ಧರ್ಮಸ್ಥಳ: ಧರ್ಮಸ್ಥಳದ ಜೋಡುಸ್ಥಾನದಲ್ಲಿ ಮಹಿಳೆಯ ಬರೋ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿದ ಘಟನೆ ನಡೆದಿದೆ.
ರೇಖಾ ಬಿ.ಎಸ್. ಚನ್ನರಾಯ ಪಟ್ಟಣರವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜು.28ರಂದು ನಡೆದಿದೆ.
ಜೋಡುಸ್ಥಾನದ ನಾಗೇಶ್ ಭಂಡಾರಿ ಹಾಗೂ ಭವಾನಿ ದಂಪತಿಗಳ ಮಗಳ ಮದುವೆಗೆ ಆಗಮಿಸಿದ ಭವಾನಿಯವರ ತಂಗಿ ರೇಖಾ ಬಿ.ಎಸ್. ರವರು ಕಳೆದ ಹಲವು ದಿನಗಳಿಂದ ಮಕ್ಕಳೊಂದಿಗೆ ಇಲ್ಲಿಯೇ ಇದ್ದರು.
ಆಕೆ ಮೈಗ್ರೆನ್ ಹಾಗೂ ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದ ಇವರಿಗೆ ಚಿಕಿತ್ಸೆ ನಡೆಯುತ್ತಿತ್ತು. ಮೃತರು ಪತಿ ಪುಟ್ಟರಾಜು, ಪುತ್ರ ಚಿರಂತ್, ಪುತ್ರಿ ಮಾನ್ಯ ಹಾಗೂ ಬಂಧು ವರ್ಗದವರನ್ನು ಅಗಲಿದ್ದಾರೆ.
You must log in to post a comment.