ಉರ್ದು ಶಾಲೆಯಲ್ಲಿ ಲಾಂಗ್ ಹಿಡಿದು ಸಾಲು ಸಾಲು ಕೇಕ್ ಕಟ್ ಮಾಡಿದ | ಭಯ ಹುಟ್ಟಿಸಿದ ಕಾರಣಕ್ಕೆ ಅರೆಸ್ಟ್ ಆದ

ಜನ್ಮದಿನದ ಆಚರಣೆ ವೇಳೆ ಯುವಕನೊಬ್ಬ ಲಾಂಗ್‌ನಿಂದ ಕೇಕ್ ಕಟ್ ಮಾಡಿ ಮೈಮೇಲೆ ಕೇಸು ಎಳೆದುಕೊಂಡಿದ್ದಾನೆ. ಈ ಘಟನೆ ಹಾವೇರಿ ಜಿಲ್ಲೆಯ ಉರ್ದು ಶಾಲಾ ಆವರಣದಲ್ಲಿ ನಡೆದಿರುವುದು ಬೆಳಕಿಗೆ ಬಂದಿದೆ.

ಹೊಸರಿತ್ತಿ ಗ್ರಾಮದ ಮಹಮ್ಮದ್ ಸಾಧಿಕ್ ಹವಾಲ್ದಾರ ಎಂಬ ಯುವಕ 4 ದಿನಗಳ ಹಿಂದೆ ಜನ್ಮದಿನದ ಆಚರಣೆ ವೇಳೆ ಸಾಲು ಸಾಲಾಗಿ ಒಟ್ಟು 8 ಕೇಕ್‌ಗಳನ್ನು ಇಟ್ಟು ಲಾಂಗ್‌ನಿಂದ ಕಟ್ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

ಆ ದೃಶ್ಯವನ್ನು ನೋಡಿದ ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ. ಸರ್ಕಾರಿ ಉರ್ದು ಶಾಲೆಯ ಆವರಣದಲ್ಲಿ ಮಾರಾಕಾಸ್ತ್ರಗಳನ್ನು ಬಳಸಿ ಜನ್ಮದಿನ ಆಚರಿಸಿರುವುದಕ್ಕೆ ಎಲ್ಲೆಡೆ ಆಕ್ರೋಶ ವ್ಯಕ್ತವಾಗಿದೆ. ಹಾಗಾಗಿ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಮ್ಮದ್ ಸಾಧಿಕ್‌ನನ್ನು ಬಂಧಿಸಲಾಗಿದೆ.

Ad Widget


Ad Widget


Ad Widget

Ad Widget


Ad Widget

ಕಳೆದ ಕೆಲವು ದಿನಗಳ ಹಿಂದೆ ಇದೇ ರೀತಿಯಲ್ಲಿ ಗ್ರಾಮದ ಯುವಕನೊಬ್ಬ ಸಹ ಜನ್ಮದಿನವನ್ನು ಆಚರಿಸಿಕೊಂಡಿದ್ದ. ಆತನಿಂದ ಪ್ರೇರಣೆಗೊಂಡ ಸಾಧಿಕ್ ಕೂಡ ಈ ರೀತಿಯಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾಗಿ ತಿಳಿದು ಬಂದಿದೆ.

Leave a Reply

Ad Widget >>^
Ad Widget
error: Content is protected !!
Scroll to Top
%d bloggers like this: