ಶಿರಾಡಿಯ ನಂತರ ಚಾರ್ಮಾಡಿ ಘಾಟ್ ನಲ್ಲಿ ಆಯ್ತು ಭೂ ಕುಸಿತ | ಬಂದ್ ಆಗಲಿದೆಯಾ ಈ ರಸ್ತೆ ಸಂಚಾರ ?!
ಬೆಳ್ತಂಗಡಿ : ದಕ್ಷಿಣ ಕನ್ನಡ ಜಿಲ್ಲೆಯ ವಿವಿಧೆಡೆ ವಿಪರೀತ ಮಳೆಯಾಗಿದ್ದು, ನಿರಂತರ ಮಳೆಯ ಆರ್ಭಟಕ್ಕೆ ಶಿರಾಡಿ ಘಾಟ್ ಬಳಿಕ ಈಗ ಚಾರ್ಮಾಡಿ ಘಾಟ್ ಪ್ರದೇಶದಲ್ಲೂ ಕೂಡ ಭೂಕುಸಿತ ಉಂಟಾಗಿದೆ.
ಚಾರ್ಮಾಡಿ ಘಾಟಿಯ ಏಳನೇ ತಿರುವಿನಲ್ಲಿ ಸಣ್ಣ ಮಟ್ಟದ ಭೂಕುಸಿತ ಉಂಟಾದ ಕಾರಣದಿಂದ ಅಧಿಕಾರಿಗಳು ತ್ವರಿತವಾಗಿ ಪರಿಶೀಲನೆಗೆ ಮುಂದಾಗಿದ್ದಾರೆ.
ಯಾವುದೇ ಸಂದರ್ಭದಲ್ಲಿಯೂ ಕೂಡ ಭೂಕುಸಿತ ಹೆಚ್ಚಾಗುವ ಸಾಧ್ಯತೆ ಇದ್ದು ಬೆಳ್ತಂಗಡಿ ಅರಣ್ಯ ಇಲಾಖೆಯ ಸಿಬ್ಬಂದಿಗಳು ಪೂರ್ವ ಸಿದ್ಧತೆಯೊಂದಿಗೆ ಘಾಟಿಯಲ್ಲಿ ಅಗತ್ಯ ಪರಿಕರಗಳೊಂದಿಗೆ ಇದೀಗ ಮೊಕ್ಕಾಂ ಹೂಡಿದ್ದಾರೆ.
ಚಾರ್ಮಾಡಿ ಫಾರೆಸ್ಟರ್ ರವೀಂದ್ರ ಅಂಕಲಗಿ, ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು ಹಾಗೂ ಬೆಳ್ತಂಗಡಿ ತಹಶಿಲ್ದಾರ್ ಮಹೇಶ್ ಹಾಗೂ ಹಲವು ಸಿಬ್ಬಂದಿಗಳು ಕೂಡಲೇ ಕುಸಿತ ಉಂಟಾದ ಜಾಗಕ್ಕೆ ತೆರಳಿ ಸ್ಥಳ ಪರಿಶೀಲನೆಯನ್ನು ಮಾಡುತ್ತಿದ್ದಾರೆ.