ಸೈನಿಕನ ಮೇಲೆ ದಾಳಿ ಹಿನ್ನೆಲೆ -ಮಡಿಕೇರಿ ಚಲೋ ! | ದುಷ್ಕರ್ಮಿಗಳಿಗೆ ತಕ್ಷಣ ಜಾಮೀನು ನೀಡಿದ ನ್ಯಾಯಾಲಯದ ಕ್ರಮದ ವಿರುದ್ಧ ಪ್ರತಿಭಟನೆ
ಹಾಲಿ ಸೈನಿಕನ ಮತ್ತು ಅವರ ಕುಟುಂಬದವರ ಮೇಲೆ ಮಾರಣಾಂತಿಕ ಹಲ್ಲೆ ಆಗಿ, ದುಷ್ಕರ್ಮಿಗಳ ಮೇಲೆ ಎಫ್ ಐ ಆರ್ ದಾಖಲಾಗಿದ್ದರೂ ಆರೋಪಿಗಳು ಅರೆಸ್ಟ್ ಆದ ಒಂದೇ ದಿನದಲ್ಲಿ ಅವರಿಗೆ ನ್ಯಾಯಾಲಯ ಜಾಮೀನು ನೀಡಿರುವುದನ್ನು ಪ್ರತಿಭಟಿಸಿ ಮಾಜಿ ಸೈನಿಕರು ಪ್ರತಿಭಟನೆಗೆ ಇಳಿದಿದ್ದಾರೆ.
ಇಂದಿನ ಸಮಾಜದಲ್ಲಿ ಸೈನಿಕರ ಕುಟುಂಬಕ್ಕೆ ಯಾರೂ ಕೂಡ ಗೌರವವನ್ನು ನೀಡುತ್ತಿಲ್ಲ, ನಾವು ದೇವರು ಎಂದು ನಂಬಿರುವ ನ್ಯಾಯಾಲಯವೂ ಕೂಡ ನಮಗೆ ನಮ್ಮ ಸೈನಿಕನ ಮೇಲೆ ಹಲ್ಲೆ ಮಾಡಿರುವ ಆರೋಪಿಗಳಿಗೆ ಕೇವಲ ಒಂದೇ ದಿನದಲ್ಲಿ ಜಾಮೀನು ನೀಡಿದೆ. ನ್ಯಾಯಾಲಯವೇ ನಮಗೆ ನ್ಯಾಯ ಕೊಡದಿದ್ದರೆ ಬೇರೆ ನಾವು ಯಾರನ್ನ ಕೇಳೋದು, ಯಾರತ್ರ ನ್ಯಾಯ ಕೇಳುವುದು? ಆದ್ದರಿಂದ ನಾವೆಲ್ಲರೂ ಒಗ್ಗಟ್ಟಾಗಿ ನಿಲ್ಲಬೇಕು. ಏಳಿ ಎದ್ದೇಳಿ ಸೈನಿಕರೇ ಮತ್ತು ಮಾಜಿ ಸೈನಿಕರ ಕುಟುಂಬದವರೇ ನಾಳೆ ನಿಮಗೂ ಈ ಪರಿಸ್ಥಿತಿ ಬರಬಹುದು. ಎಂದು ಹೇಳಿರುವ ಸೈನಿಕರು, ಈ ಮಾರಣಾಂತಿಕ ಹಲ್ಲೆಯನ್ನು ಖಂಡಿಸಿ ಎಂದು ಮಾಜಿ ಸೈನಿಕರ ಸಂಘಟನೆಗಳು ಕರೆ ನೀಡಿದ್ದಾರೆ.
ಇಂದು, ಶುಕ್ರವಾರ ಬೆಳಿಗ್ಗೆ 9:30 ಕ್ಕೆ ಮಡಿಕೇರಿಯ ತಿಮ್ಮಯ್ಯ ಸರ್ಕಲ್ ನಿಂದ ಡಿಸಿ ಆಫೀಸ್ ವರೆಗೂ ಶಾಂತಿಯುತ ಪ್ರತಿಭಟನಾ ರ್ಯಾಲಿಯನ್ನು ಹಮ್ಮಿಕೊಳ್ಳಲಾಗಿದೆ ಈ ರ್ಯಾಲಿಗೆ ಕರ್ನಾಟಕದ ಎಲ್ಲಾ ಮಾಜಿಸೈನಿಕರ ಸಂಘಟನೆಗಳು ಭಾಗವಹಿಸಬೇಕೆಂದು ಮನವಿ ಮಾಡಿಕೊಂಡಿದ್ದಾರೆ. ಅಲ್ಲದೆ ಸೈನಿಕರೆಲ್ಲ ಒಗ್ಗಟ್ಟಾಗಿ ಕರ್ನಾಟಕದಲ್ಲಿ ಬಲಿಷ್ಠ ಸಂಘಟನೆ ಕಟ್ಟೋಣ, ಸೈನಿಕ ಜಾತಿಯವರೆಲ್ಲರೂ ಒಂದಾಗೋಣ ಎಂದು ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘ (ರಿ)ಕರ್ನಾಟಕದ ರಾಜ್ಯಾಧ್ಯಕ್ಷರಾದ ಅಧ್ಯಕ್ಷ ಡಾ. ಶಿವಣ್ಣಎನ್ ಕೆ ಅವರು ಕರೆ ನೀಡಿದ್ದಾರೆ.