ಶತಮಾನದ ಅಂತ್ಯಕ್ಕೆ ಸಂಪೂರ್ಣ ಮುಳುಗಲಿದೆ ಕರಾವಳಿ | ನಾಸಾ ಹೊರಹಾಕಿದ ವರದಿಯಲ್ಲೇನಿದೆ? ಯಾವ ನಗರಗಳು ಅಪಾಯದಲ್ಲಿವೆ?

ಕರಾವಳಿ ಭಾಗದ ಸುಮಾರು 12ಕ್ಕೂ ಮಿಕ್ಕಿ ನಗರಗಳಿಗೆ ಎಚ್ಚರಿಕೆಯ ಸುದ್ದಿಯೊಂದು ಈಗಾಗಲೇ ಎಲ್ಲೆಡೆ ವೈರಲ್ ಆಗುತ್ತಿದ್ದು, ಈ ಬಗ್ಗೆ ಬಾಹ್ಯಕಾಶ ಸಂಸ್ಥೆ ನಾಸಾ ತನ್ನ ವರದಿಯನ್ನು ನೀಡಿದ್ದು, ಈ ವರದಿಯ ಪ್ರಕಾರ ಈ ಶತಮಾನದ ಅಂತ್ಯಕ್ಕೆ ಕೆಳಕಂಡ ನಗರಗಳು ಸಂಪೂರ್ಣವಾಗಿ ಮುಳುಗಲಿದೆ ಎಂಬ ಎಚ್ಚರಿಕೆಯ ಗಂಟೆ ಬಾರಿಸಿದೆ.

ಜಾಗತಿಕ ತಾಪಮಾನದ ದುಷ್ಪರಿಣಾಮಗಳ ಬಗ್ಗೆ ವಿಶ್ವಸಂಸ್ಥೆಯ 195 ಪರಿಸರ ತಜ್ಞರ ಸಮಿತಿ, ಐಪಿಸಿಸಿ ವರದಿ ಹಾಗೂ ತನ್ನ ಉಪಗ್ರಹಗಳು ನೀಡಿರುವ ಮಾಹಿತಿಗಳನ್ನು ತಾಳೆ ಹಾಕಿರುವ ನಾಸಾ, 1988ರಿಂದ ಇಚೆಗೆ ಜಾಗತಿಕ ತಾಪಮಾನ ಗಣನೀಯವಾಗಿ ಹೆಚ್ಚಾಗಿದ್ದರಿಂದ ಹಿಮಚ್ಛಾದಿತ ಪ್ರದೇಶಗಳಲ್ಲಿ ಹಿಮಕರಗಿ ಸಮುದ್ರ ಸೇರುತ್ತಿದ್ದು,ಈ ಹಿಂದೆ ಪ್ರತೀ 100 ವರ್ಷಕ್ಕೊಮ್ಮೆ ಸಮುದ್ರದಲ್ಲಿ ನೀರಿನ ಮಟ್ಟ ಏರಿಕೆಯಾಗುತ್ತಿದ್ದು, ಆದರೆ ಇದೀಗ ಹತ್ತಾರು ವರ್ಷಗಳಿಗೊಮ್ಮೆ ಏರಿಕೆಯಾಗುತ್ತಿದೆ ಎಂದು ತಿಳಿಸಿದೆ.

ಇದೆಲ್ಲದರ ಪರಿಣಾಮ ಪ್ರತೀ 100 ವರ್ಷಕ್ಕೊಮ್ಮೆ ಆಗುತ್ತಿದ್ದ ಕರಾವಳಿ ಭೂ ಸವಕಳಿ ಇನ್ನು ಪ್ರತೀ ವರ್ಷವೂ ಬರಲಿದ್ದು,ಕರಾವಳಿಯಲ್ಲಿ ಆಗುತ್ತಿರುವ ಈ ಬದಲಾವಣೆ, ಗುಡ್ಡಗಾಡು ಪ್ರದೇಶ, ಬಯಲು ಸೀಮೆಗಳಲ್ಲಿನ ಹವಾಗುಣದ ಮೇಲೂ ದುಷ್ಪರಿಣಾಮ ಬೀರಿ ಅತಿಯಾದ ಶೀತ ಗಾಳಿ ಅತ್ಯುಷ್ಣ ಗಾಳಿಯು ಹೆಚ್ಚಾಗುತ್ತಿವೆ ಎಂದು ನಾಸಾ ತಿಳಿಸಿದೆ.ಮಂಗಳೂರು , ಮುಂಬೈ, ಮರ್ಮಗೋವಾ ಕೊಚ್ಚಿ, ಪಾರಾದೀಪ್, ಖಿದೀರ್‌ಪುರ್‌, ವಿಶಾಖಪಟ್ಟಣಂ, ಚೆನ್ನೈ, ತೂತ್ತುಕುಡಿ, ಕಾಂಡ್ಲಾ, ಒಖಾ, ಭಾವನಗರ ಪ್ರದೇಶಗಳು ಅಪಾಯದ ಅಂಚಿನಲ್ಲಿದೆ ಎಂಬ ಎಚ್ಚರಿಕೆಯನ್ನು ನಾಸಾ ನೀಡಿದೆ.

Ad Widget


Ad Widget


Ad Widget

Ad Widget


Ad Widget

ಜಗತ್ತಿನಾದ್ಯಂತ ಸಮುದ್ರ ಮಟ್ಟದಲ್ಲಾಗುತ್ತಿರುವ ಬದಲಾವಣೆಯನ್ನಾಧರಿಸಿ ವರದಿ ನೀಡಲಾಗುತ್ತಿದ್ದು, ಸಮುದ್ರ ಏರಿದರೆ 2 ಅಡಿಯಷ್ಟು ಏರಲಿದ್ದು,2006-18ರಲ್ಲಿ ನಡೆದ ಅಧ್ಯಯನನದ ಪ್ರಕಾರ ಸಮುದ್ರದ ಮಟ್ಟ ಪ್ರತಿ ವರ್ಷ 3.7 ಮಿ.ಮೀ ನಷ್ಟು ಏರಿಕೆಯಾಗುತ್ತದೆ ಎಂದು ತನ್ನ ವರದಿಯಲ್ಲಿ ತಿಳಿಸಿದೆ.

Leave a Reply

Ad Widget >>^
Ad Widget
error: Content is protected !!
Scroll to Top
%d bloggers like this: