ದಕ್ಷಿಣಕನ್ನಡದಲ್ಲಿ ಮೂರನೇ ಬಾರಿ ಅತೀ ಹೆಚ್ಚು ಕೊರೋನಾ ಪ್ರಕರಣ | ಶನಿವಾರ 7 ಜನ ಸಾವು

ಮಂಗಳೂರು: ದ.ಕ. ಜಿಲ್ಲೆಯಲ್ಲಿ ಶನಿವಾರ 411 ಮಂದಿಯಲ್ಲಿ ಕೊರೋನಾ ಪಾಸಿಟಿವ್ ದೃಢಪಟ್ಟಿದ್ದು, 7 ಮಂದಿ ಸಾವನ್ನಪ್ಪಿದ್ದಾರೆ.

ತಿಂಗಳಲ್ಲಿ ಮೂರನೇ ಬಾರಿಗೆ ರಾಜ್ಯದಲ್ಲಿ ಅತೀ ಹೆಚ್ಚು ಪ್ರಕರಣ ದ.ಕ. ಜಿಲ್ಲೆಯಲ್ಲಿ ದಾಖಲಾಗಿದೆ. ಈವರೆಗೆ ಒಟ್ಟು 1,497 ಮಂದಿ ಕೊರೊನಾದಿಂದ ಮೃತಪಟ್ಟರೆ, ಜಿಲ್ಲೆಯಲ್ಲಿ ಶನಿವಾರ 371 ಮಂದಿ ಕೊರೊನಾದಿಂದ ಗುಣಮುಖರಾಗಿದ್ದಾರೆ.

ಒಟ್ಟು 1,05,533 ಮಂದಿ ಕೊರೋನಾ ಸೋಂಕಿಗೊಳಗಾಗಿದ್ದು, 1,00,354 ಮಂದಿ ಗುಣಮುಖರಾಗಿದ್ದಾರೆ. ಸದ್ಯ 3,682 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪಾಸಿಟಿವಿಟಿ ದರ ಶೇ. 3.73 ಇದೆ.

Ad Widget
Ad Widget

Ad Widget

Ad Widget

ಮಂಗಳೂರಿನ 4 ಮತ್ತು ಬೆಳ್ತಂಗಡಿ ತಾಲೂಕಿನ 2 ವಲಯಗಳನ್ನು ಕಂಟೈನ್‌ಮೆಂಟ್ ವಲಯವನ್ನಾಗಿ ಈಗಾಗಲೇ ಘೋಷಣೆ ಮಾಡಲಾಗಿದೆ.

ಇನ್ನು ಉಡುಪಿ ಜಿಲ್ಲೆಯಲ್ಲಿ ಶನಿವಾರ ‌169 ಮಂದಿಯಲ್ಲಿ ಪಾಸಿಟಿವ್ ದೃಢಪಟ್ಟಿದೆ. ಉಡುಪಿಯ 61 ವರ್ಷದ ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ. ಉಡುಪಿಯಲ್ಲಿ 98, ಕುಂದಾಪುರದಲ್ಲಿ 25, ಕಾರ್ಕಳದಲ್ಲಿ 43, ಅನ್ಯ ಜಿಲ್ಲೆಯ 3 ಮಂದಿಗೆ ಸೋಂಕು ಕಂಡುಬಂದಿದೆ.

ಜಿಲ್ಲೆಯಲ್ಲಿ ಒಟ್ಟು 5,848 ಮಂದಿಯನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, 146 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 1,296 ಪ್ರಕರಣಗಳು ಸಕ್ರಿಯವಾಗಿವೆ.

ಇನ್ನು ಕಾಸರಗೋಡು ಜಿಲ್ಲೆಯಲ್ಲಿ ಶನಿವಾರ 520 ಮಂದಿಗೆ ಕೊರೊನಾ ದೃಢಪಟ್ಟಿದೆ. 848 ಮಂದಿ ಗುಣಮುಖರಾಗಿದ್ದಾರೆ. 6,331 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶನಿವಾರ ಯಾವುದೇ ಸಾವಿನ ಪ್ರಕರಣ ದಾಖಲಾಗಿಲ್ಲ.

Leave a Reply

error: Content is protected !!
Scroll to Top
%d bloggers like this: