ಒಟ್ಟು 29 ಮಾಧ್ಯಮ ಸಂಸ್ಥೆಗಳ ಮೇಲೆ 25 ಕೋಟಿ ಮಾನನಷ್ಟ ಮೊಕದ್ದಮೆ ಹೂಡಿದ ನಟಿ ಶಿಲ್ಪಾ ಶೆಟ್ಟಿ | ಇಂದೇ ಕೇಸು ಕೈಗೆತ್ತಿಕೊಳ್ಳಲಿರುವ ಬಾಂಬೆ ಹೈಕೋರ್ಟ್
ಮುಂಬೈ: ಮಾಧ್ಯಮ ಸಂಸ್ಥೆ ಮತ್ತು ಸಾಮಾಜಿಕ ಮಾಧ್ಯಮದ ವಿರುದ್ಧ ನಟಿ ಶಿಲ್ಪಾ ಶೆಟ್ಟಿ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ.
ಬಾಂಬೆ ಹೈಕೋರ್ಟ್ ನಲ್ಲಿ ಅವರು ಒಟ್ಟು 29 ಮಾಧ್ಯಮಗಳ ವಿರುದ್ಧ ಮಾನನಷ್ಟ ಮೊಕದ್ದಮೆ ಹಾಕಿದ್ದಾರೆ. ಅಲ್ಲದೆ, 25 ಕೋಟಿ ಪರಿಹಾರ ಕೇಳಿ ಕೋರ್ಟು ಮೊರೆ ಹೋಗಿದ್ದಾರೆ.
ನೀಲಿ ಚಿತ್ರದ ಅಧಿಪತಿ ಮತ್ತು ತಮ್ಮ ಪತಿ ರಾಜ್ ಕುಂದ್ರಾ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ಕುರಿತು ಸುಳ್ಳು ಮತ್ತು ಚಾರಿತ್ರ್ಯ ಹರಣ ಮಾಡುವಂತಹ ಸುದ್ದಿಗಳನ್ನು ಪ್ರಸಾರ ಮಾಡಲಾಗಿದೆ ಎಂದು ಶಿಲ್ಪಾ ಶೆಟ್ಟಿ ಆರೋಪಿಸಿದ್ದಾರೆ. ಅಲ್ಲದೆ ಮಾಧ್ಯಮಗಳು ತಮ್ಮ ಬಳಿ ಕ್ಷಮೆಯಾಚಿಸುವಂತೆ ಕೇಳಿದ್ದಾರೆ.
ಜು.19ರಂದು ಅಶ್ಲೀಲ ಚಿತ್ರ ನಿರ್ಮಾಣ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ ಕುಂದ್ರಾರನ್ನು ಬಂಧಿಸಲಾಗಿತ್ತು. ಈ ಬಗ್ಗೆ ತನಿಖೆ ಆರಂಭಿಸಿರುವ ಪೊಲೀಸರು ಇದರಲ್ಲಿ ಇಲ್ಲಿಯತನಕ ಶಿಲ್ಪಾ ಪಾತ್ರ ಕಂಡುಬಂದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಆದರೂ ಮಾಧ್ಯಮಗಳು ತಮ್ಮ ವಿರುದ್ಧ ಸುಳ್ಳು ಸುದ್ದಿಗಳನ್ನು ಪ್ರಸಾರ ಮಾಡುತ್ತಿವೆ ಎಂದು ಶಿಲ್ಪಾ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ.
ಈ ಸಂಬಂಧ ಕೋರ್ಟು ಕೇಸನ್ನು ಇವತ್ತು ಕೈಗೊಳ್ಳಲಿದ್ದು, ಸದರಿ ಮಾಧ್ಯಮಗಳಿಗೆ ನೊಟೀಸ್ ಜಾರಿ ಮಾಡುವ ಸಂಭವ ಇದೆ.