ನಾಳೆ 75ನೇ ಸ್ವಾತಂತ್ರ್ಯೋತ್ಸವ ಸಂಭ್ರಮ | ರಾಷ್ಟ್ರಧ್ವಜ ಹಾರಿಸುವ ನಿಯಮಗಳನ್ನು ತಿಳಿದು, ರಾಷ್ರಧ್ವಜದ ಗೌರವ ಕಾಪಾಡೋಣ

ನಾಳೆ ನಮ್ಮ ದೇಶ 75ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಆಚರಿಸುತ್ತಿದೆ. ಈ ಶುಭ ಗಳಿಗೆಯಲ್ಲಿ ನಾವು ರಾಷ್ಟ್ರ ಧ್ವಜದ ಬಗ್ಗೆ ಒಂದಷ್ಟು ಮಾಹಿತಿಗಳನ್ನು ತಿಳಿದುಕೊಳ್ಳೋಣ.

ರಾಷ್ಟ್ರಧ್ವಜವನ್ನು ಹಾರಿಸುವ ನಿಯಮಗಳು :

ದೇಶದ ಅಸ್ಮಿತೆಯ ಪ್ರತೀಕವಾಗಿರುವ ತ್ರಿವರ್ಣ ಧ್ವಜವನ್ನು ರಾಷ್ಟ್ರೀಯ ಹಬ್ಬ ಮತ್ತು ಇತರ ಮಹತ್ವಪೂರ್ಣ ದಿನಗಳಲ್ಲಿ ಗೌರವಯುತವಾಗಿ ಹಾರಿಸಲಾಗುತ್ತದೆ. ರಾಷ್ಟ್ರಧ್ವಜವನ್ನು ಹಾರಿಸುವಾಗ ಯಾವುದೇ ರೀತಿಯಲ್ಲಿ ಅದರ ಅವಮಾನವಾಗಬಾರದೆಂದು ಕೆಲವು ನಿಯಮಗಳನ್ನು ಮಾಡಲಾಗಿದೆ. ಕೇಂದ್ರೀಯ ಗೃಹಮಂತ್ರಾಲಯದ ವತಿಯಿಂದ ಭಾರತೀಯ ರಾಷ್ಟ್ರಧ್ವಜ ಸಂಹಿತೆ ತಯಾರಿಸಲಾಗಿದೆ. ರಾಷ್ಟ್ರೀಯ ಧ್ವಜದ ಬಗ್ಗೆ ಸಂಹಿತೆ ತಯಾರಿಸಿದ್ದರ ಬಗ್ಗೆ ಕಡಿಮೆ ನಾಗರಿಕರಿಗೆ ಮಾಹಿತಿಯಿರುತ್ತದೆ. ಇದರಿಂದಾಗಿ ಅನೇಕ ತಪ್ಪುಗಳಾಗುತ್ತವೆ. ಆ ತಪ್ಪುಗಳಾಗಬಾರದೆಂದು ಮುಂದಿನ ಮಾಹಿತಿಯನ್ನು ತಿಳಿದುಕೊಳ್ಳೋಣ.

Ad Widget


Ad Widget


Ad Widget

Ad Widget


Ad Widget

ಧ್ವಜ ಸಂಹಿತೆಗನುಸಾರ ಮಹತ್ವದ ಕಾರ್ಯಕ್ರಮಗಳು, ಸಾಂಸ್ಕ್ರತಿಕ ಮತ್ತು ಮೈದಾನದ ಆಟಗಳ ಸಮಯದಲ್ಲಿ ಜಾಗತಿಕ ಕಾಗದದ ಧ್ವಜಗಳನ್ನು ಕೈಯಲ್ಲಿ ಹಿಡಿದು ಹಾರಿಸುವುದು ಕಂಡುಬರುತ್ತದೆ. ಆದರೆ ಕಾರ್ಯಕ್ರಮ ಮುಗಿದ ನಂತರ ಅದೇ ಧ್ವಜಗಳು ನೆಲದ ಮೇಲೆ ಎಲ್ಲೆಡೆ ಬಿದ್ದಿರುವುದು ಕಾಣುತ್ತವೆ. ಇದನ್ನು ತಪ್ಪಿಸಬೇಕು. ಪ್ಲಾಸ್ಟಿಕ್ ನಿಂದ ತಯಾರಿಸಿದ ಧ್ವಜವನ್ನು ಬಳಸಬಾರದು. ಯಾವಾಗ ರಾಷ್ಟ್ರೀಯ ಧ್ವಜವನ್ನು ಹಾರಿಸಲಾಗುತ್ತದೆಯೋ ಆಗ ಅದಕ್ಕೆ ಸನ್ಮಾನಪೂರ್ವಕವಾಗಿ ಉಚ್ಛ ಸ್ಥಾನವನ್ನು ನೀಡಬೇಕು. ಅದು ಎಲ್ಲರಿಗೂ ಕಾಣಿಸುವ ರೀತಿ, ಸ್ಥಳವನ್ನು ಆರಿಸಿ ಆ ಧ್ವಜವನ್ನು ಏರಿಸಬೇಕು.

ಸರಕಾರಿ ಕಟ್ಟಡಗಳಲ್ಲಿ ರಾಷ್ಟ್ರಧ್ವಜವನ್ನು ಹಾರಿಸುವ ರೂಢಿಯಿದೆ. ರವಿವಾರ ಮತ್ತು ಇತರ ರಜೆಗಳ ದಿನದಂದು ಕೂಡಾ ಸೂರ್ಯೋದಯದಿಂದ ಹಿಡಿದು ಸೂರ್ಯಾಸ್ಥದವರೆಗೆ ಧ್ವಜ ಹಾರಿಸಲೇಬೇಕು. ಪ್ರತಿಕೂಲ ಹವಾಮಾನದಲ್ಲಿಯೂ ಧ್ವಜ ಹಾರಿಸುವುದು ಅವಶ್ಯಕವಾಗಿದೆ. ಸಂಹಿತೆಗನುಸಾರ ರಾಷ್ಟ್ರಧ್ವಜವನ್ನು ಯಾವಾಗಲೂ ಸ್ಪೂರ್ತಿಯಿಂದ ಏರಿಸಬೇಕು ಮತ್ತು ನಿಧಾನವಾಗಿ ಕೆಳಗಿಳಿಸಬೇಕು. ಧ್ವಜವನ್ನು ಏರಿಸುವಾಗ ಮತ್ತು ಕೆಳಗಿಳಿಸುವಾಗ ತುತ್ತೂರಿಯನ್ನು ಊದಲೇಬೇಕು. ಧ್ವಜ ಯಾವುದೇ ಕಿಟಕಿ, ಬಾಲ್ಕನಿ ಅಥವಾ ಭಾಗಗಳಲ್ಲಿ ಅಡ್ಡವಾಗಿ ಹಾರಿಸುವಾಗ ಧ್ವಜದಲ್ಲಿರುವ ಕೇಸರಿ ಬಣ್ಣದ ಪಟ್ಟಿಯು ಮೇಲಿರಬೇಕು.

ರಾಷ್ಟ್ರಧ್ವಜವನ್ನು ಸಭೆಯಲ್ಲಿ ಹಾರಿಸುವಾಗ ಮಾನ್ಯರ ಮುಖವು ಉಪಸ್ಥಿತರ ದಿಕ್ಕಿನಲ್ಲಿ ಹಾಗೂ ಧ್ವಜವು ಅವರ ಎಡಬದಿಯಲ್ಲಿ ಇರಬೇಕು ಅಥವಾ ಧ್ವಜವು ಗೋಡೆಯ ಮೇಲಿದ್ದರೆ ಮಾನ್ಯರ ಹಿಂದುಗಡೆ ಹಾಗೂ ಗೋಡೆಯ ಮೇಲೆ ಅಡ್ಡವಾಗಿ ಹಾರಿಸಬೇಕು. ಎಲ್ಲಿಯಾದರೂ ಮೂರ್ತಿಯ ಅನಾವರಣವಿದ್ದರೆ ಧ್ವಜವನ್ನು ಸನ್ಮಾನಪೂರ್ವಕವಾಗಿ ಬೇರೆ ಪದ್ಧತಿಯಿಂದ ಹಾರಿಸಬೇಕು. ವಾಹನದ ಮೇಲೆ ಧ್ವಜವನ್ನು ಹಾರಿಸುವಾಗ ವಾಹನದ ಬಾನೇಟಿನ ಮೇಲೆ ಧ್ವಜವನ್ನು ಹಾರಿಸಬೇಕು. ಸಂಹಿತೆಯಲ್ಲಿ ನೀಡಿದಂತೆ, ರಾಷ್ಟ್ರಧ್ವಜವು ಯಾವುದೇ ಮೆರವಣಿಗೆಯ ಅಥವಾ ಪರೇಡಿನ ವೇಳೆ ವ್ಯಕ್ತಿಯ ಬಲಗೈಯಲ್ಲಿ ಇರಬೇಕು. ಇತರ ಧ್ವಜಗಳಿದ್ದರೆ ರಾಷ್ಟ್ರಧ್ವಜವು ಮಧ್ಯದಲ್ಲಿರಬೇಕು. ಹರಿದುಹೋದ, ಮುದ್ದೆಯಾದ ಧ್ವಜವನ್ನು ಹಾರಿಸಬಾರದು.

ರಾಷ್ಟ್ರಧ್ವಜವನ್ನು ವಕ್ತಾರರ ವ್ಯಾಸಪೀಠವನ್ನು ಮುಚ್ಚಲು ಅಥವಾ ಅಲಂಕಾರಕ್ಕಾಗಿ ಉಪಯೋಗಿಸಬಾರದು. ಕೇಸರಿ ಪಟ್ಟಿಯು ಕೆಳಗೆ ಬರುವಂತೆ ಧ್ವಜಾರೋಹಣ ಮಾಡಬಾರದು. ಧ್ವಜಾರೋಹಣ ಮಾಡುವಾಗ ಅದು ಹರಿಯದಂತೆ ಕಟ್ಟಬೇಕು. ರಾಜಕೀಯ ವ್ಯಕ್ತಿ, ಕೇಂದ್ರೀಯ ಸೈನ್ಯ ದಳಕ್ಕೆ ಸಂಬಂಧಿತ ವ್ಯಕ್ತಿಯ ಅಂತಿಮ ಯಾತ್ರೆಯ ಹೊರತು ಬೇರೆ ಯಾವ ಸಂದರ್ಭದಲ್ಲಿಯೂ ರಾಷ್ಟ್ರಧ್ವಜವನ್ನು ಉಪಯೋಗಿಸಬಾರದು. ಧ್ವಜವನ್ನು ಯಾವುದೇ ವಾಹನ, ರೈಲು, ಹಡಗಿನ ಮೇಲೆ ಹಚ್ಚಲು ಸಾಧ್ಯವಿಲ್ಲ. ಧ್ವಜವನ್ನು ಮನೆಯ ಪರದೆಗಾಗಿ ಉಪಯೋಗಿಸಬಾರದು. ಧ್ವಜದ ಬಣ್ಣದ ಬಟ್ಟೆಗಳನ್ನು ಧರಿಸಬಾರದು. ಅಂತೆಯೇ ರಾಷ್ಟ್ರಧ್ವಜವನ್ನು ಗಾದಿ, ಕರವಸ್ತ್ರದ ಮೇಲೆ ಬಿಡಿಸಬಾರದು. ಧ್ವಜದ ಮೇಲೆ ಯಾವುದೇ ಬರವಣಿಗೆ ಇರಬಾರದು ಹಾಗೂ ಯಾವುದೇ ಜಾಹಿರಾತನ್ನು ಹಾಕಬಾರದು. ಧ್ವಜಾರೋಹಣ ಮಾಡುವ ಕಂಬದ ಮೇಲೆಯೂ ಯಾವುದೇ ಜಾಹಿರಾತನ್ನು ಹಾಕಬಾರದು.

ದೇಶವು ಸ್ವತಂತ್ರವಾಗಲು ಅನೇಕ ಕ್ರಾಂತಿಕಾರರು, ಸ್ವತಂತ್ರ ಹೋರಾಟಗಾರರು ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದ್ದಾರೆ. ಆದ್ದರಿಂದ ರಾಷ್ಟ್ರಧ್ವಜದ ಗೌರವ ಕಾಪಾಡುವುದು ನಮ್ಮ ನಿಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ.

📝 ಶ್ರೀ ಚಂದ್ರ ಮೊಗೇರ್

Leave a Reply

Ad Widget >>^
Ad Widget
error: Content is protected !!
Scroll to Top
%d bloggers like this: