ಬೆಳ್ತಂಗಡಿ | ಬೆಳಾಲಿನ ಯುವತಿ ಅನಾರೋಗ್ಯದಿಂದ ನಿಧನ

ಬೆಳ್ತಂಗಡಿ : ಯುವತಿಯೋರ್ವಳು ಅನಾರೋಗ್ಯದಿಂದ ನಿಧನ ಹೊಂದಿದ ಘಟನೆ ಬೆಳ್ತಂಗಡಿ ತಾಲೂಕಿನ ಬೆಳಾಲು ಗ್ರಾಮದಲ್ಲಿ ನಡೆದಿದೆ.

 

ಬೆಳಾಲು ಗ್ರಾಮದ ಕೊಲ್ಪಾಡಿ ಬಳಿಯ ತಿಮರಡ್ಡ ನಿವಾಸಿ ಯಶೋಧರ ಗೌಡ ಅವರ ಪುತ್ರಿ ಪ್ರತಿಕ್ಷಾ(18) ಬಲಿಯಾದ ಯುವತಿ.

2 ದಿನಗಳ ಹಿಂದೆ ಗಂಭೀರ ಸ್ಥಿತಿ ತಲುಪಿದ ಆಕೆಯನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಇಂದು ಸಂಜೆ ವೇಳೆಗೆ ಆಕೆ ಮೃತಪಟ್ಟಿದ್ದಾಳೆ ಎಂದು ವೈದ್ಯರು ತಿಳಿಸಿದ್ದಾರೆ ಎಂದು ತಿಳಿದುಬಂದಿದೆ.

Leave A Reply

Your email address will not be published.