ಮಂಗಳೂರು | ಮಕ್ಕಿಮನೆ ಕಲಾವೃಂದ ಪ್ರತಿಭಾ ಪ್ರಸ್ತುತಿಯ ಸಮಾರೋಪ ಸಮಾರಂಭ
ಮಕ್ಕಿಮನೆ ಕಲಾವೃಂದ ಮಂಗಳೂರು ವತಿಯಿಂದ ಮಂಗಳವಾರ (10/8/2021) ಪ್ರತಿಭಾ ಪ್ರಸ್ತುತಿಯ ಸಮಾರೋಪ ಸಮಾರಂಭ ಆನ್‍ಲೈನ್ ಮೂಲಕ ಅದ್ಧೂರಿಯಾಗಿ ನಡೆಯಿತು.
ಮೂಡಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರಾದ ಡಾ. ಮೋಹನ್ ಆಳ್ವರವರು ಕಾರ್ಯಕ್ರಮವನ್ನು ಉದ್ಘಾಟಿಸಿ, ಮಕ್ಕಿಮನೆ ಕಲಾವೃಂದದ ಕಾರ್ಯಕ್ರಮಗಳು ನಾಡಿನ ಕಣ್ಮನ ಸೆಳೆದಿದೆ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಶ್ರೀ ಜೈನ ಮಠ ಹೊಂಬುಜದ ಪೂಜ್ಯ ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮೀಜಿ, ಶ್ರೀ ಪೇಜಾವರ ಮಠ ಉಡುಪಿಯ ಪೂಜ್ಯ ಶ್ರೀ ವಿಶ್ವಪ್ರಸನ್ನತೀರ್ಥ ಪಾದಂಗಳರವರು, ಶ್ರೀ ಮುರುಘಾ ಮಠ ಚಿತ್ರದುರ್ಗದ ಪೂಜ್ಯ ಡಾ. ಶಿವಮೂರ್ತಿ ಮುರುಘಾ ಶರಣರು ಇವರುಗಳು ಮಕ್ಕಿಮನೆ ಕಲಾವೃಂದದ ಕಲಾ ಸಿರಿಗೆ ಮೆಚ್ಚುಗೆ ವ್ಯಕ್ತಪಡಿಸಿ ಶುಭಾರ್ಶೀವಚನಗೈದರು.
ಶ್ರೀ ಕ್ಷೇತ್ರ ಧರ್ಮಸ್ಥಳದ ಶ್ರೀ ಡಿ ಹರ್ಷೇಂದ್ರ ಕುಮಾರ್ ಅಧ್ಯಕ್ಷತೆಯನ್ನು ವಹಿಸಿ ನಾಡಿನ ಕಲಾ ಸೇವೆಯನ್ನು ಮಾಡಿ ಮಕ್ಕಿಮನೆ ಕಲಾವೃಂದ ಮಂಗಳೂರು ಇವರು ನಾಡಿನ ಸಂಸ್ಕೃತಿಗೆ ಅಪೂರ್ವವಾದ ಕೊಡುಗೆ ನೀಡುತ್ತಿದೆ ಎಂದು ಶುಭನುಡಿಗಳನ್ನಾಡಿದರು.
ಮೂಡುಬಿದಿರೆ ಶಾಸಕ ಉಮಾನಾಥ ಕೋಟ್ಯಾನ್, ಮಾಜಿ ಸಚಿವ ಅಭಯಚಂದ್ರ ಜೈನ್, ವಿಧಾನ ಪರಿಷತ್ ಮಾಜಿ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಶುಭಕೋರಿದರು.
ಮುಖ್ಯ ಅತಿಥಿಗಳಾಗಿ ಚಲನಚಿತ್ರ ರಂಗದ ದಿಗ್ಗಜರುಗಳಾದ ಶಿವಕುಮಾರ್ ಆರಾಧ್ಯ, ಚಿತ್ರ ಕಲಾವಿದೆ ಅಭಿನಯ, ರಾಧಿಕಾ ರಾವ್, ದೀಪ ಜಗದೀಶ್ , ಸುವರ್ಣ ಶೆಟ್ಟಿ, ತನ್ವಿ ರಾವ್, ಸೌಜನ್ಯ ಹೆಗ್ಡೆ, ಆರೋಹಿ ನಾರಾಯಣ್ ಶುಭ ಹಾರೈಸಿದರು. ಸಾಮಾಜಿಕ ಜಾಲತಾಣದ ವೈರಲ್ ಸ್ಟಾರ್ ಗಳಾದ ಸುದರ್ಶನ್ ಭಟ್ ಬೆದ್ರಾಡಿ, ವಂದನಾ ರೈ ಕಾರ್ಕಳ, ಅರವಿಂದ್ ವಿವೇಕ್ ಮಂಗಳೂರು, ದಿವ್ಯ ಆಲೂರ್ ಇವರುಗಳು ಉಪಸ್ಥಿತರಿದ್ದು ಮಕ್ಕಿಮನೆ ಕಲಾವೃಂದಕ್ಕೆ ಶುಭ ಹಾರೈಸಿದರು.
ಕಾರ್ಯಕ್ರಮದ ಪ್ರಾರಂಭದಲ್ಲಿ ಶ್ರೀಮತಿ ಜಯಶ್ರೀ ಡಿ ಜೈನ್ ಹೊರನಾಡು ಮತ್ತು ತಂಡದವರಿಂದ ನಡೆದ ಸಂಗೀತ ರಸಸಂಜೆ ಕಾರ್ಯಕ್ರಮ ಎಲ್ಲರ ಮನಸೂರೆಗೊಂಡಿತು. ಮಕ್ಕಿಮನೆ ಕಲಾವೃಂದದ ಸುದೇಶ್ ಜೈನ್ ಮಕ್ಕಿಮನೆ, ಅಂತರಾಷ್ಟ್ರೀಯ ಮಟ್ಟದ ಸಂಘಟಕರಾದ ಎನ್ ಪ್ರಸನ್ನ ಕುಮಾರ್ ಮೈಸೂರು, ಮಾರ್ಗದರ್ಶಕರಾದ ವಿಜೆ ತೇಜೇಶ್ ಜೆ ಬಂಗೇರ ಮತ್ತು ಗುರುಪ್ರಸಾದ್ ಕೋಟ್ಯಾನ್, ತಾಂತ್ರಿಕ ಸಹಕಾರವಾಗಿ ಧೀರಜ್ ಡಿ ಜೈನ್ ಹೊರನಾಡು, ವಿನ್ಸೆಂಟ್ ಡಿಕೋಸ್ತ ಸಾಣೂರು, ನಯನ ಪ್ರಭು ಮೂಡುಬಿದಿರೆ, ಸ್ಪೂರ್ತಿ ಜೈನ್ ಕುಣಿಗಲ್, ವಜ್ರ ಕುಮಾರ್, ನಿರಂಜನ್ ಜೈನ್ ಕುದ್ಯಾಡಿ, ಮಾಳ ಹರ್ಷೇಂದ್ರ ಜೈನ್ , ಶ್ವೇತಾ ಜೈನ್ ವಕೀಲರು ಮೂಡುಬಿದಿರೆ, ಚಿತ್ತ ಜಿನೇಂದ್ರ, ಶ್ವೇತಾ ಕುಮಾರಿ, ಮಹಾವೀರ್ ಪ್ರಸಾದ್ ಹೊರನಾಡು, ಅಕ್ಷಯ್ ಜೈನ್ ಬೆಂಗಳೂರು, ರೀಮ ಜಗನ್ನಾಥ್ , ಲತಾ ಸುದರ್ಶನ್ ಮೈಸೂರು ಸಹಕರಿಸಿದರು.
ದೇಶದ ನಾನಾ ಭಾಗಗಳಿಂದ ಮಾತ್ರವಲ್ಲದೆ ಅಮೇರಿಕಾ, ಸ್ವೀಡನ್ , ಜರ್ಮನಿ, ಮಲೇಷಿಯಾ, ಕುವೈಟ್ , ದುಬೈ, ಮಸ್ಕತ್ , ಮುಂತಾದ ದೇಶಗಳಿಂದಲೂ ಕೂಡ ಕಲಾಸಕ್ತ ಅತಿಥಿಗಳು ಭಾಗವಹಿಸಿದ್ದರು. ಮಕ್ಕಿಮನೆ ಕಲಾವೃಂದ ಮಂಗಳೂರು ಇದರ ಸರ್ವಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರೋತ್ಸಾಹಿಸಿದರು. ಸಂಸ್ಕೃತಿ ಎಂ ಎಳನೀರು ಹಾಗೂ ಆದ್ಯ ಕಾನುಬೈಲ್ ಇವರು ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು.