ತಮ್ಮನ ಕೊಂದ ಅಣ್ಣನ ಬಂಧಿಸಿದ ಬಂಟ್ವಾಳ ಪೊಲೀಸರು | ಸಂಶಯಕ್ಕೆ ಸಹೋದರನ ಕೊಂದ ಪಾಪಿ

Share the Article

ಪಾಣೆಮಂಗಳೂರಿನ ಬೊಂಡಾಲ ಶಾಂತಿಗುಡ್ಡೆಯಲ್ಲಿ ಅತ್ತಿಗೆಯ ಜತೆಗೆ ಅನೈತಿಕ ಸಂಬಂಧವಿದೆ ಎಂಬ ಆರೋಪದಿಂದ ತಮ್ಮನನ್ನು ಕೊಂದ ಅಣ್ಣ ರವಿ ನಾಯ್ಕ್ ನನ್ನು ಬಂಟ್ವಾಳ ನಗರ ಪೊಲೀಸರು ಬೊಂಡಾಲದಲ್ಲಿ ಬಂಧಿಸಿದ್ದಾರೆ.

ಶಾಂತಿಗುಡ್ಡೆ ನಿವಾಸಿ ಸುಂದರ(30) ಕೊಲೆಯಾದ ವ್ಯಕ್ತಿ. ಆತ ಅವಿವಾಹಿತನಾಗಿದ್ದು, ಮನೆಯಲ್ಲಿ ಒಬ್ಬನೇ ವಾಸವಾಗಿದ್ದ. ಆತನ ಮನೆಯ ಸಮೀಪದಲ್ಲಿ ಅಣ್ಣನ ಮನೆಯಿದ್ದು, ಅಲ್ಲಿಂದ ಅತ್ತಿಗೆ ಊಟ- ತಿಂಡಿ‌ ನೀಡುತ್ತಿದ್ದರು.

ಸುಂದರನಿಗೂ ಆತನ ಅತ್ತಿಗೆಗೂ ಅನೈತಿಕ‌ ಸಂಬಂಧವಿದೆ ಎಂದು ಆರೋಪಿಸಿ ಆತನ ಅಣ್ಣ ರವಿಗೂ ಪದೇ ಪದೇ ಜಗಳ ನಡೆಯುತ್ತಲೇ ಇತ್ತು.

ಶುಕ್ರವಾರ ತಡರಾತ್ರಿಯೂ ಅವರ ಮಧ್ಯೆ ಜಗಳ ನಡೆದಿದ್ದು, ಸುಂದರ ಬೊಬ್ಬೆ ಹೊಡೆಯುವುದನ್ನು ಕೇಳಿ ಮತ್ತೋರ್ವ ಅಣ್ಣ ರಮೇಶ ಅವರು ಹೋಗಿ ನೋಡಿದಾಗ, ರವಿಯು ಸುಂದರನಿಗೆ ಅಡಿಕೆ ಸಲಾಕೆಯಿಂದ ತಲೆಗೆ ಹೊಡೆದು ಕೊಂದಿದ್ದಾನೆ. ಬಂಧಿತ ಆರೋಪಿಗೆ ನ್ಯಾಯಾಲಯ ಬಂಧನ ವಿಧಿಸಲಾಗಿದೆ

Leave A Reply