ಯಡಿಯೂರಪ್ಪನವರನ್ನು ಕೆಳಗಿಳಿಸುವುದಕ್ಕೆ ಕಾರಣ ಕೊಡಿ, ಬಿಜೆಪಿ ಹಿಂದೆ ಮಾಡಿದ ತಪ್ಪನ್ನೆ ಮಾಡುತ್ತಿರುವುದೇಕೆ? | ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಪ್ರಶ್ನೆ !!
ನವದೆಹಲಿ: ಸಿಎಂ ಬಿ.ಎಸ್.ಯಡಿಯೂರಪ್ಪ ಬದಲಾವಣೆ ವದಂತಿ ಮತ್ತು ಇದೀಗ ಅದು ರಿಯಾಲಿಟಿ ಎಂದು ಸ್ಪಷ್ಟವಾಗುತ್ತಿರುವ ಹಿನ್ನೆಲೆಯಲ್ಲಿ ಯಡಿಯೂರಪ್ಪ ಪರ ಸ್ವಾಮೀಜಿಗಳು ಬ್ಯಾಟಿಂಗ್ ಮಾಡಿ ಆಯ್ತು. ನಿಧಾನಕ್ಕೆ ಕರ್ನಾಟಕದ ವಿರೋಧಪಕ್ಷದ ನಾಯಕರುಗಳು ಕೂಡ ಯಡಿಯೂರಪ್ಪನವರನ್ನು ಸಪೋರ್ಟ್ ಮಾಡಿದ್ದಾರೆ. ಅಷ್ಟೇ ಅಲ್ಲದೆ ಜನರಲ್ಲೂ ಜನಸಾಮಾನ್ಯರಲ್ಲೂ ಒಂದು ಅಭಿಪ್ರಾಯ ಮೂಡಿದೆ. ಯಡಿಯೂರಪ್ಪನವರನ್ನು ಯಾವ ಕಾರಣಕ್ಕಾಗಿ ಬದಲಾಯಿಸುತ್ತಿರುವುದು ಅದು ಕೇವಲ ಒಂದೆರಡು ವರ್ಷ ಅಧಿಕಾರ ಇರುವಾಗ ?! ಇದಕ್ಕೆ ಕೇಂದ್ರ ಹೈಕಮಾಂಡ್ ಉತ್ತರಿಸುತ್ತಿಲ್ಲ.
ಇದೀಗ ಯಡಿಯೂರಪ್ಪ ಪರ ಬ್ಯಾಟಿಂಗ್ ಮಾಡಿರುವ ಬಿಜೆಪಿ ಹಿರಿಯ ಮುಖಂಡ ಸುಬ್ರಹ್ಮಣಿಯನ್ ಸ್ವಾಮಿ, ಬಿಜೆಪಿ ಹಳೇ ತಪ್ಪನ್ನೆ ಮತ್ತೆ ಮಾಡಲು ಹೊರಟಿದೆ ಎಂದು ಕಿಡಿಕಾರಿದ್ದಾರೆ.
ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಸುದ್ದಿ ಹಿನ್ನೆಲೆಯಲ್ಲಿ ಟ್ವೀಟ್ ಮಾಡಿರುವ ಸುಬ್ರಹ್ಮಣಿಯನ್ ಸ್ವಾಮಿ, ಕರ್ನಾಟಕದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತಂದವರೇ ಬಿ.ಎಸ್.ಯಡಿಯೂರಪ್ಪ. ಅವರು ಬೇರೆ ನಾಯಕರಿಗೆ ಚಮಚ ಆಗದೇ ಕಾರ್ಯನಿರ್ವಹಿಸುತ್ತಿರುವುದರಿಂದ ಬಿಎಸ್ ವೈ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸುವ ಷಡ್ಯಂತ್ರವನ್ನು ಕೆಲವರು ನಡೆಸಿದ್ದಾರೆ ಎಂದಿದ್ದಾರೆ.
ಯಡಿಯೂರಪ್ಪ ಇಲ್ಲದೇ ಕರ್ನಾಟಕದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ. ಬಿಜೆಪಿ ಈ ಹಿಂದೆ ಮಾಡಿದ ತಪ್ಪನ್ನೇ ಮತ್ತೆ ಯಾಕೆ ಮಾಡಲು ಹೊರಟಿದೆ? ಎಂದು ಪ್ರಶ್ನಿಸಿದ್ದಾರೆ. ಈ ಮೂಲಕ ಸುಬ್ರಹ್ಮಣಿಯನ್ ಸ್ವಾಮಿ ಸಿಎಂ ಯಡಿಯೂರಪ್ಪನವರಿಗೆ ಬಹಿರಂಗವಾಗಿ ಬೆಂಬಲ ವ್ಯಕ್ತಪಡಿಸಿದ್ದು, ಸಿಎಂ ಬದಲಾವಣೆ ನಿಟ್ಟಿನಲ್ಲಿ ನಡೆಸುತ್ತಿರುವ ಹಲವರ ತಂತ್ರವನ್ನು ಖಂಡಿಸಿದ್ದಾರೆ.
ಇವತ್ತಿಗೆ ಕೂಡ ದೆಹಲಿಯಲ್ಲೇ ಕುಳಿತ ಹೈಕಮಾಂಡ್ ಧನಿಗಳು ವಾಸ್ತವ ಸ್ಥಿತಿ ಅರಿಯದೆ ಅಲ್ಲಿಂದಲೇ ನಿರ್ಧಾರ ಉದುರಿಸುತ್ತಿರುವುದು ಬಿಜೆಪಿಯ ಬಗೆಗೆ ಒಂದು ರೀತಿಯ ಅಸಹನೆ ಒಟ್ಟಾರೆಯಾಗಿ ಕಂಡುಬರುತ್ತಿದೆ. ಕಾರಣ ಹೇಳದೆ ಕಳಿಸುವುದನ್ನು ಯಾರು ಯಾವತ್ತೂ ಒಪ್ಪಿಕೊಳ್ಳುವುದಿಲ್ಲ. ಒಂದು ಬಲವಾದ ಕಾರಣ ನೀಡಿ ಏನನ್ನು ಬೇಕಾದರೂ ಸಾಧಿಸಬಹುದು. ಆದರೆ ಬಿಜೆಪಿಯ ಹೈಕಮಾಂಡ್ ಏಕಮುಖ ನಿರ್ಧಾರ ತೆಗೆದುಕೊಳ್ಳುತ್ತಿದ್ದು, ಇದು ಭವಿಷ್ಯದಲ್ಲಿ ಮತ್ತೆ ಅಧಿಕಾರ ಹಿಡಿಯುವ ಬಿಜೆಪಿಯ ಕನಸಿಗೆ ದೊಡ್ಡ ಅಡ್ಡಗಾಲು ಆಗುವ ಸಂಭವವೇ ಹೆಚ್ಚು.