ಬ್ಯಾಂಗ್ ಚಿತ್ರದ ಶೂಟಿಂಗ್ ವೇಳೆ ನಡೆದ ಅವಘಡ ನಟಿ ಶಾನ್ವಿ ಶ್ರೀವಾಸ್ತವ್ ಅವರ ಕೈಗೆ ಗಾಯ, ಅರ್ಧಕ್ಕೇ ನಿಂತುಹೋದ ಶೂಟಿಂಗ್

ಸಿನಿಮಾ ಶೂಟಿಂಗ್ ವೇಳೆ ನಡೆದ ಅವಘಡದಲ್ಲಿ ನಟಿ ಶಾನ್ವಿ ಶ್ರೀವಾಸ್ತವ್ ಅವರ ಕೈಗೆ ಪೆಟ್ಟಾಗಿದ್ದು,ಶೂಟಿಂಗ್ ನ್ನು ಅರ್ಧಕ್ಕೇ ನಿಲ್ಲಿಸಲಾಗಿದೆ. ಶೂಟಿಂಗ್​ ವೇಳೆ ಎಷ್ಟೇ ಎಚ್ಚರಿಕೆ ತೆಗೆದುಕೊಂಡರೂ ಅವಘಡಗಳು ಸಂಭವಿಸಿ ಬಿಡುತ್ತದೆ. ಶಾನ್ವಿ ಶ್ರೀವಾಸ್ತವ ನಟಿಸುತ್ತಿರುವ ‘ಬ್ಯಾಂಗ್’​ ಸಿನಿಮಾ ಚಿತ್ರದ ಶೂಟಿಂಗ್​ ವೇಳೆಯೂ ಹಾಗೆಯೇ ಆಗಿದ್ದು,ಸಾಹಸ ಸನ್ನಿವೇಶ ಚಿತ್ರೀಕರಣದ ವೇಳೆ ಶಾನ್ವಿ ಬಿದ್ದಿದ್ದಾರೆ. ಈ ವೇಳೆ ಅವರ ಕೈಗೆ ಪೆಟ್ಟಾಗಿದೆ. ಅವರಿಗೆ ಪ್ರಥಮ ಚಿಕಿತ್ಸೆ ನೀಡಲಾಗಿದೆ.

‘ಬ್ಯಾಂಗ್’ ಸಿನಿಮಾದಲ್ಲಿ ಶಾನ್ವಿ ಅವರದ್ದು ಗ್ಯಾಂಗ್‌ಸ್ಟರ್ ಪಾತ್ರವಾಗಿದ್ದು,ಈ ಸಿನಿಮಾದಲ್ಲಿ ಸಾಕಷ್ಟು ಆ್ಯಕ್ಷನ್​ ಕೂಡಾ ಇದೆ. ಅದಕ್ಕಾಗಿಯೇ ಅವರು ಪೂರ್ವ ತಯಾರಿ ಮಾಡಿಕೊಳ್ಳುವುದರ ಜತೆಗೆ ಅಗತ್ಯ ಸಿದ್ಧತೆಗಳ ನಡುವೆ ಶೂಟಿಂಗ್ ಶುರು ಮಾಡಿದ್ದರು. ಆದರೆ ಮಳೆ ಎಫೆಕ್ಟ್‌ನಲ್ಲಿ ಶೂಟಿಂಗ್ ಮಾಡುವಾಗ ಶಾನ್ವಿ ಕಾಲು ಜಾರಿ ಬಿದ್ದಿದ್ದಾರೆ. ಈ ವೇಳೆ ಅವರ ಕೈಗೆ ಪೆಟ್ಟಾಗಿದೆ ಎಂದು ತಿಳಿದು ಬಂದಿದೆ.

ಸದ್ಯ ಈ ಚಿತ್ರಕ್ಕೆ ಶ್ರೀಗಣೇಶ್‌ ಪರಶುರಾಮ್ ನಿರ್ದೇಶನ ಮಾಡುತ್ತಿದ್ದರೆ,ಇದು ಅವರ ಮೊದಲ ಸಿನಿಮಾ ಕೂಡಾ ಆಗಿದ್ದು,ಗಾಯಕ ರಘು ದೀಕ್ಷಿತ್ ಡಾನ್ ಆಗಿ ‘ಬ್ಯಾಂಗ್‌’ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ರಿತ್ವಿಕ್ ಮುರಳೀಧರ್ ಹಾಡುಗಳಿಗೆ ಸಂಗೀತ ಸಂಯೋಜನೆ ಮಾಡುವುದರ ಜೊತೆಗೆ ಒಂದು  ಪಾತ್ರವನ್ನೂ ನಿಭಾಯಿಸುತ್ತಿದ್ದಾರೆ. ಈ ಸಿನಿಮಾದ ಹಾಡುಗಳಿಗೆ ಯೋಗರಾಜ್ ಭಟ್ ಸಾಹಿತ್ಯ ಬರೆಯುತ್ತಿದರೆ,ಸಾಹಸ ನಿರ್ದೇಶನವನ್ನು ಚೇತನ್ ಮಾಡುತ್ತಿದ್ದಾರೆ.

Ad Widget


Ad Widget


Ad Widget

Ad Widget


Ad Widget

‘ಲಾಕ್‌ಡೌನ್‌ ನಂತರ ಮತ್ತೆ ಶೂಟಿಂಗ್‌ ಪ್ರಾರಂಭ ಆಗಿದ್ದು ಎಲ್ಲರಿಗೂ ಖುಷಿ ಕೊಟ್ಟಿದೆ. ಬ್ಯಾಂಗ್‌ ಸಿನಿಮಾ ಟೀಮ್‌ ಚೆನ್ನಾಗಿದೆ. ಫೈಟ್‌ ದೃಶ್ಯ ಮಾಡುವ ಮೊದಲು ನಾಲ್ಕೈದು ದಿನ ಟ್ರೇನಿಂಗ್‌ ಕೊಟ್ಟಿದ್ದಾರೆ’ ಎಂದು ಇತ್ತೀಚೆಗೆ ಶಾನ್ವಿ ಹೇಳಿಕೊಂಡಿದ್ದರು. ಇದಾದ ಕೆಲವೇ ದಿನಗಳಲ್ಲಿ ಈ ಅವಘಡ ಸಂಭವಿಸಿದೆ.

Leave a Reply

Ad Widget >>^
Ad Widget
error: Content is protected !!
Scroll to Top
%d bloggers like this: