ಶಾಸಕ ಹರೀಶ್ ಪೂಂಜ ಹೆಸರಿನಲ್ಲಿ ನಕಲಿ ಫೇಸ್ಬುಕ್ ಖಾತೆ | ಈ ಖಾತೆಯಿಂದ ಬರುವ ವಿನಂತಿಗಳನ್ನು ನಿರ್ಲಕ್ಷಿಸಿ

ಇತ್ತೀಚೆಗೆ ಫೇಕ್ ಅಕೌಂಟ್ ಕ್ರಿಯೇಟರ್ಸ್ ಸಂಖ್ಯೆ ಹೆಚ್ಚಾಗುತಿದ್ದು, ಬೇರೆಯವರ ಹೆಸರಿನಿಂದ ಫೇಸ್ಬುಕ್ ಖಾತೆ ಓಪನ್ ಮಾಡಿ ಹಣ ದೋಚುವ ಪ್ರಕ್ರಿಯೆ ನಡೆಯುತ್ತಿದ್ದು, ಇದೀಗ ಸೋಷಿಯಲ್ ಮೀಡಿಯಾದಲ್ಲಿ ತುಂಬಾ ಆಕ್ಟಿವ್ ಇರುವ ಬೆಳ್ತಂಗಡಿ ಶಾಸಕರಾದ ಹರೀಶ್ ಪೂಂಜಾ ಅವರ ಫೇಸ್ ಬುಕ್ ಹೆಸರಿನಲ್ಲಿ ನಕಲಿ ಫೇಸ್ ಬುಕ್ ಖಾತೆಯೊಂದನ್ನು ಯಾರೋ ಕಿಡಿಗೇಡಿಗಳು ಸೃಷ್ಟಿಸಿದ್ದಾರೆ.ಇದೊಂದು ವಂಚನೆಯ ಜಾಲವಾಗಿದ್ದು ಯಾರು ಕೂಡ ಈ ಖಾತೆಯಿಂದ ಬರುವ ವಿನಂತಿಗಳನ್ನು ಮತ್ತು ಹಣದ ಬೇಡಿಕೆಯ ಸಂದೇಶವನ್ನು ಸ್ವೀಕರಿಸದೆ ನಿರ್ಲಕ್ಷಿಸಬೇಕಾಗಿ ಪೂಂಜರು ತಿಳಿಸಿದ್ದಾರೆ.

ಶಾಸಕ ಹರೀಶ್ ಪೂಂಜ ಅವರ ಹೆಸರಿನ ಫೇಸ್ ಬುಕ್ ನಕಲಿ ಖಾತೆಯನ್ನು ಯಾರೋ ದುಷ್ಟರು ತೆರೆದಿದ್ದು,ಈ ಮೂಲಕ ಹಣದ ಬೇಡಿಕೆಯನ್ನು ಇಡುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಈ ಬಗ್ಗೆ ಶಾಸಕ ಹರೀಶ್ ಪೂಂಜ ತನ್ನ ಫೇಸ್ಬುಕ್ ನಲ್ಲಿ, ಮಿತ್ರರೇ ನನ್ನ ಹೆಸರಿನಲ್ಲಿ ನಕಲಿ ಫೇಸ್ಟುಕ್ ಖಾತೆಯೊಂದನ್ನು ಯಾರೋ ಕಿಡಿಗೇಡಿಗಳು ಸೃಷ್ಟಿಸಿರುತ್ತಾರೆ,ಇದೊಂದು ವಂಚನ ಜಾಲವಾಗಿದ್ದು ಯಾರು ಕೂಡ ಈ ಖಾತೆಯಿಂದ ಬರುವ ವಿನಂತಿಗಳನ್ನು ಮತ್ತು ಹಣದ ಬೇಡಿಕೆಯ ಸಂದೇಶವನ್ನು ಮನ್ನಿಸದೆ ನಿರ್ಲಕ್ಷಿಸಬೇಕಾಗಿ ವಿನಂತಿ ಎಂದು ಪೋಸ್ಟ್ ಮಾಡುವ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ.

Ad Widget


Ad Widget


Ad Widget

ಯಾರೂ ಕೂಡ ವಂಚಕರ ಕೈಗೆ ಮೋಸ ಹೋಗಬೇಡಿ ಎಚ್ಚರದಿಂದಿರಿ ಎಂದು ಸಾರ್ವಜನಿಕರಲ್ಲಿ ಶಾಸಕ ಹರೀಶ್ ಪೂಂಜ ವಿನಂತಿ ಮಾಡಿದ್ದಾರೆ.

Leave a Reply

Ad Widget
Ad Widget Ad Widget
error: Content is protected !!
Scroll to Top
%d bloggers like this: