ಸುಬ್ರಹ್ಮಣ್ಯ : ಕಾಮುಕ ಶಿಕ್ಷಕ ಗುರುರಾಜ್ ವಿರುದ್ದ ಊರವರ ಪ್ರತಿಭಟನೆ | ಕಾಮುಕ ಶಿಕ್ಷಕ ಮತ್ತೆ ಸುಬ್ರಹ್ಮಣ್ಯಕ್ಕೆ ಕಾಲಿಡಬಾರದೆಂದು ಒಕ್ಕೊರಲ ಆಗ್ರಹ
ಕಡಬ : ಶಾಲಾ ವಿದ್ಯಾರ್ಥಿಯನ್ನು ಅತ್ಯಾಚಾರ ಗೈದ ಆರೋಪ ಹೊತ್ತಿರುವ ಶಿಕ್ಷಕ ಗುರುರಾಜ್ ವಿರುದ್ಧ ಬುಧವಾರ ಕಡಬ ತಾಲೂಕಿನ ಸುಬ್ರಹ್ಮಣ್ಯದ ಎಸ್ ಎಸ್ ಪಿ ಯು ಕಾಲೇಜು ಆವರಣದಲ್ಲಿ ಹಿರಿಯ ವಿದ್ಯಾರ್ಥಿ ಸಂಘದ ವತಿಯಿಂದ ಸಾರ್ವಜನಿಕ ಪ್ರತಿಭಟನೆ ನಡೆಯಿತು.
ಕಾಮುಕ ಶಿಕ್ಷಕ ಮತ್ತೆ ಸುಬ್ರಹ್ಮಣ್ಯಕ್ಕೆ ಕಾಲಿಡಬಾರದು, ಅವನನ್ನು ಶಾಶ್ವತವಾಗಿ ಕೆಲಸದಿಂದ ತೆಗೆಯುವಂತೆ ಆಗ್ರಹ ಕೇಳಿಬಂದಿತು.
ಇನ್ನು ಮುಂದೆ ಆ ಕಾಮುಕ ಶಿಕ್ಷಕ ಈ ಸಂಸ್ಥೆಗೆ ಬರಬಾರದು. ನಮ್ಮ ಮೈದಾನಕ್ಕೆ ಬಂದರೆ ನಾವು ಸುಮ್ಮನಿರುವುದಿಲ್ಲ. ಇಗಾಗಲೆ ಆಡಳಿತ ಮಂಡಳಿ ಅಮಾನತು ಮಾಡಿದ್ದಾಗಿ ಗೊತ್ತಾಗಿದೆ. ಆದರೆ ಅವನು ಮತ್ತೆ ಆ ವೃತ್ತಿಯಲ್ಲಿ ಇಲ್ಲಿ ಇರಬಾರದು ಎಂದು ರಾಜೇಶ್ ಎನ್ ಎಸ್ ಹೇಳಿದರು.
ನೀವೆಲ್ಲಾ ಪುರುಷರು ಇಲ್ಲಿ ಇವತ್ತು ಇಲ್ಲಿ ಇದ್ದೀರಂದ್ರೆ ಇವತ್ತು ನಿಮ್ಮ ತಾಯಿ, ಅಕ್ಕ, ತಂಗಿ ಮನೆಯಲ್ಲಿದ್ದು ಕಳುಹಿಸಿದ್ದಾರೆ. ಗುರುರಾಜ್ ನ ಮೊದಲನೇ ಹೆಂಡತಿ ಮರಣ ಹೊಂದಿದಲ್ಲಿಂದ ತನಿಖೆ ನಡೆಸಬೇಕು. ದೇವಸ್ಥಾನದ ಆಡಳಿತ ಮಂಡಳಿ ಗುರುರಾಜ್ ನ್ನು ಅಮಾನತು ಮಾಡಿರುವುದು ಒಳ್ಳೆಯ ವಿಚಾರ ಅವನಿಗೆ ಎಲ್ಲೂ ಕೆಲಸ ಸಿಗದಂತೆ ನೋಡಿಕೊಳ್ಳಬೇಕು ಎಂದು ಪುಲಸ್ಯ ರೈ ಹೇಳಿದರು.
ನ್ಯಾಯಾಂಗ ವ್ಯವಸ್ಥೆ ಬಗ್ಗೆ ಸಂಶಯ ವ್ಯಕ್ತಪಡಿಸುವ ಕಾಲ ಬಂದಿದೆ. ಮೂರೇ ದಿವಸದಲ್ಲಿ ಆರೋಪಿ ಹೊರ ಬಂದಿರುವ ವಿಚಾರ ದಿಗ್ಬ್ರಮೆ ಮೂಡಿದೆ. ಗಾಂದಿಯ ರಾಮರಾಜ್ಯ ಕನಸ್ಸಿಗೆ ಕಳಂಕ ತಂದಿದ್ದಾರೆ ಎಂದು ಸುಧೀರ್ ಶೆಟ್ಟಿ ಹೇಳಿದರು.
ಆಡಳಿತ ಮಂಡಳಿ ಅಮಾನತು ಮಾಡಬೇಕು. ತೆಗೆದು ಹಾಕಬೇಕು. ಇಂತಹ ವಿಚಾರದಲ್ಲಿ ಇನ್ನಷ್ಟು ಜನ ತೊಂದರೆ ಅನುಭವಿಸಿದ್ದರೆ ನನ್ನತ್ರ ಬನ್ನಿ ನಿಮ್ಮ ಸಂಪೂರ್ಣ ವೆಚ್ಚ ಭರಸಿ ಉಚಿತವಾಗಿ ಕಾನೂನಿನಲ್ಲಿ ನ್ಯಾಯ ಒದಗಿಸುತ್ತೇನೆ.
ಎಂದು ಅಶೋಕ್ ನೆಕ್ರಾಜೆ ಹೇಳಿದರು.
ಇನ್ನು ಮುಂದೆ ಆ ಕಾಮುಕ ಶಿಕ್ಷಕ ಈ ಸಂಸ್ಥೆಗೆ ಬರಬಾರದು. ನಮ್ಮ ಮೈದಾನಕ್ಕೆ ಬರಬಾರದು. ಬಂದರೆ ನಾವು ಸುಮ್ಮನಿರುವುದಿಲ್ಲ.ಎಸ್ಟೇಟ್ ಇಗಾಗಲೆ ಅಮಾನತು ಮಾಡಿದ್ದಾರೆ . ಆದರೆ ಅವರ ಮತ್ತೆ ಆ ವೃತ್ತಿಯಲ್ಲಿ ಇರಬಾರದು ಎಂದು ರಾಜೇಶ್ ಎನ್ ಎಸ್ ಆಕ್ಷೇಪಿಸಿದರು.
ನೀವೆಲ್ಲಾ ಪುರುಷರ ಇಲ್ಲಿ ಇವತ್ತು ಇಲ್ಲಿ ಇದ್ದೀರಂದ್ರೆ ಇವತ್ತು ನಿಮ್ಮ ತಾಯಿ, ಅಕ್ಕ ತಂಗಿ ಮನೆಯಲ್ಲಿದ್ದು ಕಳುಹಿಸಿದ್ದಾರೆ. ಗುರುರಾಜ್ ನ ಮೊದಲನೇ ಹೆಂಡತಿ ಮರಣ ಹೊಂದಿದಲ್ಲಿಂದ ತನಿಖೆ ನಡೆಸಬೇಕು. ದೇವಸ್ಥಾನದ ಆಡಳಿತ ಮಂಡಳಿ ಗುರುರಾಜ್ ನ್ನು ಅಮಾನತು ಮಾಡಿರುವುದು ಒಳ್ಳೆಯ ವಿಚಾರ ಅವನಿಗೆ ಎಲ್ಲೂ ಕೆಲಸ ಸಿಗದಂತೆ ನೋಡಿಕೊಳ್ಳಬೇಕು ಎಂದು ಪುತ್ತೂರು ತಾ.ಪಂ.ಮಾಜಿ ಸದಸ್ಯೆ ಪುಲಸ್ಯ ರೈ ಹೇಳಿದರು.
ನ್ಯಾಯಾಂಗ ವ್ಯವಸ್ಥೆ ಬಗ್ಗೆ ಸಂಶಯ ವ್ಯಕ್ತಪಡಿಸುವ ಕಾಲ ಬಂದಿದೆ. ಮೂರೇ ದಿವಸದಲ್ಲಿ ಆರೋಪಿ ಹೊರ ಬಂದಿರುವ ವಿಚಾರ ದಿಗ್ಬ್ರಮೆ ಮೂಡಿದೆ. ಗಾಂದಿಯ ರಾಮರಜ್ಯ ಕನಸ್ಸಿಗೆ ಕಳಂಕ ತಂದಿದ್ದಾರೆ ಎಂದು ಸುಧೀರ್ ಶೆಟ್ಟಿ ಆಕ್ರೋಶ ವ್ಯಕ್ತಪಡಿಸಿದರು.
ಫೋಕ್ಸೋ ಕಾನೂನು ಇರುವುದೇ ಇಂತಹ ದೌರ್ಜನ್ಯಕ್ಕೆ ನ್ಯಾಯ ಒದಗಿಸಲು. ಇದು ಭಾರತ ದೇಶಕ್ಕೆ ಮಾಡಿದ ಅವಮಾನ. ನಮ್ಮ ಮನೆಯ ಹೆಣ್ಣುಮಕ್ಕಳಿಗೆ ಹೀಗಾಗುತ್ತೇ ಅಂದರೆ ನಾವು ಕಾನುನು ಮುರಿಯ ಬೇಕಾಗುತ್ತದೆ. ಈ ದೌರ್ಜನ್ಯ ಭಯೋತ್ಪಾದನೆ ಕ್ಕಿಂತ ಹೀನ ಕೃತ್ಯ. ಇಂತವನಿಗೆ ದೊಣ್ಣೆಯ ಪೆಟ್ಟು ಮದ್ದು ಯಾಕಂದ್ರೆ ಖಾಸಗಿ ಸಂಸ್ಥೆಗಳಲ್ಲಿ ಇಂತಹ ಪ್ರಸಂಗಗಳಲ್ಲಿ ನಡೆಯುವುದಿಲ್ಲ ಎಂದು ಸಾಮಾಜಿಕ ಕಾರ್ಯಕರ್ತ ಕಿಶೋರ್ ಶಿರಾಡಿ ನುಡಿದರು.
ಜೀವನದ ದಾರಿ ತೋರಿಸಬೇಕಾದವರು ಈ ರೀತಿ ಮಾಡಿದ್ದಾರೆ. ಅಂದ್ರೆ ತುಂಭಾ ಬೇಸರದ ವಿಚಾರ. ಇಂತವರು ಇರುವಾಗ ಮೊದಲೇ ತಿಳಿಸಿ ಇಂತಹ ಘಟನೆ ಆಗದಂತೆ ನೋಡಿಕೊಳ್ಳೊಣ ಎಂದು ಕೃಷ್ಣಮೂರ್ತಿ ಭಟ್,ಇದು ದುರಂತ, ಹೋರಾಟ ನಿರಂತರವಾಗಿರಲಿ. ಆ ಶಿಕ್ಷಕ ಮತ್ತೆ ಇಲ್ಲಿಗೆ ಬರಬಾರದು. ಮುಂದೇನಾದ್ರು ಈ ಶಾಲೆಗೆ ಬಂದ್ರೆ ಮಕ್ಕಳು ಅವರ ತರಗತಿಗೆ ಬಹಿಷ್ಕಾರ ಮಾಡಬೇಕಾಗುತ್ತದೆ ಎಂದು ಸುಬ್ರಹ್ಮಣ್ಯ ಕುಳ ಎಚ್ಚರಿಸಿದರು.
ಇಂತ ಆರೋಪಿಗಳಿಗೆ ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಇರುವ ಹಾಗೇ ಕಲ್ಲು ಹೊಡೆದು ಸಾಯಿಸಬೇಕು. ಫೋಕ್ಸೋಗೆ ಜಾಮೀನು ಆಗುವುದಿಲ್ಲ ಮತ್ತೆ ಹೇಗೆ ಜಾಮೀನಾಯ್ತು. ನ್ಯಾಯಾಲಯ ವ್ಯವಸ್ಥೆಗೆ ಕಳಂಕ. ಶಿಕ್ಷಕ ವರ್ಗಕ್ಕೆ ಕಳಂಕ ಎಂದು ಸತೀಶ್ ಕೂಜುಗೋಡು ಹೇಳಿದರು.
ಇನ್ನೊಂದು ಭಾರಿ ಆರೋಪಿಯ ಮೇಲೆ ಎಫ್ ಐ ಆರ್ ದಾಖಲಿಸಬೇಕು. ಅದಕ್ಕೆ ಪೊಲೀಸರು ಸಹಕರಿಸಿಬೇಕು. ಆ ಮೂಲಕ ನ್ಯಾಯ ಒದಗಿಸಬೇಕು ಪಂಚಾಯತ್ ಸದಸ್ಯ ಹರೀಶ್ ಇಂಜಾಡಿ ಹೇಳಿದರು.
ವೇದಿಕೆಯಲ್ಲಿ ಪ್ರಶಾಂತ್ ಮಾಣಿಲ, ರಾಜೇಶ್ ಎನ್ ಎಸ್, ರವಿಕಕ್ಕೆಪದವು, ನೀಲಪ್ಪ, ರವೀಂದ್ರ ಕುಮಾರ್ ರುದ್ರಪಾದ, ಕಿಶೋರ್ ಶಿರಾಡಿ, ಮೋಹನ್ದಾಸ್ ರೈ, ಕೃಷ್ಣ ಮೂರ್ತಿ, ಅಶೋಕ್ ನೆಕ್ರಾಜೆ, ಸುಧೀರ್ ಶೆಟ್ಟಿ, ಸತೀಶ್ ಕೂಜುಗೋಡು, ಗೊಪಾಲ ಎಣ್ಣೆಮಜಲು, ಎಚ್ ಎಲ್ ವೆಂಕಟೇಶ್, ಪುಲಸ್ಯ ರೈ, ಲಲಿತಾ ಗುಂಡಡ್ಕ, ಸವಿತಾ ಭಟ್, ಹರೀಶ್ ಇಂಜಾಡಿ, ದಿವ್ಯ, ಭಾರತಿ ಮೂಕಮಲೆ, ಸುಬ್ರಹ್ಮಣ್ಯ ಕುಳ ಮತ್ತಿತರರಿದ್ದರು.
ಈ ಸಂದರ್ಭ ವಿವಿಧ ನಾಯಕರುಗಳು ಮಾತನಾಡಿದರು.