ಬಂಟ್ವಾಳ | ರೈಲ್ವೇ ಹಳಿಯ ಮೇಲೆ ಯುವಕನ ಶವ ಪತ್ತೆ, ಸಾವಿನ ಬಗ್ಗೆ ಸಂಶಯ ವ್ಯಕ್ತಪಡಿಸಿದ ಪೋಷಕರು

Share the Article

ಬಂಟ್ವಾಳ ತಾಲೂಕಿನ ದೇವಂದಬೆಟ್ಟು ರೈಲ್ವೆ ಹಳಿಯಲ್ಲಿ ಯುವಕನೊರ್ವನ ಮೃತದೇಹ ಇಂದು ಬೆಳಗ್ಗೆ ಪತ್ತೆಯಾಗಿದೆ.

ಮೃತದೇಹ ಕಳ್ಳಿಗೆ ಗ್ರಾಮದ ಲಕ್ಷಣ ಎಂಬವರ ಮಗ ಕಾರ್ತಿಕ್ (25) ಎಂಬವರದ್ದು ಎಂದು ಗುರುತಿಸಲಾಗಿದೆ.

ಸಂಜೆ ಮನೆಯಿಂದ ಹೊರಟ ಕಾರ್ತಿಕ್ ರಾತ್ರಿ 11 ಗಂಟೆ ಆದರೂ ಮನೆಗೆ ಬಾರದ ಹಿನ್ನೆಲೆಯಲ್ಲಿ ಮನೆಯವರು ಆತನ ಹುಡುಕಾಟ ಆರಂಭಿಸಿದ್ದರು. ಮುಂಜಾನೆ ಸುಮಾರು 3 ಗಂಟೆ ವೇಳೆಗೆ ಕಾರ್ತಿಕ್ ನ ಮೃತದೇಹ ರೈಲ್ವೆ ಹಳಿಯಲ್ಲಿ ಪತ್ತೆಯಾಗಿದೆ.

ಈ ಬಗ್ಗೆ ಬಂಟ್ವಾಳ ನಗರ ಠಾಣಾ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಉನ್ನತ ಮಟ್ಟದ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ರೈಲ್ವೆ ಇಲಾಖೆಯ ಅಧಿಕಾರಿಗಳು ಕೂಡ ಸ್ಥಳಕ್ಕೆ ಭೇಟಿ ನೀಡಿ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಸಾವಿನ ಬಗ್ಗೆ ಪೋಷಕರಿಗೆ ಸಂಶಯವಿರುವ ಹಿನ್ನೆಲೆಯಲ್ಲಿ ಪೋಲೀಸರು ತನಿಖೆ ಮುಂದುವರಿಸಿದ್ದಾರೆ‌ ಎಂದು ತಿಳಿದುಬಂದಿದೆ.

Leave A Reply