ಮಂಗಳೂರು | ಕೋಳಿ ಅಂಕಕ್ಕೆ ಪೊಲೀಸರ ದಾಳಿ, ಅಂಕದ ಕೋಳಿ ಸಹಿತ ನಾಲ್ವರು ವಶಕ್ಕೆ

ಮಂಗಳೂರು: ಇಲ್ಲಿನ ಪದವು ಗ್ರಾಮದ ಮುಗೋಡಿ
ಕಟ್ಟೆಪುಣಿ ಎಂಬಲ್ಲಿರುವ ಮೈದಾನದಲ್ಲಿ ಕೋಳಿ ಅಂಕಕ್ಕೆ ಹಣವನ್ನು ಪಣವಾಗಿಟ್ಟು ಬಾಜಿ ಆಡುತ್ತಿದ್ದ ಸ್ಥಳಕ್ಕೆ ಕಂಕನಾಡಿ ಪೊಲೀಸರು ದಾಳಿ ಮಾಡಿದ್ದಾರೆ.

 

ದಾಳಿ ವೇಳೆ ನಾಲ್ವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆರೋಪಿಗಳನ್ನು ಶಿವಪ್ರಸಾದ್, ದೀಪಕ್, ಕೃಷ್ಣಪ್ಪ, ವಿಶ್ವನಾಥ ಎಂದು ಗುರುತಿಸಲಾಗಿದೆ.

ಕೋಳಿ ಅಂಕ ನಡೆಯುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ, ನಾಲ್ವರನ್ನು ವಶಕ್ಕೆ ಪಡೆದಿದ್ದಾರೆ. ಹಾಗೆಯೇ ಜೂಜಾಟಕ್ಕೆ ಬಳಸಿದ ಆರು ಅಂಕದ ಕೋಳಿ ಹಾಗೂ 1,280 ರೂ. ನಗದು ಮತ್ತು ಕಪ್ಪು ಬಣ್ಣದ ದ್ವಿಚಕ್ರ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ.

ಈ ಬಗ್ಗೆ ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದುಬಂದಿದೆ.

Leave A Reply

Your email address will not be published.