ಭಾರತ ಮಾತೆಗೆ ಗೌರವ ಸಲ್ಲಿಸುವ ಮೂಲಕ ಸಚಿವರಾಗಿ ಕೆಲಸ ಪ್ರಾರಂಭಿಸಿದ ಸುನಿಲ್ ಕುಮಾರ್

Share the Article

ಸುನಿಲ್ ಕುಮಾರ್ ತಮ್ಮ ಸಚಿವ ಸ್ಥಾನದ ಪ್ರಮಾಣ ವಚನವನ್ನು ಸ್ವೀಕರಿಸಿ, ತನ್ನ ಮುಂದಿನ ಕಾರ್ಯಗಳಿಗೆ ಆಶೀರ್ವಾದ ಪಡೆಯಲು ಬಿಜೆಪಿ ರಾಜ್ಯ ಕೇಂದ್ರ ಕಛೇರಿ ಜಗನ್ನಾಥ ಭವನಕ್ಕೆ ಭೇಟಿ ನೀಡಿದರು.

ದೇಶದ ಮೇಲೆ ಅಪಾರ ಭಕ್ತಿ ಇರುವ ಇವರು ಭಾರತಮಾತೆಯ ಭಾವಚಿತ್ರಕ್ಕೆ ಗೌರವ ಸಲ್ಲಿಸುವ ಮೂಲಕ ತನ್ನ ಸಚಿವ ಸ್ಥಾನಕ್ಕೆ ಮುನ್ನುಡಿ ಬರೆದಿದ್ದಾರೆ. ಹಾಗೆಯೇ ರಾಜ್ಯಾಧ್ಯಕ್ಷರಾದ ಶ್ರೀ ನಳಿನ್ ಕುಮಾರ್ ಕಟೀಲ್ ರವರನ್ನು ಕೂಡ ಭೇಟಿ ಮಾಡಿದ್ದಾರೆ.

2004 ರಿಂದ ಮೂರು ಬಾರಿ ಶಾಸಕನಾಗಿ ಆಯ್ಕೆಯಾಗಿ, ಬಿಜೆಪಿಯ ಮುಖ್ಯ ಸಚೇತಕ ಮತ್ತು ನವೆಂಬರ್ 2020 ರಿಂದ ಕೇರಳ ಬಿಜೆಪಿಯ ಸಹ ಉಸ್ತುವಾರಿಯೂ ಆಗಿರುವ ಕಾರ್ಕಳ ವಿಧಾನಸಭಾ ಕ್ಷೇತ್ರದ ಶಾಸಕ ಸುನಿಲ್ ಕುಮಾರ್​ಗೆ ಇದೀಗ ಸಚಿವ ಸ್ಥಾನ ದೊರಕಿದೆ.

ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್​ಎಸ್​ಎಸ್​), ಅಖಿಲ ಭಾರತ ವಿದ್ಯಾರ್ಥಿ ಪರಿಷತ್ (ಎಬಿವಿಪಿ), ರಾಷ್ಟ್ರೀಯವಾದಿ, ಹಿಂದೂವಾದಿ ಚಿಂತನೆಯ ಹಿನ್ನೆಲೆಯುಳ್ಳ ಇವರು, ನಳಿನ್ ಕುಮಾರ್ ಅವರ ಆಪ್ತವಲಯದಲ್ಲಿಯೂ ಗುರುತಿಸಿಕೊಂಡಿದ್ದಾರೆ.

Leave A Reply