ಗಂಟೆಗೆ 28,800 ಕಿ.ಮೀ ಅನೂಹ್ಯ ವೇಗದಲ್ಲಿ ಭೂಮಿಯತ್ತ ಧಾವಿಸುತ್ತಿರುವ ಬಹುದೊಡ್ಡ ಕ್ಷುದ್ರ ಗ್ರಹ | ಭೂಮಿಗೆ ಬಿದ್ದರೆ ನಗರಕ್ಕೆ ನಗರವೇ ಉಡೀಸ್ !
ಬಾಹ್ಯಾಕಾಶದಿಂದ ಭಾರಿ ವಿಪತ್ತೊಂದು ಭೂಮಿಯತ್ತ ವೇಗವಾಗಿ ಧಾವಿಸಿ ಬರುತ್ತಿದೆ. ಇದು ಕ್ಷುದ್ರಗ್ರಹವೊಂದಾಗಿದ್ದು ಇದು ಭೂಮಿಗೆ ಅಪ್ಪಳಿಸುವ ಕಾಲ ಸನ್ನಿಹಿತವಾಗಿದೆ.
ದಿನನಿತ್ಯ ಭೂಮಿಯ ಮೇಲೆ ಹತ್ತು ಹಲವು ಕ್ಷುದ್ರಗ್ರಹಗಳು ಭೂಮಿಯತ್ತ ಧಾವಿಸುತ್ತವೆ. ಬಹುತೇಕ ಗ್ರಹಗಳು ಭೂಮಿಯ ವಾತಾವರಣ ಬರುವ ಮುನ್ನವೇ ಉರಿದು ಬೂದಿಯಾಗಿ ಹೋಗುತ್ತವೆ. ಇಂತಹ ಚಟುವಟಿಕೆ ಹೊಸದೇನೂ ಅಲ್ಲ.
ಆದರೆ ಈಗ ಬರುತ್ತಿರುವ ವಿಪತ್ತು ಅಂತಹ ಚಿಕ್ಕದೊಂದು ತುಂಡಲ್ಲ. ಈ ವಿಪತ್ತು ಗಾತ್ರದಲ್ಲಿ ಹೇಳಿಕೊಳ್ಳುವಷ್ಟು ಚಿಕ್ಕದಾಗಿಲ್ಲ. ಒಂದು ಕ್ರಿಕೆಟ್ ಆಟದ ಮೈದಾನದ ಗಾತ್ರದ ಬೃಹತ್ ಕ್ಷುದ್ರಗ್ರಹವು ಅತ್ಯಂತ ವೇಗವಾಗಿ ಭೂಮಿಯತ್ತ ಧಾವಿಸಿ ಬರುತ್ತಿದ್ದು, ಅದಕ್ಕೆ ‘2008Go20’ ಎಂದು ಹೆಸರಿಡಲಾಗಿದೆ.
ಈ ಕ್ಷುದ್ರಗ್ರಹವು ಜುಲೈ 24ರಂದು ಭೂಮಿಯ ಹಿಂದೆ ಸುರಕ್ಷಿತವಾಗಿ ಹಾದು ಹೋಗಲಿದೆ. ಇದು ಐಫೆಲ್ ಟವರ್ ವ್ಯಾಸವುಲ್ಲ ಕ್ಷುದ್ರಗ್ರಹವಾಗಿದ್ದು ಭೂಮಿಯತ್ತ ವೇಗವಾಗಿ ಚಲಿಸುತ್ತಿದೆ. ಆಕಾಶದಲ್ಲಿ ಅಡ್ಡಾಡುತ್ತಿರುವ ಸಾವಿರಾರು ಕ್ಷುದ್ರಗಹ(Asteroid)ಗಳ ಪೈಕಿ ಯಾವುದಾದರೂ ಒಂದು ಆಕಾಶಕಾಯವು ಭೂಮಿಗೆ ಡಿಕ್ಕಿ ಹೊಡೆಯುವ ಸಾಧ್ಯತೆ ಬಹಳಷ್ಟಿದೆ ಎಂದು ಐರ್ಲೆಂಡ್ ದೇಶದ ಕ್ವೀನ್ಸ್ ಯೂನಿವರ್ಸಿಟಿಯ ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.
ಕ್ಷುದ್ರಗ್ರಹವು ಪ್ರತಿ ಸೆಕೆಂಡ್ಗೆ 8 ಕಿ.ಮೀ ವೇಗದಲ್ಲಿ ಅಂದರೆ, ಪ್ರತಿ ಗಂಟೆಗೆ 28,800 ಕಿ.ಮೀ ವೇಗದಲ್ಲಿ ಚಲಿಸುತ್ತಿದ್ದು ಇದು ಮನುಷ್ಯನ ಊಹೆಗೂ ಮೀರಿದ ವೇಗವಾಗಿದೆ. ಕ್ಷುದ್ರಗ್ರಹವನ್ನು ಭೂಮಿಯ ಹತ್ತಿರದ ವಸ್ತು (ಎನ್ಇಒ) ಅಂತಲೂ ಕರೆಯಲಾಗುತ್ತದೆ. 20 ಮೀಟರ್ ಅಗಲವಾಗಿರುವ ಕ್ಷುದ್ರಗ್ರಹವನ್ನು ಕೂಡಾ ಭೂಮಿ ಮತ್ತು ಚಂದ್ರನ ನಡುವಿನ ದೂರದ ಎಂಟು ಪಟ್ಟು ಅಂದರೆ 28,70,847,607 ಕಿ.ಮೀ ದೂರದಲ್ಲಿಯೂ ಝೂಮ್ ಮಾಡಿ ನೋಡುವಷ್ಟು ಟೆಕ್ನಾಲಜಿ ಮನುಷ್ಯ ಹುಟ್ಟುಹಾಕಿದ್ದು, ವಿಜ್ಞಾನಿಗಳ ಪ್ರಕಾರ ಈ ಕ್ಷುದ್ರಗ್ರಹದಿಂದ ಭೂಮಿಗೆ ಯಾವುದೇ ತೊಂದರೆ ಇಲ್ಲ.
ಗ್ರಹಕ್ಕೆ ಹತ್ತಿರವಿರುವ ಅದರ ಕಕ್ಷೆಯನ್ನು ಅಪೊಲೋ ಎಂದು ವರ್ಗೀಕರಿಸಲಾಗಿದೆ. ಅಪೊಲೋ ಅತ್ಯಂತ ಅಪಾಯಕಾರಿ ಕ್ಷುದ್ರಗ್ರಹಗಳನ್ನು ಹೊಂದಿದೆ. ನಾಸಾ ನಿರಂತರವಾಗಿ ಕ್ಷುದ್ರಗ್ರಹವನ್ನು ಮೇಲ್ವಿಚಾರಣೆ ಮಾಡುತ್ತಿದೆ.
ಇದಕ್ಕು ಮುನ್ನ ಜೂನ್ನಲ್ಲಿ 2021KT1 ಹೆಸರಿನ ಐಫೆಲ್ ಟವರ್ ಗಾತ್ರದ ಕ್ಷುದ್ರಗ್ರಹವು ಭೂಮಿಯ ಹತ್ತಿರಕ್ಕೆ ಬಂದಿತ್ತು. ಇದನ್ನು “ಸಂಭಾವ್ಯ ಅಪಾಯಕಾರಿ” ಎಂದು ವರ್ಗೀಕರಿಸಲಾಗಿತ್ತು. 2021KT1 ಕ್ಷುದ್ರಗ್ರಹವು 14.5 ದಶಲಕ್ಷ ಕಿ.ಮೀ ದೂರದಲ್ಲಿ ಭೂಮಿಗೆ ಹತ್ತಿರದ ಮಾರ್ಗದಲ್ಲಿ ಹಾದು ಬಂದಿತ್ತು.
ಈಗ ಅಂಥದ್ದೇ ಪುಟ್ಟ ಕ್ಷುದ್ರಗ್ರಹವು ನಗರ ಪ್ರದೇಶದ ಮೇಲೆ ಬಿದ್ದರೆ ಇಡೀ ನಗರವೇ ನಾಶವಾಗಿಬಿಡುತ್ತದೆ. ಭೂಮಿಯಷ್ಟೇ ದೊಡ್ಡದಿರುವ ಆಕಾಶಕಾಯಗಳೂ ಇವೆ. ಒಂದು ವೇಳೆ, ತುಸು ದೊಡ್ಡದಾಗಿರುವ ಕ್ಷುದ್ರಗ್ರಹವೇನಾದರೂ ಭೂಮಿಗೆ ಢಿಕ್ಕಿ ಹೊಡೆದರೆ ಅದರಿಂದಾಗುವ ಅಂದಾಜನ್ನು ಅರ್ಥ ಮಾಡಿಕೊಳ್ಳುವುದೇ ಕಷ್ಟ. ಭೂಮಿಯಲ್ಲಿರುವ ಬಹುತೇಕ ಜೀವಿಗಳು ನಿರ್ನಾಮವಾಗಲಿವೆ ಎಂದು ವಿಜ್ಞಾನಿಗಳು ಅಂದಾಜಿಸುತ್ತಾರೆ. ದೊಡ್ಡ ಕ್ಷುದ್ರ ಗ್ರಹಗಳಿಂದ ಸದ್ಯಕ್ಕೆ ಅಪಾಯವಿಲ್ಲ. ಆದರೆ, ಸಣ್ಣ ಕ್ಷುದ್ರಗ್ರಹಗಳು ಯಾವಾಗ ಬೇಕಾದರೂ ಭೂಮಿಗೆ ಅಪ್ಪಳಿಸಬಹುದು ಎನ್ನಲಾಗಿದೆ. ಆದ್ರೆ ಹಿಂದೆ ಇಂತಹುದೇ ಒಂದು ಕ್ಷುದ್ರಗ್ರಹ ಭೂಮಿಯತ್ತ ಅನುಭವದಿಂದ ಬರುತ್ತಿತ್ತು. ಆದರೆ ವಿಜ್ಞಾನಿಗಳು ಅದನ್ನು ಅಂತರಿಕ್ಷದಲ್ಲಿ ಇನ್ನೊಂದು ಸೆಟಲೈಟ್ ಮೂಲಕ ಡಿಕ್ಕಿ ಹೊಡೆಸಿ ಅದರ ದಿಕ್ಕನ್ನು ಬದಲಾಯಿಸಿದ್ದರು. ವಿಶ್ವದ ಸ್ಪೇಸ್ಸ್ ಟೆಕ್ನಾಲಜಿ ಅತ್ಯಂತ ಆಧುನಿಕವಾಗಿ ಮುಂದುವರಿದಿದ್ದು ಸದ್ಯೋಭವಿಷ್ಯದಲ್ಲಿ ಅನುಗ್ರಹಗಳಿಂದ ಮನುಷ್ಯ ಎನ್ನಲಾಗುತ್ತಿದೆ.