ಲಾಡ್ಜ್ ನಲ್ಲಿ 13 ವರ್ಷದ ಬಾಲಕನಿಗೆ ಲೈಂಗಿಕ ದೌರ್ಜನ್ಯ | ಮದರಸಾ ಶಿಕ್ಷಕನಿಗೆ 11 ವರ್ಷ ಸೆರೆವಾಸ
ತುಮಕೂರು: ರೈಲ್ವೆ ಟಿಕೆಟ್ ಬುಕಿಂಗ್ ಮಾಡಲು ಕನ್ನಡ ಅರ್ಥವಾಗುವುದಿಲ್ಲ ಕನ್ನಡ ಹೇಳಿಕೊಡು ಎಂದು ಹೇಳಿ 13 ವರ್ಷದ ಬಾಲಕನೊಬ್ಬನಿಗೆ, ಉತ್ತರ ಪ್ರದೇಶ ಮೂಲದ ಮದರಸಾ ಶಿಕ್ಷಕ ಲೈಂಗಿಕ ದೌರ್ಜನ್ಯ ಎಸಗಿದ ಘಟನೆ ನಡೆದಿದೆ.
ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಆರು ವರ್ಷಗಳ ವಿಚಾರಣೆ ಬಳಿಕ ಇದೀಗ ಕೋರ್ಟ್ ತೀರ್ಪು ನೀಡಿದೆ. ಈ ಬಗ್ಗೆ ಪೋಕ್ಸ್ ವಿಶೇಷ ನ್ಯಾಯಾಲಯ ತೀರ್ಪು ಪ್ರಕಟಿಸಿದ್ದು, 11 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಜೊತೆಗೆ ಸಂತ್ರಸ್ತ ಬಾಲಕನಿಗೆ 5 ಲಕ್ಷ ರೂ. ಪರಿಹಾರ ನೀಡುವಂತೆ ಆದೇಶಿಸಿದೆ.
ಆರೋಪಿಯಾದ ಉತ್ತರ ಪ್ರದೇಶ ಮೂಲದ ಮಫಿ ಮುಷರಫ್ (42) ಎಂಬವನಿಗೆ ಈ ಶಿಕ್ಷೆ ವಿಧಿಸಲಾಗಿದೆ. ಈತ ತುಮಕೂರಿನ ಅಮಲಾಪುರದ ಮದರಸಾದಲ್ಲಿ ಶಿಕ್ಷಕನಾಗಿದ್ದ ಎಂದು ಹೇಳಿದ್ದ ಈ ದುಷ್ಕರ್ಮಿ, ನಂತರ ಬಾಲಕನನ್ನು ಕರೆದುಕೊಂಡು ಹೋಗಿದ್ದಾನೆ.
ಕನ್ನಡ ಓದಿ ಹೇಳಲೆಂದು ಜೊತೆಗೆ ಕರೆದೊಯ್ದು, ಬಳಿಕ ನಗರದ ರೈಲ್ವೆ ನಿಲ್ದಾಣದ ಲಾಡ್ಜ್ ನಲ್ಲಿ ಆತನನ್ನು ಕುಳ್ಳಿರಿಸಿ ಬೈಕ್ನಲ್ಲಿ ಪೆಟ್ರೋಲ್ ಖಾಲಿಯಾಗಿದ್ದು, ಇಂದು ಹೋಗಲು ಆಗುವುದಿಲ್ಲ ಸದ್ಯ ಲಾಡ್ಜ್ ನಲ್ಲಿ ಉಳಿಯೋಣ ಎಂದು ಅವನನ್ನು ಉಳಿಸಿಕೊಂಡು ಲೈಂಗಿಕ ದೌರ್ಜನ್ಯ ಎಸಗಿದ್ದ. ಮರುದಿನ ಬಾಲಕನನ್ನು ಹಾಸ್ಟೆಲ್ನಲ್ಲಿ ಬಿಟ್ಟು ಇದರ ಬಗ್ಗೆ ಮಾತನಾಡದಂತೆ ಬೆದರಿಕೆ ಹಾಕಿದ್ದ.
ಬಾಲಕ ಮೊದಲು ಆತನ ಬೆದರಿಕೆಗೆ ಹೆದರಿ, ನಂತರ ಧೈರ್ಯ ಮಾಡಿ ತನ್ನ ತಾಯಿಗೆ ವಿಷಯ ತಿಳಿಸಿದ್ದ. ಅವರು ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದರು.
ಇದೀಗ ಸತತ ಆರು ವರ್ಷಗಳ ವಿಚಾರಣೆ ಬಳಿಕ ಕೋರ್ಟ್ ತೀರ್ಪು ನೀಡಿದೆ. ಪೋಕ್ಸ್ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಎನ್.ಕೃಷ್ಣಯ್ಯ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.