ್ ಅಧಿಕಾರಿ ಶ್ರೀ ಪ್ರೇಮನಾಥ್ ವಂದಿಸಿ, ಸ್ಟಾಫ್ ಸೆಕ್ರೆಟರಿ ಶ್ರೀಮತಿ ರೀಮಾ ಲೋಬೊ ಸ್ವಾಗತಿಸಿದರು. ಕಾಲೇಜಿನ ವಿದ್ಯಾರ್ಥಿ ಕ್ಷೇಮಾಮಾಭಿವೃದ್ಧಿ ನಿರ್ದೇಶಕಿ ಕು. ಯಶೋಧ ಕಾರ್ಯಕ್ರಮ ಸಂಯೋಜಿಸಿದರು.

Leave A Reply

Your email address will not be published.