ಮಹೇಶ್ ಶೆಟ್ಟಿ ತಿಮರೋಡಿ ಹೆಸರಿನಲ್ಲಿ ನಕಲಿ ಇನ್ಸ್ಟಾಗ್ರಾಂ ಖಾತೆ ತೆರೆದು ವಿಕೃತ ಸಂದೇಶ | ಹಿಂದು ಜಾಗರಣ ವೇದಿಕೆಯಿಂದ ದೂರು !

ಸಾಮಾಜಿಕ ಹೋರಾಟಗಾರ ಮತ್ತು ಹಿಂದೂ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಅವರ ಹೆಸರಿನಲ್ಲಿ ನಕಲಿ ಇಂಸ್ಟಗ್ರಾಂ ಖಾತೆ ತೆರೆಯಲಾಗಿದೆ. ಇದರ ವಿರುದ್ಧ ಇದೀಗ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ.

ಯಾರೋ ಕಿಡಿಗೇಡಿಗಳು ಸಾಮಾಜಿಕ ಜಾಲತಾಣದಲ್ಲಿ ಅವರ ಭಾವ ಚಿತ್ರವನ್ನು ಬಳಸಿ, ನಕಲಿ ಖಾತೆ ತೆರೆದಿದ್ದಾರೆ. ಅಲ್ಲದೇ ಅದೇ ಖಾತೆಯಿಂದ ವಿಕೃತ ರೀತಿಯ ಸಂದೇಶಗಳನ್ನು ರವಾನಿಸುತ್ತಿದ್ದು ಹಾಗೂ ಪ್ರಚೋದನಕರ ರೀತಿಯಲ್ಲಿ ಸಂದೇಶಗಳನ್ನು ಹರಿಯಬಿಡುತ್ತಿದ್ದು ಈ ಬಗ್ಗೆ ಗಮನ ಹರಿಸುವಂತೆ ಬೆಳ್ತಂಗಡಿ ಠಾಣೆಯಲ್ಲಿ ದೂರು ನೀಡಲಾಗಿದೆ.

ಅವಹೇಳನಕಾರಿ ಕೃತ್ಯ ಎಸಗಿದವರ ವಿರುದ್ಧ ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆ ಆಕ್ರೋಶ ವ್ಯಕ್ತಪಡಿಸಿದ್ದು, ದುಷ್ಕೃತ್ಯ ಎಸಗಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಮನವಿ ಸಲ್ಲಿಸಲಾಗಿದೆ. ಈ ಸಂದರ್ಭದಲ್ಲಿ ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆಯ ಗೌರವಾಧ್ಯಕ್ಷರಾದ ಹರೀಶ್ ಕುಮಾರ್ ಬರಮೇಲು, ಬೆಳ್ತಂಗಡಿ ತಾಲ್ಲೂಕು ಅಧ್ಯಕ್ಷರಾದ ಅನಿಲ್ ಕುಮಾರ್ ಅಂತರ, ತಾಲೂಕು ಸಂಚಾಲಕ ಮನೋಜ್ ಕುಮಾರ್ ಕುಂಜರ್ಪ, ತಾಲ್ಲೂಕು ಕಾರ್ಯದರ್ಶಿ ಸಂದೀಪ್ ಶೆಟ್ಟಿ, ತಾಲ್ಲೂಕು ಜಾಲತಾಣ ಸಂಚಾಲಕ ಪ್ರಜ್ವಲ್ ಗೌಡ ಕೆ.ವಿ ಹಾಗೂ ಗಣೇಶ್ ಶೆಟ್ಟಿ ಕುಂಟಿನಿ ಉಪಸ್ಥಿತರಿದ್ದರು.

Ad Widget


Ad Widget

Leave a Reply

Ad Widget
error: Content is protected !!
Scroll to Top
%d bloggers like this: