ಇಂತಹಾ ಅದ್ಭುತ ಚಿಲ್ಲರೆ ಕೆಲಸಗಳನ್ನು ನೀವು ಮಾಡದೆ ಹೋದರೆ, ನೀವು ಇಂಡಿಯನ್ನೇ ಅಲ್ಲ !

📝 ಸುದರ್ಶನ್ ಬಿ. ಪ್ರವೀಣ್, ಬೆಳಾಲು.

ಇವೆಲ್ಲ ಕೇವಲ ಭಾರತೀಯರಿಗೆ ಮಾತ್ರ ಒಲಿದು ಬಂದ ವಿದ್ಯೆ. ಯಾರೂ ನಮ್ಮಿಂದ ಇದನ್ನು ಕಲಿಯಲಾರರು, ಕದಿಯಲಾರರು ಕೂಡ. ಇದರ ಮೇಲೆ ನಮ್ಮ ಪೇಟೆಂಟ್ ಇದೆ!! ಇಂತಹಾ ಮಜಾಭರಿತ ನಮ್ಮ ವರ್ತನೆಗಳ ಬಗ್ಗೆ ಇಲ್ಲಿದೆ ಒಂದು ತಮಾಷಿಯ ನೋಟ್ಸ್. ಒಪ್ಪಿಸಿಕೊಳ್ಳಿ.
   
1.ಮನೆಗೆ ನೆಂಟರು ಬಂದಿದ್ದು, ಅವರು ವಾಪಸ್ಸು ಹೋಗುತ್ತಿರುವಾಗ, ಗೇಟ್ ನ ಹತ್ತಿರ ಬಂದು ನಿಂತು ಇಪ್ಪತ್ತು ನಿಮಿಷ ಮುಖ್ಯವಾದ ವಿಷಯವನ್ನು ಮಾತಾಡಲಿಕ್ಕಿದೆ.

2.ಎಟಿಎಂ ಲಿ ಹಣ ವಿಥ್ ಡ್ರಾ ಆಗಿ ಟ್ರಾನ್ಸಾಕ್ಷನ್ ಕಂಪ್ಲೀಟ್ ಆಗಿ ಕಾರ್ಡು ವಾಪಸ್ ಬಂದ ಮೇಲೆ ಎಟಿಎಂ ಬಿಡುವ ಮೊದಲು ಎರಡೆರಡು ಬಾರಿ ಕ್ಯಾನ್ಸಲ್ ಬಟನ್ ಒತ್ತದೆ ಹೋದರೆ ಆತ/ಆಕೆ ಭಾರತೀಯರಲ್ಲ !

Ad Widget


Ad Widget

3.ಮೆಡಿಕಲ್ ಶಾಪ್ ನಲ್ಲಿ ಸ್ಟೇ ಫ್ರೀ ಮುಂತಾದ ಸ್ಯಾನಿಟರಿ ಪ್ಯಾಡ್ ಗಳನ್ನು ಯಾರಿಗೂ ಕಾಣಿಸದಂತೆ ಪೇಪರ್ ನಲ್ಲಿ ಸುತ್ತಿ ಕೊಡುತ್ತಾರೆ.

4.ಮಗಳಿಗೆ ಸ್ಯಾನಿಟರಿ ಪಾಡ್ ಕೊಳ್ಳ ಬೇಕಾದಾಗ ಅಪ್ಪನಲ್ಲಿ ಹೇಳದೆ, ಅಮ್ಮನ ಮೂಲಕ ಹೇಳಿಸುವುದು.

5.ಸ್ಯಾನಿಟರಿ ಪಾಡ್ ಕೊಳ್ಳಲಾ ಬೇಡವಾ ಅಂತ ಅಪ್ಪ ಕೊಳ್ಳುವ ಮೊದಲು 3 ಸಲ ಯೋಚಿಸುತ್ತಾನೆ.

6.ಭಾರತೀಯರು ಕೆಲಸ ಮಾಡುವಾಗ ಮನೆ, ಮಕ್ಕಳು, ಮತ್ತಿತರ ಯೋಚನೆ ಮಾಡುತ್ತಾರೆ. ಮನೆಯಲ್ಲಿದ್ದಾಗ ಕೆಲಸದ ಬಗ್ಗೆ ಯೋಚನೆ ಮಾಡುತ್ತಾರೆ.

7.ಅಡುಗೆ ಮನೆಯಲ್ಲಿ ಆಕೆ ಕೈಯ ಒದ್ದೆಯನ್ನು ನೈಟಿಯ ಇಕ್ಕೆಲಗಳಲ್ಲಿ ಒರಸಿಕೊಳ್ಳುತ್ತಾಳೆ, ಹಾಂಡ್ ಕರ್ಚೀಫ್ ಥರ.

8.ಗಂಡಸು ಎಲ್ಲರ ಎದುರೇ ಗಡದ್ದಾಗಿ ತೇಗುತ್ತಾನೆ.

9.ಹೆಂಗಸರು ಅವರಿವರ ಬಗ್ಗೆ ಗಾಸಿಪ್ ಮಾಡಿ, ಕೊನೆಯಲ್ಲಿ ” ಊರವರ ವಿಷಯ ನಮಗೆ ಯಾಕೆ ” ಅಂತನ್ನುತ್ತಾರೆ.

10.ಹೂಸನ್ನು ಇನ್ನಷ್ಟು ಕಂಪ್ರೆಸ್ಸ್ ಮಾಡಿ, ಮತ್ತಷ್ಟು ಸ್ಪೋಟಕ ಸದ್ದು ಬರುವಂತೆ ಗಂಡಸು ಬಿಡುತ್ತಾನೆ.

11.ಹೆಂಗಸರು ಯಾವತ್ತೂ ಜೀವನದಲ್ಲಿ ಒಂದು ಬಾರಿ ಕೂಡಾ ಹೂಸು ಬಿಟ್ಟಿಲ್ಲ !!!

12.ಗಂಡ ಬೇರೆ ಹೆಂಗಸರೊಂದಿಗೆ ಮಾತಾಡಿದರೆ ಹೆಂಡತಿಗೆ ಬೇಜಾರಾಗುತ್ತದೆ.

13.ಮನೆಯಲ್ಲಿ ಆಕೆ ಇವತ್ತಿನ ಅಡುಗೇನ ನಾಳೆ, ನಾಳೆಯದನ್ನ ನಾಳಿದ್ದು ಬಳಸುತ್ತಾಳೆ.

14.ಹಲ್ಲಿನ ಮದ್ಯೆ ಸಿಲುಕಿದ ಆಹಾರವನ್ನು ತೆಗೆಯಲು ಆಕೆ ತನ್ನ ತಲೆ ಕೂದಲನ್ನು ಹಗ್ಗದ ಥರ ಬಳಸುತ್ತಾಳೆ.

15.ಬಜ್ಜಿ ಬೋಂಡಾ ಕಟ್ಟಲು, ಚುರುಮುರಿ ತುಂಬಿಸಲು, ನಮಗೆ ನ್ಯೂಸ್ ಪೇಪರ್ ಗಿಂತ ಒಳ್ಳೆ ಪ್ಯಾಕಿಂಗ್ ಮೆಟೀರಿಯಲ್ ಬೇರೇನಿದೆ?

16.ಬೋಂಡಾ, ಕಬಾಬು ಕಾಯಿಸಿ ಅದರ ಎಣ್ಣೆ ಹೀರಿಸಿಕೊಳ್ಳಲು, ಚಪಾತಿ ಲಟ್ಟಿಸುವಾಗ ನೆಲದ ಮೇಲೆ ಹಾಸಲು, ಪಾರ್ಕ್ನಲ್ಲಿ ಕುಳಿತುಕೊಳ್ಳಲು- ನ್ಯೂಸ್ ಪೇಪರ್ ನದು ಹೀಗೆ ಮಲ್ಟಿ ಪರ್ಪಸ್ ಕಾರ್ಯ; ಓದುವುದದೊಂದನ್ನು ಬಿಟ್ಟು !

17.ರಿಮೋಟಿನ ಮತ್ತು ಗಡಿಯಾರದ ಬ್ಯಾಟರಿ ಖಾಲಿ ಆದರೂ, ಅದನ್ನು ತೆಗೆದು ಮತ್ತೊಮ್ಮೆ ಹಾಕಿ ಮರುಬಳಕೆಯ ಟ್ರಯಲ್ ತೆಗೆದುಕೊಳ್ಳುತ್ತಾರೆ. ಹಾಗೆ ಒಂದು ವಾರ ಸರ್ವಿಸ್ ಎಕ್ಸ್ಟೆಂಡ್ ಆಗುತ್ತದೆ !

18.ಗಂಡಸರು ಪಬ್ಲಿಕ್ ಆಗಿ ಬೀಜಕ್ಕೆ( ಟೆಸ್ಟಿಕಲ್ಸ್) ಕೈಹಾಕಿ ಪಬ್ಲಿಕ್ ಆಗಿ ಹಿಚುಕುತ್ತಾರೆ.

19.ಇಂಡಿಯನ್ನರು ರಿಸೈಕಲ್ ಮಾಡಬಾರದ ವಸ್ತುಗಳನ್ನು ರಿಸೈಕಲ್ ಮಾಡುತ್ತಾರೆ. ಪಾಲಿ ಬ್ಯಾಗ್ ಗಳನ್ನು ಮನೆಯ ಒಂದು ಮೂಲೆಯಲ್ಲಿ ಇನ್ನೊಂದು ಪಾಲಿ ಬ್ಯಾಗಿನ ಒಳಗೆ ಮಡಚಿಟ್ಟು ಮರುಬಳಕೆ ಮಾಡುತ್ತಾರೆ

20.ಇಂಜೆಕ್ಷನ್ ಸಿರಿಂಜುಗಳನ್ನು ಮಕ್ಕಳು ಪಿಚಕಾರಿಯಂತೆ ಆಟ ಆಡಲು ಬಳಸುತ್ತಾರೆ.

21.ಭಾರತೀಯರು ನಿನ್ನೆ ಪಾರ್ಸೆಲ್ ತಂದ ಆಹಾರದ ಡಬ್ಬಿಯನ್ನು ಇನ್ನಾರು ತಿಂಗಳು ರಿಸೈಕ್ಲ್ ಮಾಡುತ್ತಾರೆ. ಜ್ಯೂಸು ಮತ್ತು ಸಾಫ್ಟ್ ಡ್ರಿಂಕ್ ನ ಬಾಟಲ್ಲುಗಳು, ಎಣ್ಣೆ, ಹಾಲು, ತುಪ್ಪ, ಜೇನುತುಪ್ಪ ಮುಂತಾದುವುಗಳನ್ನು ತುಂಬಿಸಿಡಲು ಬಳಸುತ್ತಾರೆ.

22.ಟೂತ್ ಪೇಸ್ಟ್ ನ 80 % ಭಾಗ ಒಂದು ವಾರದೊಳಗೆ ಖರ್ಚಾಗುತ್ತದೆ. ಉಳಿದ 20 % ಅನ್ನು ಮತ್ತೆ ಎರಡು ವಾರ ತಳ್ಳುತ್ತಾರೆ.

23.ಶಾಂಪೂ ಖಾಲಿಯಾದ ಮೇಲೆ, ಅದರೊಳಗೆ ನೀರು ಹಾಕಿ ಮತ್ತೆರಡು ದಿನ ಮ್ಯಾನೇಜ್ ಮಾಡುತ್ತಾರೆ

24.ವಾಟರ್ ಟ್ಯಾಪ್ ಗೆ ಒಂದು ತಿರುಗುವ ಫಿಲ್ಟರ್ ಹಾಕುವುದು.

25.ಹಾಲಿನ ಕವರಿಗೆ ನೀರು ಹಾಕಿ ರಿನ್ಸ್ ಮಾಡಿ, ಆಯ ನೀರನ್ನು ಹಾಲಿಗೆ ಹಾಕಿ ಬಳಸುವುದು

26.ಯಾವಾಗಲೂ 2 ವರ್ಷ ದೊಡ್ಡ ದೊಗಳೆ ಡ್ರೆಸ್ ಪರ್ಚೆಸ್ ಮಾಡುವುದು (ಫ್ಯೂಚರ್ ಪ್ಲಾನು )

27.ಪಟಾಕಿ ಬಿಟ್ಟ ಮರುದಿನ ಬೆಳಿಗ್ಗೆ ಬೇಗ ಎದ್ದು ನಿನ್ನೆ ಸಿಡಿಯಾದ ಪಟಾಕಿಗಳಿಗೆ ಅಂಗಳದಲ್ಲಿ ತಡಕಾಗುವುದು

28.ಸಿಡಿಯದ ಪಟಾಕಿಯನ್ನು ಓಪನ್ ಮಾಡಿ ಅದರ ಮದ್ದು ತೆಗೆದು ಅದಕ್ಕೆ ಬೆಂಕಿ ಇಟ್ಟಾಗ ಬರುವ ಬಸ್ ಹೋಗೆ ಕಂಡು ಖುಷಿಪಡುವುದು

29.ಬಟ್ಟೆ ಹಳೆಯದಾದರೆ ಅದನ್ನು ಮನೆಯಲ್ಲಿ ಹಾಕಲು ದಿನನಿತ್ಯದ ಬಳಕೆಗೆ ಬಳಸುತ್ತಾರೆ. ಮತ್ತಷ್ಟು ಹಳೆಯದಾದರೆ, ಅದನ್ನು ಹರಿದು ಎರಡು ಭಾಗವಾಗಿ ವಿಂಗಡಿಸುತ್ತಾರೆ. ಒಂದು, ಗಟ್ಟಿಗಿರುವ-ಕಾಲರ್ ,ಸೊಂಟದ ಜಾಗದ ಬಟ್ಟೆಗಳ ಭಾಗವನ್ನು ಕಾಲೊರೆಸುವ ಮ್ಯಾಟ್ ಥರ ಬಳಸುತ್ತಾರೆ. ಉಳಿದ ಪ್ಲೈನ್ ಭಾಗ ಅಡುಗೆ ಮನೆಯಲ್ಲಿ ಬಿಸಿಯಾದ ಪಾತ್ರೆಯನ್ನು ಹಿಡಿಯಲು ಗ್ಲೋಸ್ಸ್ ಆಗಿ ಬಳಕೆಗೆ ಹೋಗುತ್ತದೆ.

30. ಅವರು 10 ರುಪಾಯಿನ ಕೊತ್ತಂಬರಿ ಸೊಪ್ಪು ಪರ್ಚೆಸ್ ಮಾಡುವಲ್ಲಿ ತಮ್ಮಎಲ್ಲ ಬಾರ್ಗೆಯ್ನಿಂಗ್ ಜ್ಞಾನವನ್ನು ಬಳಸುತ್ತಾರೆ. ಆದರೆ, ದೊಡ್ಡ ವಸ್ತು, ವಾಹನ ಪರ್ಚೆಸ್ ಮಾಡುವಾಗ ಅವರು ಕೇಳಿದಷ್ಟು ಕೊಟ್ಟು ತೃಪ್ತರಾಗಿ ಬರುತ್ತಾರೆ.

31.ಅವರು ಯಾವುದಕ್ಕೋ, ತಮ್ಮಿಂದ ಸಾಧ್ಯವಾಗದಿದ್ದರೆ ಡೈರೆಕ್ಟ್ ಆಗಿ, ನನ್ನಿಂದಾಗಲ್ಲ ಅನ್ನುವುದಿಲ್ಲ. ” ಐ ವಿಲ್ ಟ್ರೈ, ಆಕ್ಚವಲಿ…., ಮಾಡಬಹುದಿತ್ತು ಆದರೆ…, ಮುಂತಾದ ಸಬೂಬು ಕೊಡುತ್ತಾರೆ.

32.ಸಿನಿಮಾದಲ್ಲಿ ಸಡನ್ ಆಗಿ ಸಾಂಗು ಬರುತ್ತದೆ. ಕೂತು ಸಿನಿಮಾ ನೋಡುತ್ತಿರುವ ಪ್ರೇಕ್ಷಕರು ತಮ್ಮಇಷ್ಟದ ನಟ ಬಂದಾಗ ವಿಶಲ್ ಹೊಡೆಯುತ್ತಾರೆ.

33.ನಾಯಕ ನಟ, ರಾಜಕೀಯ ನಾಯಕನಿಗೆ ಕ್ಷೀರಾಭಿಷೇಕ, ಹಣ್ಣಿನ ಮತ್ತು ನೋಟಿನ ಹಾರ ಹಾಕುತ್ತಾರೆ.

34.ಕುಕ್ಕರನ್ನು ಅಕ್ಕಿ ಬೇಳೆ ಇತ್ಯಾದಿ ಸ್ಟೋರ್ ಮಾಡಿಡಲು ಬಳಸುತ್ತಾರೆ.

35.ನಮಗೆ ಎಲ್ಲದಕ್ಕೂ ಬಟ್ಟೆ ಹಾಕುವ ಅಭ್ಯಾಸ. ಸೋಫಾ ಸೆಟ್ಟಿಗೆ ಬಟ್ಟೆಯ ಅಂಗಿ, ಫ್ರಿಡ್ಜ್ ಗೆ ಕವರ್, ಟಿವಿ ರಿಮೋಟ್ ಗೆ ಪ್ಲಾಸ್ಟಿಕ್ ಕವರ್, ಮೊಬೈಲ್ ಗೆ ಫುಲ್ ಕವರ್ ಹಾಕೋದು.

36.ಹೊಸ ಚೇರ್ ಮತ್ತು ಹೊಸ ಕಾರಿನ ಪ್ಲಾಸ್ಟಿಕ್ ಕವರ್ ಒಂದು ವರ್ಷವಾದರೂ ತೆಗಿಯೋದಿಲ್ಲ !

37.ಒಂದು ವಸ್ತು ಫ್ರೀ ಸಿಗುತ್ತದೆಂದು ಇನ್ನೊಂದು ವಸ್ತು ಕೊಳ್ಳುವುದು !!

38.ಪಾನಿ ಪೂರಿ ತಿಂದಾದ ಮೇಲೆ ಕೊನೆಯಾದಾಗೆ ಒಂದು ಫ್ರೀ ಕೊಟ್ಟಾಗ ಆಗುವ ಸಂತೋಷ ಅಪರಿಮಿತ !

39.ಗೆಳೆಯರ ಜತೆಗೆ ತಿಂಡಿಗೆ ಹೋದರೆ, ಎಲ್ಲರಿಗಿಂತ ಬೇಗ ತಿಂಡಿ ತಿಂದು ಹೊರಗೆ ಬಂದು ಸ್ವಲ್ಪ ದೂರ ಹೋಗಿ, ಸಿಗರೇಟ್ ಸೇದುವ ನೆಪದಲ್ಲಿ ಬಿಲ್ಲು ಕೊಡುವುದರಿಂತ ತಪ್ಪಿಸಿಕೊಳ್ಳುವ ಪ್ಲಾನು.

ಇವನ್ನೆಲ್ಲಾ ನೀವು ಮಾಡದೆ ಹೋದ್ರೆ, ನೀವ್ ಇಂಡಿಯನ್ನೆ ಅಲ್ಲ !!🔚

Leave a Reply

Ad Widget
error: Content is protected !!
Scroll to Top
%d bloggers like this: