ಕುಲಾಲ ಯಾನೆ ಕುಂಬಾರ ಸಮುದಾಯದವರಿಗೆ ರಾಜ್ಯ ಮಟ್ಟದ ಕಥೆ, ಕವನ ಹಾಗೂ ಪ್ರಬಂಧ ಸ್ಪರ್ಧೆ

ಪುತ್ತೂರು : ಪುತ್ತೂರು ಕುಲಾಲ ಸಮಾಜ ಸೇವಾ ಸಂಘದ (ರಿ.) ವತಿಯಿಂದ ಕುಲಾಲ ಯಾನೆ ಕುಂಬಾರ ಸಮುದಾಯದ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ರಾಜ್ಯ ಮಟ್ಟದ ಕಥೆ, ಕವನ, ಪ್ರಬಂಧ ಸ್ಪರ್ಧೆಯನ್ನು ಆಯೋಜಿಸಲಾಗಿದೆ.

ಸ್ಪರ್ಧೆಗಳ ವಿವರ:

ಹೈಸ್ಕೂಲ್, ಕಾಲೇಜು ಹಾಗೂ ಹಿರಿಯರ ವಿಭಾಗದಲ್ಲಿ ಸ್ಪರ್ಧೆಗಳನ್ನು ಏರ್ಪಡಿಸಲಾಗಿದ್ದು, ಪ್ರತೀ ವಿಭಾಗದಲ್ಲಿ ಪ್ರಥಮ, ದ್ವಿತೀಯ, ಹಾಗೂ 5 ಜನರಿಗೆ ಸಮಾಧಾನಕರ ಬಹುಮಾನ ಹಾಗೂ ಪ್ರಶಸ್ತಿ ಪತ್ರವನ್ನು ನೀಡಲಾಗುವುದು. ಪ್ರಬಂಧ ಹಾಗೂ ಕಥೆಗಳು 3 ಪುಟಕ್ಕೆ ಮೀರದಂತಿರಬೇಕು.

Ad Widget


Ad Widget


Ad Widget

Ad Widget


Ad Widget

ಪ್ರಬಂಧ ಸ್ಪರ್ಧೆಯ ವಿಷಯ:

“ಸಾಮಾಜಿಕ ಸುಧಾರಣೆಯಲ್ಲಿ ಸರ್ವಜ್ಞನ ವಚನಗಳ ಮಹತ್ವ”

ಸ್ಪರ್ಧೆಯಲ್ಲಿ ಭಾಗವಹಿಸುವ ಸ್ಪರ್ಧಾಳುಗಳು ಆಗಸ್ಟ್ ತಿಂಗಳ 30ರ ಒಳಗೆ ತಮ್ಮ ಹೆಸರು, ವಿಳಾಸ, ವಯಸ್ಸು, ವಿಭಾಗ, ಮೊಬೈಲ್ ಸಂಖ್ಯೆ, ಹಾಗೂ ವ್ಯಾಪ್ತಿಯ ಕುಲಾಲ ಅಥವಾ ಕುಂಬಾರ ಸಂಘದ ವಿವರಗಳೊಂದಿಗೆ ನೊಂದಾಯಿತ ಅಂಚೆಯ ಮೂಲಕ ಅಧ್ಯಕ್ಷರು/ಪ್ರಧಾನಕಾರ್ಯದರ್ಶಿ, ಕುಲಾಲ ಸಮಾಜ ಸೇವಾ ಸಂಘ ರಿ.,ಪುತ್ತೂರು ಸರಕಾರಿ ಆಸ್ಪತ್ರೆ ಬಳಿ, ಸೈನಿಕ ರಸ್ತೆ, ಪುತ್ತೂರು ತಾಲೂಕು, ದ.ಕ. 574201 ಇಲ್ಲಿಗೆ ಕಳಿಸುವುದು.

Leave a Reply

Ad Widget >>^
Ad Widget
error: Content is protected !!
Scroll to Top
%d bloggers like this: