ಪಾಪ್ಯುಲರ್ ಫ್ರಂಟ್ ನಿಂದ ಪ್ರವಾಹಪೀಡಿತರಿಗೆ ನೆರವು

ರಾಜ್ಯದಲ್ಲಿ ಸುರಿದ ಮಹಾಮಳೆಗೆ ಹಲವು ಪ್ರದೇಶಗಳು ತತ್ತರಿಸಿ ಹೋಗಿದ್ದು, ಈ ಸಂದರ್ಭದಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಕಾರ್ಯಕರ್ತರು ಪರಿಹಾರ ಕಾರ್ಯದಲ್ಲಿ ತೊಡಗಿಸಿಕೊಂಡರು.

 

ಪಾಪ್ಯುಲರ್ ಫ್ರಂಟ್ ರಕ್ಷಣಾ ಮತ್ತು ಪರಿಹಾರ ತಂಡವು ಪ್ರವಾಹಪೀಡಿತ ಪ್ರದೇಶಗಳಾದ ಬೆಳಗಾವಿ ಜಿಲ್ಲೆಯ ಗೋಕಾಕ್ ಮತ್ತು ಅಂಕಲ್ಗಿ, ಎಂ.ಕೆ.ಹುಬ್ಳಿ, ಕಿತ್ತೂರು, ಶಿವಮೊಗ್ಗದ ಭದ್ರಾವತಿ, ಇಮಾಮಬಾದ್, ಮುರಾದ್ ನಗರ್, ಬಾಗಲಕೋಟೆ ಜಿಲ್ಲೆಯ ಮುಧೋಳ ಮೊದಲಾದ ಪ್ರದೇಶಗಳಲ್ಲಿ ಪರಿಹಾರ ಕಾರ್ಯಾಚರಣೆಯನ್ನು ನಡೆಸಿದರು.

ಈ ಸಂದರ್ಭದಲ್ಲಿ ಪ್ರವಾಹಪೀಡಿತ ಪ್ರದೇಶಗಳ ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರ, ನೆರೆ ನೀರು ನುಗ್ಗಿದ ಮನೆಗಳಲ್ಲಿ ಸ್ವಚ್ಛತಾ ಕಾರ್ಯ, ತ್ಯಾಜ್ಯ ತುಂಬಿದ್ದ ಕಾಲುವೆಯ ಶುಚೀಕರಣ ಮತ್ತು ಸಂತ್ರಸ್ತ ಜನತೆ ಹಾಗೂ ಸಂಚಾರ ವ್ಯವಸ್ಥೆ ಸ್ಥಗಿತಗೊಂಡು ಸಂಕಷ್ಟಕ್ಕೊಳಗಾದ ವಾಹನ ಚಾಲಕರಿಗೆ ಪಾಪ್ಯುಲರ್ ಫ್ರಂಟ್ ಕಾರ್ಯಕರ್ತರು ಆಹಾರದ ವ್ಯವಸ್ಥೆಯನ್ನು ಕಲ್ಪಿಸಿದರು.

Leave A Reply

Your email address will not be published.