ಬೆಳ್ತಂಗಡಿ | 75ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಮಾಜಿ ಸೈನಿಕ ಗೋಪಾಲಕೃಷ್ಣ ಕಾಂಚೋಡು ಅವರಿಗೆ ಯುವಮೋರ್ಚಾ ಕಡೆಯಿಂದ ಸನ್ಮಾನ
ಬೆಳ್ತಂಗಡಿ: ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಈ ಸುಸಂದರ್ಭದಲ್ಲಿ ಬೆಳ್ತಂಗಡಿ ತಾಲೂಕಿನ ಮಾಜಿ ಯೋಧ ಗೋಪಾಲಕೃಷ್ಣ ಕಾಂಚೋಡು ಅವರಿಗೆ ಯುವ ಮೋರ್ಚಾ ಕಡೆಯಿಂದ ಸನ್ಮಾನ ಮಾಡಲಾಯಿತು.
ಯುವ ಮೋರ್ಚಾ ಕಡೆಯಿಂದ ಸುಧಾಕರ ಗೌಡ ಧರ್ಮಸ್ಥಳ, ವಿಶ್ವನಾಥ, ಗಂಗಾಧರ ಗೌಡ ಹಾಗೂ ಚಿತ್ರೇಶ್ ಅವರು ಗೋಪಾಲಕೃಷ್ಣ ಅವರ ಮನೆಗೆ ತೆರಳಿ ಸನ್ಮಾನ ಮಾಡಿದರು.
ಸುಳ್ಯ ತಾಲೂಕಿನ ಬಾಳಿಲ ಗ್ರಾಮದ ಕಾಂಚೋಡು ಎಂಬಲ್ಲಿ ದಿ| ಸುಬ್ರಾಯ ಭಟ್ ಕಾಂಚೋಡು ಮತ್ತು ಶ್ರೀಮತಿ ದೇವಮ್ಮ ದಂಪತಿಗಳ ಸುಪುತ್ರರಾಗಿ ಜನಿಸಿದ ಗೋಪಾಲಕೃಷ್ಣ ಕಾಂಚೋಡು ಅವರು 1991ರಲ್ಲಿ ಭಾರತೀಯ ಸಶಸ್ತ್ರ ಭೂ ಸೇನೆ (ತೋಪು ಖಾನ ವಿಭಾಗ-ಆರ್ಟಲ್ಲರಿ)ಯಲ್ಲಿ ತಮ್ಮ ಸೇವೆಯನ್ನು
ಆರಂಭಸಿ, ಸುಮಾರು 18 ವರ್ಷಗಳ ಕಾಲ ಯೋಧರಾಗಿ ಸೇವೆ ಸಲ್ಲಿಸಿದ್ದಾರೆ.
‘ಆಯಾ ಸಿದ್ಧಿ ತಪ್ಪೇ ಭವತಿ’ ಎಂಬ ಮಾತಿನಂತೆ ತಮ್ಮನ್ನು ತಾವು ಅರ್ಪಿಸಿಕೊಂಡು, ಕೋಟಿ ಕೋಟಿ ಪ್ರಜೆಗಳ ಮಾನ ಪ್ರಾಣ ರಕ್ಷಣೆ ಹಾಗೂ ತಾಯಿ ಭಾರತಿಯ ಗೌರವವನ್ನು ಉಳಿಸುವಂತಹ ಗುರುತರವಾದ ಹೊಣೆ ಹೊತ್ತು, ಹೈದರಬಾದ್ ಸೇನಾ ವಿಭಾಗದಿಂದ ಪ್ರಾರಂಭಗೊಂಡ ನಿಮ್ಮ ಸೈನಿಕ ಬದುಕು ಭಾರತ ಚೀನಾ ಗಡಿ (ನೇಪಾಳ), ಅರುಣಾಚಲ ಪ್ರದೇಶ, ಮಧ್ಯಪ್ರದೇಶದ ಸಾಗರ, ಜಮ್ಮು, ಗ್ವಾಲಿಯರ್ ಅಲ್ಲದೆ ಶ್ರೀಲಂಕಾದಲ್ಲಿ 2 ವರ್ಷ, ಪ. ಬಂಗಾಳ, ರಾಜಸ್ಥಾನ, ಮಹಾರಾಷ್ಟ್ರದ ನಾಸಿಕ್, ದೇವಲಾಲಿಯವರೆಗೆ ದೇಶದ ಉದ್ದಗಲಕ್ಕೂ ಸಂಚರಿಸಿದ್ದಾರೆ.
1997ರಲ್ಲಿ ನಿವೃತ್ತರಾಗುವವರೆಗೆ ಕಾಶ್ಮೀರದಲ್ಲಿ ಎರಗಳ ಗರ್ಜನೆಯಡಿಯಲ್ಲ ಕೆಲಸ ಮಾಡಿ, ಕಾಶ್ಮೀರದಲ್ಲಿ ವಿಶೇಷ ಭದ್ರತೆಗಾಗಿ ಭಾರತ ಸರಕಾರದಿಂದ ಸನ್ಮಾನ್ಯ ರಾಷ್ಟ್ರಪತಿಯಿಂದ ಬೆಳ್ಳಿ ಪದಕ ಪಡೆದ ಧನ್ಯ ಸೇನಾನಿಯಾಗಿದ್ದಾರೆ.
ಪ್ರಸಕ್ತ ಉಜಿರೆಯಲ್ಲಿ ವಾಸ್ತವ್ಯವಿದ್ದು, ರವಿ ಟ್ರೇಡರ್ ಎಂಬ ಸಂಸ್ಥೆಯ ಯಜಮಾನರಾಗಿದ್ದಾರೆ. ಧರ್ಮಪತ್ನಿ ಶ್ರೀಮತಿ ಸುಲೋಚನೆ ಮತ್ತು ಪುತ್ರಿ ಕು. ದೀಪ್ತಿ ಮತ್ತು ಪುತ್ರ ಸುದಿನ ಕಾಂಚೋಡು ಅವರೊಂದಿಗಿನ ಸಂತೃಪ್ತ ಕುಟುಂಬದಲ್ಲಿ ಹಾಯಾಗಿ ಬಾಳಲಿ ಎಂಬುದು ಎಲ್ಲರ ಆಶಯ.