ಡಿ.ಕೆ.ಶಿ ಸೋನಿಯಾರನ್ನು ಹುತಾತ್ಮ ಎಂದು ಹೇಳಿದ ಕೆಲ ಹೊತ್ತಿನಲ್ಲೇ ತಮಾಷೆಗೀಡಾದ ಜಮೀರ್ ಖಾನ್ | ಶುಭ ಕೋರುವ ಭರದಲ್ಲಿದ್ದ ಜಮೀರ್ ಗೆ ಇಂದು 75ನೇ ಗಣರಾಜ್ಯೋತ್ಸವ!!

ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಭಾಷಣದ ಬಿರುಸಿನಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರನ್ನು ಹುತಾತ್ಮ ಎಂದರೆ, ಇತ್ತ ಜಮೀರ್ ಖಾನ್ ಗೆ ಇಂದು 75 ನೇ ಗಣರಾಜ್ಯೋತ್ಸವ ಆಚರಣೆ. ಸದಾ ಹಲವಾರು ವಿಷಯದಲ್ಲಿ ಟ್ರೋಲಿಗರ ಕೈಗೆ ಸಿಕ್ಕು ಜನತೆಗೆ ಹಾಸ್ಯವನ್ನು ನೀಡುವ ಶಾಸಕ ಜಮೀರ್ ಖಾನ್ ಇಂದು ಮತ್ತೊಂದು ರೀತಿಯಲ್ಲಿ ತಮಾಷೆಗೆ ಈಡಾಗಿದ್ದಾರೆ.

75 ನೇ ಸ್ವಾತಂತ್ರೋತ್ಸವದ ಸಂಭ್ರಮ,ರಾಜ್ಯದ ಹಿರಿಯ ಹಾಗೂ ಕಿರಿಯ ರಾಜಕೀಯ ನಾಯಕರು, ಶಾಸಕರು ಹಲವೆಡೆ ಧ್ವಜಾರೋಹಣ ನಡೆಸಿ, ಜನತೆಗೆ ಶುಭ ಕೋರುವ ಜೊತೆಗೆ ತಾವೂ ಸಂಭ್ರಮಿಸಿದರು.ಈ ನಡುವೆ ಕಾಂಗ್ರೆಸ್ ನ ನಾಯಕ, ಬಂಡೆ ಡಿ.ಕೆ ಶಿವಕುಮಾರ್ ಅವರು ಕೂಡಾ ಧ್ವಜಾರೋಹಣ ನೆರವೇರಿಸಿ 75 ನೇ ಸ್ವಾತಂತ್ರ್ಯದ ಶುಭ ಕೋರುವ ಸಂದರ್ಭ ಕಾಂಗ್ರೆಸ್ ನ ಹುತಾತ್ಮ ನಾಯಕಿ, ಮಾಜಿ ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿಯವರ ಬದಲು, ಜೀವಂತವಿರುವ ನಾಯಕಿ ಸೋನಿಯಾ ಗಾಂಧಿಯವರನ್ನು ಹುತಾತ್ಮ ಎಂದು ಹೇಳಿ ತಮಾಷೆಗೀಡಾದರು.

ಮತ್ತೊಂದು ಕಡೆಯಲ್ಲಿ ಶಾಸಕ ಜಮೀರ್ ಅಹಮದ್ ಅವರು ಶಾಸಕನ ನೆಲೆಯಲ್ಲಿ ತಮ್ಮ ಕ್ಷೇತ್ರದಲ್ಲಿ ಧ್ವಜಾರೋಹಣ ನಡೆಸಿ, ಶುಭ ಕೋರುವ ಸಂದರ್ಭದಲ್ಲಿ ನಾವೆಲ್ಲರೂ ಇಂದು 75ನೇ ಗಣರಾಜ್ಯೋತ್ಸವವನ್ನು ಆಚರಿಸುತ್ತಿದ್ದೇವೆ, ಮಂತ್ರಿಯಾಗಿ ತಮಗೆಲ್ಲರಿಗೂ ಶುಭಾಶಯಗಳನ್ನು ಕೋರುತ್ತಿದ್ದೇನೆ ಎಂದು ಹೇಳಿ ತಮಾಷೆಗಿಡಾದರು.

Ad Widget


Ad Widget


Ad Widget

Ad Widget


Ad Widget

ಒಟ್ಟಾರೆಯಾಗಿ ಇವೆಲ್ಲವನ್ನು ಅವಲೋಕಿಸಿದಾಗ ಕಾಂಗ್ರೆಸ್ ನಾಯಕರು ಇನ್ನೂ ಕೂಡಾ ನಿದ್ದೆಯಿಂದ ಎದ್ದಿರದ ಹಾಗೆ ಕಾಣಿಸುವುದಿಲ್ಲವೇ? ತಮ್ಮ ಪಕ್ಷದ ನಾಯಕರ, ತಮಗೆ ದೊರೆತ ದಿನದ ಬಗೆಗೆ ಅರಿವಿಲ್ಲದ ಇಂತಹ ನಾಯಕರಿಂದ ಜನಸೇವೆಯ ಮಾತು ನಂಬಲಾಸಾಧ್ಯ.ಮಾತಿನ ಭರದಲ್ಲಿ ಎಡವಿದ ನಾಯಕರಿಬ್ಬರ ಭಾಷಣದ ಭಾವ ಭಂಗಿಯು ಹಲವು ವಿಧಗಳಲ್ಲಿ ಇನ್ನು ಕೆಲ ದಿನಗಳ ಕಾಲ ಎಲ್ಲರ ವಾಟ್ಸಪ್ ಸ್ಟೇಟಸ್ ಗಳಲ್ಲಿ ರಾರಾಜಿಸುವುದಂತೂ ಗ್ಯಾರಂಟಿ.

Leave a Reply

Ad Widget >>^
Ad Widget
error: Content is protected !!
Scroll to Top
%d bloggers like this: