ಸವಣೂರು: ಹಿಂ.ಜಾ.ವೇ.ಯಿಂದ ಭಾರತ ಮಾತಾ ಪೂಜನ

ಸವಣೂರು : ಹಿಂದೂ ಜಾಗರಣ ವೇದಿಕೆ ಸವಣೂರು ಘಟಕ, ಪುತ್ತೂರು ತಾಲೂಕು ಇದರ ವತಿಯಿಂದ ಭಾರತ ಮಾತಾ ಪೂಜನ ಕಾರ್ಯಕ್ರಮ ಆ.3ರಂದು ಸಂಜೆ ಸವಣೂರಿನ ಪ್ರಿಯಕಾರಿಣಿ ಸಭಾ ಭವನದಲ್ಲಿ ನಡೆಯಿತು.

ಕಾರ್ಯಕ್ರಮದ ದಿಕ್ಸೂಚಿ ಭಾಷಣಕಾರರಾಗಿ ಆಗಮಿಸಿದ ಹಿಂದೂ ಜಾಗರಣ ವೇದಿಕೆ ಕರ್ನಾಟಕ ಪ್ರಾಂತ ಸಂಘಟನಾ ಕಾರ್ಯದರ್ಶಿ ಶ್ರೀ ಪ್ರಶಾಂತ್ ಬಿ ಮಾತನಾಡಿ ಭಾರತ ದೇಶದ ಸಂಸ್ಕೃತಿ, ಆಚಾರ ವಿಚಾರಗಳ ಬಗ್ಗೆ ತಿಳಿಯಪಡಿಸಿ ಮುಂದಿನ ಪೀಳಿಗೆಗೆ ಇವುಗಳ ಮಹತ್ವವನ್ನು ಉಳಿಸಬೇಕಾದದು ನಮ್ಮೆಲ್ಲರ ಕರ್ತವ್ಯ ಎಂದರು.ಹಿಂದು ಸಮಾಜ ಸಂಘಟಿತರಾಗಬೇಕೆಂದು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿಂದು ಜಾಗರಣ ವೇದಿಕೆ ಪುತ್ತೂರು ನಗರ ಗೌರವ ಅಧ್ಯಕ್ಷರಾದ ಶ್ರೀ ಪ್ರಕಾಶ್ಚಂದ್ರ ರೈ ಮುಗೇರು ಗುತ್ತು ವಹಿಸಿದ್ದರು.

ಕಾರ್ಯಕ್ರಮದ ವೇದಿಕೆಯಲ್ಲಿ ಹಿಂದು ಜಾಗರಣ ವೇದಿಕೆಯ ಮಂಗಳೂರು ವಿಭಾಗ ಕಾರ್ಯದರ್ಶಿ ಚಿನ್ಮಯ್ ಈಶ್ವರಮಂಗಲ, ಜಿಲ್ಲಾ ಅಧ್ಯಕ್ಷರಾದ ಜಗದೀಶ್ ನೆತ್ತರಕೆರೆ, ಜಿಲ್ಲಾ ಸಂಪರ್ಕ ಪ್ರಮುಖ್ ನರಸಿಂಹ ಮಾಣಿ, ತಾಲೂಕು ಸಂಪರ್ಕ ಪ್ರಮುಖ್ ದಿನೇಶ್ ಪಂಜಿಗ, ಸವಣೂರು ಘಟಕದ ಗೌರವ ಅಧ್ಯಕ್ಷರಾದ ಗಿರಿಶಂಕರ ಸುಲಾಯ, ಅಧ್ಯಕ್ಷರಾದ ಶ್ರೀಧರ ಇಡ್ಯಾಡಿ ಉಪಸ್ಥಿತರಿದ್ದರು.

Ad Widget


Ad Widget


Ad Widget

Ad Widget


Ad Widget


ಹಿಂ.ಜಾ. ವೇ. ಪುತ್ತೂರು ತಾಲ್ಲೂಕು ಕಾರ್ಯದರ್ಶಿ ಪುಷ್ಪರಾಜ ಸವಣೂರು, ಸವಣೂರು ಘಟಕದ ಪ್ರದಾನ ಕಾರ್ಯದರ್ಶಿ ನಿಶಾಂತ್ ಪರಣೆ, ಕಾರ್ಯಕರ್ತರಾದ ಸಚಿನ್ ಮಡಕೆ, ಚೇತನ್ ಇಡ್ಯಾಡಿ, ಮನೋಹರ ಆರೆಲ್ತಡಿ ಕೌಶಿಕ್ ಸವಣೂರು ಜಗದೀಶ್ ಕೆಡೆಂಜಿ ಗಣ್ಯರಿಗೆ ಶಾಲು ಹೊದೆಸಿ ಗೌರವಿಸಿದರು.


ಶ್ರೀಧರ ಇಡ್ಯಾಡಿ ಸ್ವಾಗತಿಸಿ,ಪುಷ್ಪರಾಜ ಸವಣೂರು ಧನ್ಯವಾದಗೈದರು,ರಾಜೇಶ್ ಇಡ್ಯಾಡಿ ಕಾರ್ಯಕ್ರಮ ನಿರೂಪಿಸಿದರು.

Leave a Reply

Ad Widget >>^
Ad Widget
error: Content is protected !!
Scroll to Top
%d bloggers like this: