ಕಾಡು ಬಿಟ್ಟು ನಾಡಿನತ್ತ ಬಂದ ಆನೆಗೆ ಹೃದಯಾಘಾತ

ಕಾಡು ಬಿಟ್ಟು ಊರಿಗೆ ಬರುತ್ತಿರುವ ಆನೆಗಳ ಸಂಖ್ಯೆ ಹೆಚ್ಚಾಗಿದ್ದು,ಇದೀಗ ಅಂದಾಜು 18ರಿಂದ 22 ವಯಸ್ಸಿನ ಗಂಡಾನೆಯೊಂದು ತೋಟವೊಂದರಲ್ಲಿ ಹೃದಯಘಾತಕ್ಕೆ ತುತ್ತಾದ ಘಟನೆ ನಡೆದಿದೆ.

ಮಾಯಮುಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಧನುಗಾಲದ ಬಸಪ್ಪ ರಸ್ತೆಯ ಸಮೀಪದ ತೋಟವೊಂದರಲ್ಲಿ ಮಂಗಳವಾರ ರಾತ್ರಿ ಯಿಂದಲೇ ಆನೆ ಘೀಳಿಡುತ್ತಿದ್ದು ಶಬ್ಧ ಊರಿನವರಿಗೆ ಕೇಳಿ ಬಂದಿದ್ದು, ಇದೀಗ ಕಾಡಾನೆ
ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.

ಆನೆಯ ಮೇಲೆ ಯಾವುದೇ ರೀತಿಯ ಗಾಯಗಳು ಮತ್ತು ಯಾವುದೇ ತರಹದ ಕುರುಹುಗಳು ಕಂಡು ಬರುತ್ತಿರಲಿಲ್ಲ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ಘಟನೆ ತಿಳಿದ ಬಳಿಕ ಸ್ಥಳಕ್ಕೆ ಪೊನ್ನಂಪೇಟೆ, ತಿತಿಮತಿ ವಲಯ
ಅರಣ್ಯಾಧಿಕಾರಿಗಳಾದ ರಾಮಪ್ಪ, ಕಿರಣ್ ಕುಮಾರ್ ಭೇಟಿ ನೀಡಿ ಮಹಜರು ನಡೆಸಿದ್ದಾರೆ.
ಪಶುವೈದ್ಯಾಧಿಕಾರಿ ಡಾ. ಚಿಟ್ಟಿಯಪ್ಪ ಮೃತ
ಕಾಡಾನೆಯ ಮರಣೋತ್ತರ ಪರೀಕ್ಷೆ ನಡೆಸಿದರು.

Leave A Reply

Your email address will not be published.