ಇನ್ಮುಂದೆ ಸ್ಪೀಡ್ ಆಗಿ ಗಾಡಿ ಓಡಿಸೋರನ್ನು ರಸ್ತೆ ಬದಿಯ ಎಲೆಕ್ಟ್ರಿಕ್ ಕಂಬಗಳೇ ಪತ್ತೆ ಹಚ್ಚಿ ಪೊಲೀಸರಿಗೆ ತಿಳಿಸಲಿವೆ | ಓವರ್ ಸ್ಪೀಡ್ ರೈಡರ್ ಗೆ ಇನ್ನು ಕಷ್ಟ ಕಷ್ಟ !!

Share the Article

ಇತರ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ರಸ್ತೆ ಅಪಘಾತಗಳು ಹೆಚ್ಚು ಸಂಭವಿಸುತ್ತವೆ. ಇನ್ನು ಹೆಚ್ಚಿನ ಅಪಘಾತಗಳಿಗೆ ಅತಿವೇಗದ ಚಾಲನೆ ಮತ್ತು ಸಂಚಾರ ನಿಯಮಗಳನ್ನು ಅನುಸರಿಸದಿರುವುದೇ ಪ್ರಮುಖ ಕಾರಣವಾಗಿದೆ. ಸರ್ಕಾರ ಈ ಅಪಘಾತಗಳನ್ನು ನಿಯಂತ್ರಿಸಲು ನಿರಂತರ ಪ್ರಯತ್ನ ಮಾಡುತ್ತಲೇ ಬಂದಿದೆ.

ಅದರಂತೆ ಈ ಪ್ರಯತ್ನದ ಭಾಗವಾಗಿ ಅಧಿಕಾರಿಗಳು ಇದೀಗ ರಸ್ತೆಯ ಮೇಲಿನ ಕಂಬಗಳಿಗೆ ಸ್ಪೀಡ್ ಟ್ರ್ಯಾಕರ್ ಕ್ಯಾಮೆರಾಗಳನ್ನು ಅಳವಡಿಸುತ್ತಿದ್ದಾರೆ. ಈ ಮೂಲಕ ವೇಗವಾಗಿ ಬರುವ ವಾಹನಗಳ ಮೇಲೆ ಕಣ್ಣಿಡಲಾಗುತ್ತದೆ. ಈ ಕ್ಯಾಮೆರಾಗಳು ಸ್ವಯಂಚಾಲಿತವಾಗಿ ಕಾರ್ಯನಿರ್ವಹಿಸುತ್ತಿದ್ದು, ವೇಗವಾಗಿ ಓಡುವ ವಾಹನಗಳ ಅಗತ್ಯ ಮಾಹಿತಿಯನ್ನು ಪೊಲೀಸರಿಗೆ(ಸಿಸ್ಟಂ) ರವಾನಿಸುತ್ತದೆ.

ಸದ್ಯಕ್ಕೆ ದೆಹಲಿ ಮತ್ತು ಹರಿಯಾಣ ರಾಜ್ಯಗಳ ಕೆಲವು ರಸ್ತೆಗಳಲ್ಲಿ ಈ ಕ್ಯಾಮೆರಾಗಳನ್ನು ಅಳವಡಿಸಿದ್ದು, ಇದು ಯಶಸ್ವಿಯಾದರೆ ಹಂತ ಹಂತವಾಗಿ ದೇಶದ ಎಲ್ಲಾ ರಸ್ತೆಗಳಿಗೆ ಈ ಕ್ಯಾಮೆರ ಕಣ್ಣಿಡಬಹುದು. ಇನ್ನು ಈ ಕ್ಯಾಮೆರಾದಲ್ಲಿ ಪೊಲೀಸರು ವಾಹನದ ವೇಗ ಪತ್ತೆ ವ್ಯವಸ್ಥೆಯನ್ನು ಅಳವಡಿಸಿದ್ದು, ಅದರ ಮೇಲೆ ವೇಗವಾಗಿ ಚಲಿಸುವ ವಾಹನಗಳ ಬಗ್ಗೆ ಪೊಲೀಸರು ಮಾಹಿತಿ ಪಡೆಯುತ್ತಾರೆ.

ಪೊಲೀಸರು ಸ್ಥಾಪಿಸಿದ ಈ ಸ್ಪೀಡ್ ಟ್ರ್ಯಾಕರ್ ಕ್ಯಾಮೆರಾಗಳು ರೇಡಾರ್ ಅನ್ನು ಆಧರಿಸಿವೆ. ಇದರಲ್ಲಿ ಡೋಪ್ಲರ್ ಪರಿಣಾಮವನ್ನು ವೇಗವನ್ನು ಟ್ರ್ಯಾಕ್ ಮಾಡಲು ಬಳಸಲಾಗುತ್ತದೆ. ಇದರ ಕ್ಯಾಮೆರಾಗಳು ರೇಡಿಯೋ ತರಂಗಗಳಲ್ಲಿ ಕೆಲಸ ಮಾಡುತ್ತವೆ. ಈ ರೇಡಿಯೋ ತರಂಗಗಳು ಬೆಳಕಿನೊಂದಿಗೆ ಚಲಿಸುತ್ತವೆ. ಅಲ್ಲದೇ ನೈಜ ಸಮಯದ ವೇಗ ಮಾಹಿತಿಯನ್ನು ವ್ಯವಸ್ಥೆಗೆ ರವಾನಿಸುತ್ತವೆ.

ಪೊಲೀಸರು ಬಳಸುವ ಲೇಸರ್ ಗನ್ ಕೂಡ ಈ ತಂತ್ರಜ್ಞಾನದ ಮೇಲೆ ಕೆಲಸ ಮಾಡುತ್ತದೆ. ಈ ಸ್ಪೀಡ್ ಟ್ರ್ಯಾಕರ್ ಕ್ಯಾಮೆರಾಗಳು ಆಟೋಮ್ಯಾಟಿಕ್ ನಂಬರ್ ಪ್ಲೇಟ್ ರೆಕೊಗ್ನಿಷನ್ ಸಿಸ್ಟಮ್ (ANPR) ನೊಂದಿಗೆ ಬರುತ್ತದೆ. ಇದು ವಾಹನದ ವೇಗ ಹಾಗೂ ಸಂಖ್ಯೆಯನ್ನು ಟ್ರ್ಯಾಕ್ ಮಾಡುತ್ತದೆ. ವೇಗದ ಚಾಲಕರು ಈ ಕ್ಯಾಮೆರಾದ ದೃಷ್ಟಿಯಿಂದ ತಪ್ಪಿಸಿಕೊಳ್ಳುವುದು ತುಂಬಾ ಕಷ್ಟವಾಗುತ್ತದೆ. ಸಮಯದ ಜೊತೆಗೆ, ಈ ಸ್ಪೀಡ್ ಟ್ರ್ಯಾಕರ್‌ ಕ್ಯಾಮೆರಾಗಳನ್ನ ಇತರ ಸ್ಥಳಗಳಲ್ಲೂ ಅಳವಡಿಸಬಹುದು.

ಪೊಲೀಸ್ ಇಲಾಖೆ ಈ ವೇಗ ಪತ್ತೆ ವ್ಯವಸ್ಥೆಯನ್ನು ಮಾರುತಿ ಸುಜುಕಿ ಎರ್ಟಿಗದಲ್ಲಿ ಅಳವಡಿಸಿದ್ದು, ಇದನ್ನು ಯಾವಾಗಲೂ ಪೊಲೀಸ್ ಕಾನ್ಸ್ಟೇಬಲ್ ಮೇಲ್ವಿಚಾರಣೆ ಮಾಡುತ್ತಾರೆ. ಈ ವ್ಯವಸ್ಥೆಯ ಮೂಲಕ ಅತಿ ವೇಗದಲ್ಲಿ ಓಡುತ್ತಿರುವ ವಾಹನಗಳನ್ನು ಪತ್ತೆಹಚ್ಚಿ, ಆ ಮಾಹಿತಿಯನ್ನು ಹಿರಿಯ ಅಧಿಕಾರಿಗೆ ನೀಡಲಾಗುತ್ತದೆ. ನಂತರ ಆ ವಾಹನವನ್ನು ನಿಲ್ಲಿಸಿ ಚಲನ್ ಮಾಡಲಾಗುತ್ತದೆ. ವೇಗದ ವಾಹನಗಳ ಸವಾರರಿಗೆ ರೂ. 2,000 ವರೆಗೆ ದಂಡ ವಿಧಿಸಬಹುದಾಗಿದೆ. ಅಲ್ಲದೆ ಪರವಾನಗಿಯನ್ನು ಮೂರು ತಿಂಗಳವರೆಗೆ ರದ್ದುಗೊಳಿಸಲೂಬಹುದು ಎಂದು ತಿಳಿದುಬಂದಿದೆ.

ಈ ಸ್ಪೀಡ್ ಟ್ರ್ಯಾಕ್ಟರ್ ವಿಡಿಯೋ ವ್ಯವಸ್ಥೆ ಪೊಲೀಸರಿಗೆ ಬಹಳಷ್ಟು ಸಹಾಯ ಮಾಡುವ ನಿರೀಕ್ಷೆಯಿದೆ. ನಮ್ಮ ರಾಜ್ಯದಲ್ಲೂ ಈ ವ್ಯವಸ್ಥೆ ಆದಷ್ಟು ಬೇಗ ಜಾರಿಯಾಗಲಿ ಎನ್ನುವುದು ಹಲವರ ಅಭಿಪ್ರಾಯವಾಗಿದೆ.

Leave A Reply