ಇನ್ನೆರಡು ದಿನಗಳಲ್ಲಿ ಗಂಡನ ಸಾವು ಖಚಿತ !! |ಕೃತಕ ಗರ್ಭಧಾರಣೆಗೆ ಗಂಡನ ವೀರ್ಯವೇ ಬೇಕೆಂದ ಪತಿವೃತೆ!!

ತನ್ನ ಗಂಡ ಸಾಯುತ್ತಿದ್ದಾನೆ, ಇನ್ನೇನು ಒಂದೆರಡು ದಿನಗಳಲ್ಲಿ ಆತ ಇಹಲೋಕ ತ್ಯಜಿಸಿ ಬಿಡುತ್ತಾನೆ ಎಂದರೆ ಎಂಥ ಪತ್ನಿಗೂ ಕೂಡಾ ಬರಸಿಡಿಲು ಬಡಿದಂತಾಗುವುದು ಸಾಮಾನ್ಯ. ಆದರೆ ಇಲ್ಲೊಬ್ಬ ಮಹಿಳೆಗೆ ತನ್ನ ಗಂಡ ಸಾಯುವ ಸ್ಥಿತಿಯಲ್ಲಿರುವಾಗ ಆತನ ವೀರ್ಯ ಸಂಗ್ರಹಣೆ ಮಾಡಬೇಕು, ಆ ಮೂಲಕ ತಾನು ಕೃತಕ ಗರ್ಭಧಾರಣೆ ಮಾಡಬೇಕು ಇದಕ್ಕೆ ಅನುಮತಿ ನೀಡಿ ಎಂದು ಕೋರ್ಟ್ ಮೊರೆ ಹೋಗಿರುವ ಘಟನೆ ಗುಜರಾತ್ ನಲ್ಲಿ ನಡೆದಿದೆ.

ಘಟನೆ ವಿವರ:ಮಹಿಳೆಯ ಪತಿ ಕೋವಿಡ್ 19 ಸೊಂಕಿಂನಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದು, ಆಸ್ಪತ್ರೆಯ ವರದಿಯ ಪ್ರಕಾರ ಆತನ ಪ್ರಜ್ಞೆ ತಪ್ಪಿದ್ದು,ಇನ್ನೆರಡು ದಿನಗಳಲ್ಲಿ ಆತನ ಸಾವು ಖಚಿತವಾಗುತ್ತದೆ. ಇದನ್ನು ತಿಳಿದ ಆ ಮಹಿಳೆ ಆತನ ತನ್ನ ಗಂಡನ ವೀರ್ಯದಿಂದಲೇ ತಾನು ಗರ್ಭ ವತಿಯಾಗಬೇಕು, ತನ್ನ ಗಂಡನ ವೀರ್ಯವನ್ನು ಸಂಗ್ರಹಿಸಲು ಅನುಮತಿ ನೀಡಬೇಕೆಂದು ಪತಿಯ ಕುಟುಂಬಸ್ಥರ ಸಮ್ಮುಖದಲ್ಲಿ ಗುಜರಾತ್ ಕೋರ್ಟ್ ಗೆ ಮನವಿ ಸಲ್ಲಿಸುತ್ತಾಳೆ.

ಈ ಬಗ್ಗೆ ಮಹಿಳೆಯ ಪರ ವಕೀಲೆ ನಿಲೇ ಪಟೇಲ್ ನ್ಯಾಯಾಲಯದಲ್ಲಿ ಮನವಿ ಮಾಡಿದಾಗ ವೈದ್ಯಕೀಯ ಸಲಹೆಯ ಪ್ರಕಾರ ವೀರ್ಯ ಸಂಗ್ರಹಿಸಿಡಲು ಆಸ್ಪತ್ರೆಗೆ ಆದೇಶ ನೀಡಿತ್ತು. ಆದರೂ ಮುಂದಿನ ಆದೇಶದವರೆಗೂ ಕೃತಕ ಗರ್ಭಧಾರಣೆಯೊಂದಿಗೆ ಮುಂದುವರಿಯಲು ನ್ಯಾಯಾಲಯವು ಅನುಮತಿ ನೀಡಿಲ್ಲ. ಈ ಬಗ್ಗೆ ಪುನಃ ವಿಚಾರಣೆ ನಡೆಯುವ ಸಾಧ್ಯತೆ ಇದೆ.

Ad Widget
Ad Widget

Ad Widget

Ad Widget

ಒಟ್ಟಿನಲ್ಲಿ ಇನ್ನೇನು ಸಾಯಲಿರುವ ತನ್ನ ಪ್ರೀತಿಯ ಗಂಡನ ವೀರ್ಯದಿಂದಲೇ ತನಗೆ ಮಗು ಹುಟ್ಟಬೇಕು ಎಂದು ಕೋರ್ಟ್ ಮೆಟ್ಟಿಲೇರಿದ ಈ ಪ್ರಕರಣ ಅಪರೂಪದಲ್ಲಿ ಅಪರೂಪವಾಗಿದೆ.

Leave a Reply

error: Content is protected !!
Scroll to Top
%d bloggers like this: