ಹುಡುಗಿ ಹುಡುಕಿ ಸೋತಿದ್ದ ಹುಡುಗ, 1 ಲಕ್ಷ ವಧು ದಕ್ಷಿಣೆ ಕೊಟ್ಟು ಸುಂದರಿಯನ್ನೇ ಮದುವೆ ಆಗಿದ್ದ | ಫರ್ಸ್ಟ್ ನೈಟ್ ಗೆ ಸ್ವಲ್ಪ ಹೊತ್ತಿಗೆ ಮುಂಚೆ ನಡೆದಿತ್ತು ಮೋಸ !!?

ಇದು ಅತ್ಯಂತ ವಿಚಿತ್ರ ಘಟನೆ. ಈ ಘಟನೆ ನಡೆದಿರುವುದು ಮಧ್ಯಪ್ರದೇಶದ ಭಿಂಡ್ ಗ್ರಾಮದಲ್ಲಿ. ಮದುವೆಯಾಗದೇ ಕಂಗಾಲಾಗಿದ್ದ ಯುವಕನ ಕಥೆಯಿದು. ಹುಡುಗಿ ಸಿಕ್ಕಿಲ್ಲ ಎಂದು ಗೋಳಾಡಿದ್ದ ಯುವಕನ ಬಳಿ ಬಂದ ಯುವತಿಯೊಬ್ಬಳು ಮದುವೆಯಾಗಿದ್ದಾಳೆ. ಆದರೆ ಮೊದಲ ರಾತ್ರಿಯೇ ಎಸ್ಕೇಪ್ ಆಗಿದ್ದಾಳೆ!

ಅಷ್ಟಕ್ಕೂ ಆಗಿದ್ದೇನೆಂದರೆ, ಸೋನು ಜೈನ್ ಎಂಬ ಯುವಕನಿಗೆ ಮದುವೆಯಾಗಲು ಹುಡುಗಿ ಸಿಕ್ಕಿರಲಿಲ್ಲ. ಹುಡುಗಿಗಾಗಿ ಹುಡುಕಿ ಹುಡುಕಿ ಸೋತ ಅವನಿಗೆ ಆತನ ಪರಿಚಯದವನೇ ಆದ ಉದಲ್ ಖಾತಿಕ್ ಎಂಬವನು ಹುಡುಗಿಯ ನಾನು ಹುಡುಕುತ್ತೇನೆ. ಆದರೆ ಅವಳಿಗೆ ನೀನು ಒಂದು ಲಕ್ಷ ರೂಪಾಯಿ ಕೊಡಬೇಕು ಎಂದು ಹೇಳಿದ. ಹುಡುಗಿಗಾಗಿ ಪರಿತಪಿಸುತ್ತಿದ್ದ ಸೋನು ಇದಕ್ಕೆ ಒಪ್ಪಿಕೊಂಡಿದ್ದಾನೆ.

ನಂತರ ಉದಲ್ ತನ್ನಿಬ್ಬರು ಸ್ನೇಹಿತರ ಜತೆಗೂಡಿ, ಅನಿತಾ ರತ್ನಾಕರ್ ಎಂಬ ಯುವತಿಯನ್ನು ಕರೆತಂದಿದ್ದಾನೆ. ಆಕೆಯ ಚೆಲುವನ್ನು ನೋಡಿ ಸೋನು ಮಾತ್ರವಲ್ಲದೇ ಆತನ ಪಾಲಕರೂ ಒಪ್ಪಿಕೊಂಡಿದ್ದಾರೆ. ಮಾತುಕತೆಯಂತೆ ಒಂದು ಲಕ್ಷ ರೂಪಾಯಿಯನ್ನು ಉದಲ್ ಮತ್ತು ಆತನ ಸ್ನೇಹಿತರಿಗೆ ಈ ವರ ನೀಡಿದ್ದಾನೆ. ನಂತರ ಶಾಕ್ರೋಕ್ತವಾಗಿ ಮದುವೆ ಮಾಡಲಾಗಿದೆ.

Ad Widget


Ad Widget


Ad Widget

Ad Widget


Ad Widget

ಮದುವೆಯ ದಿನ ರಾತ್ರಿ ಫಸ್ಟ್ ನೈಟ್‌ಗೆ ವ್ಯವಸ್ಥೆ ಮಾಡಲಾಗಿತ್ತು. ಈ ಸಂದರ್ಭದಲ್ಲಿ ತನಗೆ ಯಾಕೋ ಸುಸ್ತಾಗುತ್ತಿದೆ ಎಂದು ಅನಿತಾ ಟೆರೇಸ್ ಮೇಲೆ ಹೋಗಿದ್ದಾಳೆ. ಹೋಗಿ ತುಂಬಾ ಹೊತ್ತಾದರೂ ಆಕೆ ಬರದಾಗ ವರನಿಗೆ ಭಯವಾಗಿ ಮೇಲೆ ಹೋಗಿ ನೋಡಿದಾಗ ಅಲ್ಲಿ ಆಕೆ ಇರಲಿಲ್ಲ. ಎಲ್ಲೆಡೆ ಹುಡುಕಿದರೂ ಸಿಗಲಿಲ್ಲ. ನಂತರ ಪೊಲೀಸ್ ಠಾಣೆಗೆ ಹೋಗಿ ದೂರು ದಾಖಲಿಸಿದ್ದಾನೆ.

ಅಷ್ಟರಲ್ಲಿ ಓಡಿಹೋಗುತ್ತಿದ್ದ ಅನಿತಾ ಗಸ್ತು ತಿರುಗುತ್ತಿದ್ದ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾಳೆ. ಆಕೆಯನ್ನು ಠಾಣೆಗೆ ಕರೆದುಕೊಂಡು ಬರಲಾಗಿದೆ. ನಂತರ ತಿಳಿದ ವಿಷಯ ಎಂದರೆ, ಹಣಕ್ಕಾಗಿ ಈ ರೀತಿ ಮೋಸ ಮಾಡುವುದು ಈ ಯುವತಿಯ ಗ್ಯಾಂಗ್‌ಗೆ ಮಾಮೂಲು ಎನ್ನುವುದು.

ಇದಕ್ಕೆ ಸಂಬಂಧಿಸಿದಂತೆ ಐದು ಮಂದಿಯ ವಿರುದ್ಧ ದೂರು ದಾಖಲು ಮಾಡಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಮೂರು ಮಂದಿಯನ್ನು ಈಗಾಗಲೇ ಅರೆಸ್ಟ್ ಮಾಡಲಾಗಿದೆ.

Leave a Reply

Ad Widget >>^
Ad Widget
error: Content is protected !!
Scroll to Top
%d bloggers like this: