ಜಾಗದ ಬಗೆಗೆ ವಗ್ವಾದ | ಕತ್ತಿಯಿಂದಲೇ ಹಲ್ಲೆ!!

ಸುಬ್ರಹ್ಮಣ್ಯ:ಜಾಗ ಆಸ್ತಿಯ ನೆಪದಲ್ಲಿ ಜೀವವನ್ನೇ ಲೆಕ್ಕಿಸದೆ ಅದೆಷ್ಟೋ ಸಂಬಂಧಗಳು ಕಳಚಿ ಬೀಳುತಿದ್ದು, ಇದೀಗ ಕಲ್ಮಕಾರ್ ಎಂಬಲ್ಲಿ ಜಾಗದ ಬಗ್ಗೆ ಬಿಸಿ ಬಿಸಿ ವಗ್ವಾದ ಪರಸ್ಪರ ಇಬ್ಬರ ನಡುವೆ ನಡೆದಿದೆ. ಬಳಿಕ ಚರ್ಚೆ ಜೋರಾಗಿ ವ್ಯಕ್ತಿಯೊಬ್ಬರಿಗೆ ಕತ್ತಿಯಿಂದ ಹಲ್ಲೆ ಎಸಗಿರುವ ಘಟನೆ ನಡೆದಿದೆ.

ಈ ಘಟನೆ ಕಲ್ಮಕಾರು ಕಾರುಗೋಡು ನಿವಾಸಿಯಾದ ಲೋಕಯ್ಯ ಮತ್ತು ಯತೀಶ್ ಎಂಬುವವರ ನಡುವೆ ನಡೆದಿದ್ದು,ಜುಲೈ 30 ರಂದು ಕತ್ತಿಯಿಂದ ಹಲ್ಲೆ ಮಾಡಿರುವ ಬಗ್ಗೆ ಆರೋಪವಾಗಿದೆ.

ಈ ಹಲ್ಲೆಯಿಂದ ಗಾಯಗೊಂಡ ಯತೀಶ್‌ರವರಿಗೆ ಭುಜದ ಭಾಗಕ್ಕೆ ಪೆಟ್ಟು ಬಿದ್ದಿದು, ಇದೀಗ ಸುಳ್ಯ ಸರಕಾರಿ ಆಸ್ಪತ್ರೆಯಲ್ಲಿ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ ಎಂದು ತಿಳಿದು ಬಂದಿದೆ.

Ad Widget / / Ad Widget

Leave a Reply

error: Content is protected !!
Scroll to Top
%d bloggers like this: