ಪ್ರಾಥಮಿಕ ಶಾಲೆಗಳನ್ನು ಮೊದಲು ಪ್ರಾರಂಭಿಸಲು ಹೇಳಿದ ತಜ್ಞರ ತಂಡ | ಆಗಸ್ಟ್ 2 ರಿಂದ 1 ರಿಂದ 3 ನೆಯ ತರಗತಿಗಳು ಶುರು ಬಹುತೇಕ ಫಿಕ್ಸ್ !

ಆಗಸ್ಟ್ 2ರಿಂದ ಪ್ರಾಥಮಿಕ ಶಾಲೆಗಳನ್ನು ತೆರೆಯಲು ತಜ್ಞರು ಸಲಹೆ ನೀಡಿದ್ದಾರೆ.
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಂಸ್ಥೆಯು ನೇಮಿಸಿದ್ದ ತಜ್ಞರ ತಂಡವು, ಎಷ್ಟು ಸಾಧ್ಯವೋ ಅಷ್ಟು ಬೇಗ ಪ್ರಾಥಮಿಕ ಶಾಲೆಗಳನ್ನು ತೆರೆಯಲು ಹೇಳಿದ್ದು ಆಗಸ್ಟ್ 2 ರಿಂದ ಶಾಲೆಯನ್ನು ತೆರೆಯಲು ಅನುಮೋದಿಸಿದೆ.

ಒಂದು ವೇಳೆ ಹಂತಹಂತವಾಗಿ ಶಾಲೆಗಳನ್ನು ತೆರೆಯಲು ನಿರ್ಧರಿಸಿದರೆ, ಮೊದಲ ಪ್ರಾಶಸ್ತ್ಯ ವಾಗಿ ಒಂದನೇ ತರಗತಿಯಿಂದ ಐದನೆಯ ತರಗತಿಯವರೆಗೆ ಶಾಲೆಗಳನ್ನು ತೆರೆಯಲು ಸೂಚಿಸಿದೆ.
ಮೊದಲ ಹಂತದಲ್ಲಿ ಒಂದರಿಂದ ಮೂರನೇ ತರಗತಿಯವರೆಗೆ ಶಾಲೆ ಪ್ರಾರಂಭಿಸಿ, ಆನಂತರ ನಾಲ್ಕು ಮತ್ತು ಐದು ತರಗತಿಯನ್ನು ತೆರೆಯಲು ಸಲಹೆ ನೀಡಿದೆ.

ಆನ್ಲೈನ್ ಶಿಕ್ಷಣವು ಭೌತಿಕ ಶಿಕ್ಷಣಕ್ಕೆ ಯಾವುದೇ ಕಾರಣಕ್ಕೂ ಸಮನಾಗಲಾರವು. ಮಕ್ಕಳು ಮತ್ತು ಶಿಕ್ಷಕರ ಮುಖಾಮುಖಿ ಕಲಿಕೆ ಅತ್ಯಂತ ಮುಖ್ಯವಾದದ್ದು. ಆದ್ದರಿಂದ ಆದಷ್ಟು ಬೇಗ ಭೌತಿಕ ಕ್ಲಾಸ್ಗಳು ನಡೆಯಬೇಕು ಎಂದಿದೆ ತಜ್ಞರ ತಂಡ. ಅಲ್ಲದೆ ವಾರದ ಆರು ದಿನಗಳಲ್ಲಿಯೂ ಶಾಲೆಗಳು ತೆರೆದಿರಬೇಕು. ದಿನಕ್ಕೆ ಮೂರು ಗಂಟೆ ಮಾತ್ರ ಪಾಠ ಪ್ರವಚನ ಇರಬೇಕು. ಹಾಗಾಗಿ, ಬೆಳಗಿನ ಹೊತ್ತು 1 ರಿಂದ 3 ನೆಯ ಕ್ಲಾಸಿನವರೆಗೆ ಶಾಲೆ ನಡೆಸಿ, ಮದ್ಯಾಹ್ನದ ನಾಂತರ 4 ಮತ್ತು 5 ರ ಕ್ಲಾಸ್ ನಡೆಸಲು ಹೇಳಿದೆ.

Ad Widget / / Ad Widget

ಒಂದರಿಂದ ಐದನೇ ತರಗತಿ ಶಾಲಾ ಚಟುವಟಿಕೆ ಆರಂಭವಾದ ವಾರಗಳ ನಂತರ 6ನೇ ತರಗತಿಯಿಂದ ಪಿಯುಸಿಯವರೆಗೆ ಶಾಲಾ-ಕಾಲೇಜುಗಳನ್ನು ತೆರೆಯಲು ತಜ್ಞರು ಸೂಚಿಸಿದ್ದಾರೆ.

ಕ್ಲಾಸುಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಸಂಖ್ಯೆ, ಪೂರ್ತಿ ವಿದ್ಯಾರ್ಥಿಗಳು ಕ್ಲಾಸಿನಲ್ಲಿ ಭಾಗವಹಿಸಬಹುದು, ಒಂದು ವೇಳೆ ಅಧಿಕ ಸಂಖ್ಯೆಯ ವಿದ್ಯಾರ್ಥಿಗಳು ಇರುವ ಸಂದರ್ಭದಲ್ಲಿ ಎರಡು ಬ್ಯಾಚುಗಳಲ್ಲಿ ಪಾಠ ನಡೆಸಲು ಸಲಹೆ ಬಂದಿದೆ.

ಇದೀಗ ಬಂದ ಸುದ್ದಿಯ ಪ್ರಕಾರ ಕಡ್ಡಾಯವಾಗಿ ಪ್ರಾಥಮಿಕ ಶಿಕ್ಷಣ, ಹೈಸ್ಕೂಲು ಮತ್ತು ಕಾಲೇಜು ಶುರುವಾಗುವ ಮೊದಲು ಶುರುಮಾಡಲು ಕರ್ನಾಟಕ ಸರಕಾರ ನೇಮಿಸಿದ್ದ ತಜ್ಞರ ತಂಡ ಮತ್ತು ಈ ಹಿಂದೆ ಐಸಿಎಂಆರ್ ಕೂಡ ಅದನ್ನೇ ಹೇಳಿದ್ದು, ಆಗಸ್ಟ್ ಎರಡರಿಂದ ಶಾಲಾ ಚಟುವಟಿಕೆಗಳು ಪ್ರಾರಂಭವಾಗುವುದು ಬಹುತೇಕ ಫಿಕ್ಸ್.

Leave a Reply

error: Content is protected !!
Scroll to Top
%d bloggers like this: