ಕೊನೆಗೂ ಮೌನ ಮುರಿದ ಶಿಲ್ಪಾ ಶೆಟ್ಟಿ | ನಾನು ಇನ್ನೂ ಜೀವಂತವಾಗಿರುವುದು ಅದೃಷ್ಟ ಎನ್ನುವ ಮೂಲಕ ಪತಿಯ ಕೃತ್ಯದ ಬಗ್ಗೆ ನೋವು ತೋಡಿಕೊಂಡ ನಟಿ

ಬ್ಲೂಫಿಲ್ಮ್ ದಂಧೆಯಲ್ಲಿ ಬಂಧನವಾಗಿರುವ ಉದ್ಯಮಿ ರಾಜ್ ಕುಂದ್ರಾ ಕುರಿತು ಪತ್ನಿ ಶಿಲ್ಪಾ ಶೆಟ್ಟಿ ಕೊನೆಗೂ ಮೌನ ಮುರಿದಿದ್ದಾರೆ.

ಗುರುವಾರ ರಾತ್ರಿ ಇನ್ ಸ್ಟಾಗ್ರಾಂ ಸ್ಟೋರಿಯಲ್ಲಿ ಲೇಖಕ ಜೇಮ್ಸ್ ಥರ್ಬರ್ ಪುಸ್ತಕದ ಪೇಜ್ ಒಂದನ್ನು ಶಿಲ್ಪಾ ಶೆಟ್ಟಿ ಶೇರ್ ಮಾಡಿಕೊಂಡಿದ್ದಾರೆ.

ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಪೇಜ್‌ನ ಒಂದು ಭಾಗವನ್ನು ಉಲ್ಲೇಖಿಸಿದ್ದಾರೆ. ಅದರಲ್ಲಿ ನಾವು ಇರಬೇಕಾದ ಸ್ಥಳವು ಇದೀಗ ಇಲ್ಲಿಯೇ ಇದೆ. ಏನಾಗಿದೆ ಅಥವಾ ಏನಾಗಿರಬಹುದು ಎಂದು ಆತಂಕದಿಂದ ನೋಡುತ್ತಿಲ್ಲ. ಆದರೆ, ಯಾವುದು ಎಂಬುದರ ಬಗ್ಗೆ ಸಂಪೂರ್ಣವಾಗಿ ತಿಳಿದಿದೆ” ಎಂದು ಬರೆಯಲಾಗಿದ್ದು, ಸವಾಲುಗಳನ್ನು ಎದುರಿಸುವ ಬಗ್ಗೆ ಮಾತನಾಡಿದ್ದಾರೆ.

Ad Widget


Ad Widget


Ad Widget

Ad Widget


Ad Widget

ನಾನು ಜೀವಂತವಾಗಿರುವುದು ಅದೃಷ್ಟ ಎಂದು ತಿಳಿದಾಗ ನಾನು ದೀರ್ಘ ಉಸಿರನ್ನು ತೆಗೆದುಕೊಂಡೆ. ಹಿಂದೆಯು ಸವಾಲುಗಳಿಂದಲೇ ಉಳಿದಿದ್ದೇನೆ ಮತ್ತು ಭವಿಷ್ಯದಲ್ಲೂ ಸವಾಲುಗಳಿಂದಲೇ ಉಳಿದುಕೊಳ್ಳುತ್ತೇನೆ. ಇಂದಿನ ನನ್ನ ಜೀವನವನ್ನು ತಡೆಯುವ ಯಾವುದರ ಬಗ್ಗೆಯೂ ನಾನು ಗಮನವಹಿಸುವುದಿಲ್ಲ ಎಂದು ಮಾರ್ಮಿಕವಾಗಿ ನುಡಿದಿದ್ದಾರೆ.

ಮುಂಬೈ ಪೊಲೀಸರ ಪ್ರಕಾರ ಬ್ಲೂ ಫಿಲ್ಮ್ ದಂಧೆಯಲ್ಲಿ, ಪೋರ್ನ್ ವಿಡಿಯೋಗಳನ್ನು ತಯಾರಿಸಿ ಅದನ್ನು ಬೇರೆ ದೇಶದ ವಿವಿಧ ಆ್ಯಪ್‌ಗಳಲ್ಲಿ ಅಪ್‌ಲೋಡ್ ಮಾಡಿರುವ ಗಂಭೀರ ಆರೋಪದ ಮೇಲೆ ರಾಜ್ ಕುಂದ್ರಾರನ್ನು ಬಂಧಿಸಲಾಗಿದೆ. ಈ ಪ್ರಕರಣದಲ್ಲಿ ಶಿಲ್ಪಾ ಶೆಟ್ಟಿ ಅವರ ಯಾವುದೇ ಸಕ್ರಿಯ ಪಾತ್ರವಿಲ್ಲ ಎಂಬುದು ತನಿಖೆ ಮೂಲಕ ಬಹಿರಂಗವಾಗಿದೆ.

Leave a Reply

Ad Widget >>^
Ad Widget
error: Content is protected !!
Scroll to Top
%d bloggers like this: