ಅಜ್ಜಾವರ : ಮೇದಿನಡ್ಕದಲ್ಲಿ ಸ್ವಾತಂತ್ರ್ಯ ದಿನಾಚರಣೆ

ಅಜ್ಜಾವರ, ಮೇದಿನಡ್ಕದಲಿ 75ನೇ ಸ್ವತಂತ್ರ ಮಹೋತ್ಸವದ ಅಂಗವಾಗಿ ಧ್ವಜಾರೋಹಣ ಕಾರ್ಯಕ್ರಮ ನಡೆಯಿತು, ಮೇದಿನಡ್ಕದ ಹಿರಿಯರಾದ ಶ್ರೀ ಸೆಲ್ವರತ್ನಂ ಧ್ವಜಾರೋಹಣ ನೆರವೇರಿಸಿದರು, ಈ ಸಂದರ್ಭದಲ್ಲಿ ಸ್ಥಳೀಯ ಅಂಗನವಾಡಿ ಕಾರ್ಯಕರ್ತೆ ಶಿವಪಾಕ್ಯಂ, ಸುಳ್ಯ ರೆಪ್ಕೋ ಬ್ಯಾಂಕ್ ನಿರ್ದೇಶಕರಾದ ಶ್ರೀ ದಯಾಳ್ ಮೇದಿನಡ್ಕ, ಸ್ಥಳೀಯರಾದ ಕಂದಯ್ಯ,ಸತ್ಯಶೀಲನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸುಳ್ಯ ರೆಪ್ಕೋ ಬ್ಯಾಂಕ್ ನಿರ್ದೇಶಕ ದಯಾಳ್ ಮೇದಿನಡ್ಕ ಮುಖ್ಯ ಅತಿಥಿ ನೆಲೆಯಲ್ಲಿ ದೇಶವನ್ನು ಉದ್ದೇಶಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ಮೇದಿನಡ್ಕದ ಎಲ್ಲಾ ಸಾರ್ವಜನಿಕ ಬಂಧುಗಳು ಶಾಲಾ ವಿದ್ಯಾರ್ಥಿ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು, ರಮೇಶ್ ಮೇದಿನಡ್ಕ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

Ad Widget
Ad Widget

Ad Widget

Ad Widget

Leave a Reply

error: Content is protected !!
Scroll to Top
%d bloggers like this: