ನೂಜಿಬಾಳ್ತಿಲ : ಮೀನು ಮಾರುಕಟ್ಟೆ ಏಲಂ : ದಾಖಲೆ ಮೊತ್ತಕ್ಕೆ ಹರಾಜು

ಹಸಿ ಮೀನಿನ ಏಲಂ ಪ್ರಕ್ರಿಯೆ ಕಡಬ ತಾಲೂಕಿನ ನೂಜಿಬಾಳ್ತಿಲ ಗ್ರಾ.ಪಂ ವ್ಯಾಪ್ತಿಯಲ್ಲಿ ನಡೆದಿದ್ದು, ಅತೀ ಹೆಚ್ಚಿನ ಸಂಖ್ಯೆಯಲ್ಲಿ ಹರಾಜು ಖಾಯಂ ಆಗುವ ಮೂಲಕ ದಾಖಲೆ ನಿರ್ಮಿಸಿದೆ.

ಮುಂದಿನ ಒಂದು ವರ್ಷದ ಅವಧಿಗೆ ಹಸಿ ಮೀನು ವರಿ ವಸೂಲಿ ಹಕ್ಕು ಏಲಂ ಪ್ರಕ್ರಿಯೆ ಆಗಸ್ಟ್ ೧೨ ರಂದು ನಡೆದಿದೆ.

ಕಳೆದ ಬಾರಿಯ ಹರಾಜು ಪ್ರಕ್ರಿಯೆಯಲ್ಲಿ 1,79,000 ಮೊತ್ತಕ್ಕೆ ಹರಾಜು ಖಾಯಂ ಆಗುವ ಮೂಲಕ ದಾಖಲೆ ಪಡೆದಿತ್ತು.ಇದೀಗ ಈ ಬಾರಿಯ ಏಲಂನಲ್ಲಿ ಅದಕ್ಕೂ ಮೀರಿ ಹರಾಜಾಗಿ ಮತ್ತೊಮ್ಮೆ ದಾಖಲೆ ನಿರ್ಮಿಸಿದೆ.

Ad Widget
Ad Widget

Ad Widget

Ad Widget

ಗ್ರಾಮ ಪಂಚಾಯತ್ ಕಛೇರಿಯಲ್ಲಿ ನಡೆದ ಈ ಹಸಿ ಮೀನಿನ ಹರಾಜು ಪ್ರಕ್ರಿಯೆಯಲ್ಲಿ ಹಲವರು ಭಾಗವಹಿಸಿದ್ದು, ಕೊನೆಯಲ್ಲಿ ಮೊಹಮ್ಮದ್ ಷರೀಫ್ (ಮಮ್ಮು) ರವರು ರೂ. 2,08, 500 ರವರೆ ಹರಾಜು ಕೂಗಿ ಮುಂದಿನ ಒಂದು ವರ್ಷದ ಅವಧಿಗೆ ಹಸಿ ಮೀನು ವರಿ ವಸೂಲಿ ಹಕ್ಕನ್ನು ತಮ್ಮದಾಗಿಸಿಕೊಂಡಿದ್ದಾರೆ.

ಗ್ರಾ.ಪಂ. ಅಧ್ಯಕ್ಷೆ ಗಂಗಮ್ಮ ಕಲ್ಲುಗುಡ್ಡೆ ಅಧ್ಯಕ್ಷತೆಯಲ್ಲಿ ಈ ಏಲಂ ಪ್ರಕ್ರಿಯೆ ನಡೆದಿದ್ದು ಪಿಡಿಒ ಆನಂದ.ಎ ನಿರ್ವಹಿಸಿದರು. ಸಾರ್ವಜನಿಕರು ,ಆಸಕ್ತ ಬಿಡ್ಡುದಾರರು ,ಗ್ರಾ.ಪಂ ಸದಸ್ಯರು ಗ್ರಾ.ಪಂ ಸಿಬ್ಬಂದಿಗಳು ಹಾಜರಿದ್ದರು.

Leave a Reply

error: Content is protected !!
Scroll to Top
%d bloggers like this: