ಬೆಳ್ತಂಗಡಿ | ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಗೆ ಸೇರ್ಪಡೆಯಾದ ಶಾಸಕ ಹರೀಶ್ ಪೂಂಜಾ ಆಯೋಜಿಸಿದ ಆನ್ ಲೈನ್ ದೇಶಭಕ್ತಿ ಗೀತೆ ಸ್ಪರ್ಧೆ

ಬೆಳ್ತಂಗಡಿ: 75ನೇ ಸ್ವಾತಂತ್ರ್ಯ ದಿನದ ಅಮೃತ ಮಹೋತ್ಸವದ ಅಂಗವಾಗಿ ಶಾಸಕ ಹರೀಶ್ ಪೂಂಜ ಅವರ ನೇತೃತ್ವದಲ್ಲಿ ಆನ್‌ಲೈನ್‌ನಲ್ಲಿ ಹಮ್ಮಿಕೊಂಡಿದ್ದ ದೇಶಭಕ್ತಿ ಗೀತೆಯಲ್ಲಿ ಬೆಳ್ತಂಗಡಿ ತಾಲೂಕಿನ 3500 ಮಂದಿಯಲ್ಲದೆ ಹೊರ ತಾಲೂಕು, ಜಿಲ್ಲೆ, ರಾಜ್ಯ, ದೇಶ, ವಿದೇಶಗಳಿಂದ ಸುಮಾರು 5 ಸಾವಿರ ಮಂದಿ ಭಾಗವಹಿಸಿದ್ದು, ಇದು ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಪುಟ ಸೇರಿದೆ.

ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಇದರ ಏಷ್ಯಾದ ಮುಖ್ಯಸ್ಥ ಡಾ. ಮನಿಷ್ ವೈಷ್ಣವಿ ಡೆಲ್ಲಿ ಅವರು ಶಾಸಕ ಹರೀಶ್ ಪೂಂಜ ಅವರಿಗೆ ಸರ್ಟೀಫೀಕೆಟ್‌ನ್ನು ಹಸ್ತಾಂತರಿಸಿದರು. ಸರ್ಟಿಫೀಕೆಟ್ ಹಸ್ತಾಂತರ ಕಾರ್ಯಕ್ರಮವು ಇಂದು ಬೆಳ್ತಂಗಡಿ ಎಸ್.ಡಿ.ಎಂ ಸಭಾಂಗಣದಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು, ಬೆಳ್ತಂಗಡಿ ತಾಲೂಕು ಅಲ್ಲದೆ, ದೇಶ, ವಿದೇಶಗಳಿಂದ ಸುಮಾರು 5 ಸಾವಿರಕ್ಕೂ ಮಿಕ್ಕಿ ಜನರು ಭಾಗವಹಿಸಿ, ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಆಗಿದೆ. ಇದು ನನ್ನ ಒಬ್ಬನ ಸಾಧನೆಯಲ್ಲ, ಇದು ತಾಲೂಕಿನ ಜನರ ಸಾಧನೆಯಾಗಿದೆ ಎಂದು ಹೇಳಿದರು.

ಡಾ. ಮನೀಷ್ ಅವರು ಮಾತನಾಡಿ, ನಾನು ಎರಡನೇ ಬಾರಿಗೆ ಬೆಳ್ತಂಗಡಿ ತಾಲೂಕಿಗೆ ಆಗಮಿಸುತ್ತಿದ್ದೇನೆ. ಶಾಸಕರ ನೇತೃತ್ವದಲ್ಲಿ ನಡೆದ ಆನ್‌ಲೈನ್ ದೇಶ ಭಕ್ತಿ ಗೀತೆ ಗೋಲ್ಡನ್ ಬುಕ್ ಆಫ್ ರೆಕಾರ್ಡ್ ಸೇರಿದೆ. ಈ ಹಿಂದೆ 1 ಸಾವಿರ ಮಂದಿ ಹಾಡಿದ ದೇಶ ಭಕ್ತಿ ಗೀತೆ ವರ್ಲ್ಡ್ ರೆಕಾರ್ಡ್ ಆಗಿತ್ತು. ಈ ಬಾರಿ ಸುಮಾರು 3 ಸಾವಿರ ಮಂದಿ ಹಾಡಿರುವುದು ಈ ದಾಖಲೆಯನ್ನು ನಿರ್ಮಿಸಿದೆ ಎಂದರು.

ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯತು ಅಧ್ಯಕ್ಷೆ ರಜನಿ ಕುಡ್ವ, ಉಪಾಧ್ಯಕ್ಷ ಜಯಾನಂದ ಗೌಡ, ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು. ಪ್ರಶಾಂತ ಶೆಟ್ಟಿ ಸ್ವಾಗತಿಸಿದರು. ಸ್ಮಿತೇಶ್ ಎಸ್. ಬಾರ್ಯ ಕಾರ್ಯಕ್ರಮ ನಿರೂಪಿಸಿ, ಅನಿಷ್ ಅಮೀನ್ ಧನ್ಯವಾದವಿತ್ತರು.

Leave A Reply

Your email address will not be published.