ಸವಣೂರು : ಸ್ವಾತಂತ್ರ್ಯ ದಿನಾಚರಣೆಯ ಅಮೃತಮಹೋತ್ಸವ ,ಸವಣೂರು ಬಸ್ ತಂಗುದಾಣಕ್ಕೆ ನೇತಾಜಿ ಹೆಸರು
ಸವಣೂರು: ಸ್ವಾತಂತ್ರ್ಯ ದಿನಾಚರಣೆಯ ಅಮೃತಮಹೋತ್ಸವದ ಅಂಗವಾಗಿ ಸವಣೂರು ಬಸ್ ತಂಗುದಾಣಕ್ಕೆ ರಾಷ್ಟ್ರ ನಾಯಕ ನೇತಾಜಿ ಸುಭಾಶ್ಚಂದ್ರ ಬೋಸ್ ಅವರ ಹೆಸರನ್ನು ಇಟ್ಟು ನಾಮಫಲಕ ಅನಾವರಣಗೊಳಿಸಲಾಯಿತು.
ಈ ಸಂಧರ್ಭ ಸವಣೂರು ಗ್ರಾ.ಪಂ.ಅಧ್ಯಕ್ಷೆ ರಾಜೀವಿ ಶೆಟ್ಟಿ ಕೆಡೆಂಜಿ, ಉಪಾಧ್ಯಕ್ಷ ಶೀನಪ್ಪ ಶೆಟ್ಟಿ ನೆಕ್ರಾಜೆ, ಸುಳ್ಯ ವಿ.ಸ.ಕ್ಷೇತ್ರದ ಅಕ್ರಮ ಸಕ್ರಮ ಸಮಿತಿ ಸದಸ್ಯ ರಾಕೇಶ್ ರೈ ಕೆಡೆಂಜಿ, ಗ್ರಾ.ಪಂ.ಸದಸ್ಯರಾದ ಗಿರಿಶಂಕರ ಸುಲಾಯ,ಅಬ್ದುಲ್ ರಝಾಕ್, ಸತೀಶ್ ಅಂಗಡಿಮೂಲೆ, ಅಬ್ದುಲ್ ರಫೀಕ್ ಎಂ.ಎ,ತೀರ್ಥರಾಮ ಕೆಡೆಂಜಿ, ಇಂದಿರಾ ಬೇರಿಕೆ, ಚಂದ್ರಾವತಿ ಸುಣ್ಣಾಜೆ, ಚೆನ್ನು ಮಾಂತೂರು, ಹರಿಕಲಾ ರೈ,ಯಶೋಧಾ, ಎ.ಶಬೀನಾ,ಭರತ್ ರೈ,ಚೇತನಾ ಪಾಲ್ತಾಡಿ, ಹರೀಶ್ ಕೆ.ಜಿ,ತಾರಾನಾಥ ಸುವರ್ಣ,ಬಾಬು ಎನ್ ,ಸಿಬ್ಬಂದಿಗಳಾದ ದಯಾನಂದ ಮಾಲೆತ್ತಾರು, ಪ್ರಮೋದ್ ಕುಮಾರ್ ರೈ,ಜಯಾ ಕೆ,ಜಯಶ್ರೀ,ಶಾರದಾ ಮಾಲೆತ್ತಾರು,ಯತೀಶ್ , ಸವಣೂರು ಹಿ.ಪ್ರಾ.ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷೆ ಪುಷ್ಪಾವತಿ ಕೇಕುಡೆ,ಗ್ರಾ.ಪಂ.ಮಾಜಿ ಸದಸ್ಯ ಸತೀಶ್ ಬಲ್ಯಾಯ,ಸವಣೂರು ಹಿಂದೂ ಜಾಗರಣ ವೇದಿಕೆಯ ಅಧ್ಯಕ್ಷ ಶ್ರೀಧರ್ ಇಡ್ಯಾಡಿ,ಗಂಗಾಧರ ಸುಣ್ಣಾಜೆ,ಶ್ರೀಧರ್ ಸುಣ್ಣಾಜೆ,ಮೋಹನ್ ರೈ ಕೆರೆಕ್ಕೋಡಿ,ಆರೋಗ್ಯ ಇಲಾಖೆಯ ವಾಗೇಶ್ವರಿ, ಆಶಾ ಕಾರ್ಯಕರ್ತೆ ಗೀತಾ ಮೊದಲಾದವರಿದ್ದರು.
ಗ್ರಾ.ಪಂ.ಅಭಿವೃದ್ಧಿ ಅಧಿಕಾರಿ ಎ.ಮನ್ಮಥ ಸ್ವಾಗತಿಸಿ,ಸಿಬ್ಬಂದಿ ದಯಾನಂದ ಮಾಲೆತ್ತಾರು ವಂದಿಸಿದರು.