ಕನ್ನಡಿಗರು ನಪುಂಸಕರು ಎಂದ ಭಗವಾನ್ ಎಂಬ ಭೂತ | ಹೊತ್ತಿಕೊಂಡ ಪ್ರತಿಭಟನೆಯ ಕಿಡಿ, ಕನ್ನಡಿಗರ ಆಕ್ರೋಶ !

ಮೈಸೂರು: ಸಾಹಿತಿ ಪ್ರೊ. ಕೆ.ಎಸ್. ಭಗವಾನ್ ಮತ್ತೊಂದು ವಿವಾದ ತಂದಿದೆ ಮೈಮೇಲೆ ಎಳೆದುಕೊಂಡಿದ್ದಾರೆ. ಅವರು “ಕನ್ನಡಿಗರು ನಪುಂಸಕರು” ಎಂಬ ವಿವಾದಿತ ಎಂದು ಅವರು ಹೇಳಿದ್ದಾರೆ.

 

ಮೈಸೂರು ಜಿಲ್ಲಾ ಕನ್ನಡ ಹೋರಾಟಗಾರರ ಸಂಘ ಸೋಮವಾರ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ ಬ್ಯಾಂಕಿಂಗ್ ಪರೀಕ್ಷೆಗಳನ್ನು ಕನ್ನಡದಲ್ಲಿಯೂ ನಡೆಸಬೇಕು ಎಂದು ಆಗ್ರಹಿಸಿತ್ತು. ಈ ವೇಳೆ ಮಾತನಾಡಿದ ಪ್ರೊ. ಭಗವಾನ್ “ತಮಿಳರು ಹೋರಾಡಿ ಈ ವಿಚಾರದಲ್ಲಿ ಸಫಲರಾದರು. ಆದರೆ ಕನ್ನಡಿಗರು ನಪುಂಸಕರು, ಈ ವಿಚಾರದಲ್ಲಿ ಒಗ್ಗಟ್ಟಿಲ್ಲ. ” ಎಂದಿದ್ದಾರೆ. ಅಲ್ಲದೆ ಮೇಕೆದಾಟು ವಿಚಾರವಾಗಿ ಕೂಡ ತಮಿಳಿಗರದ್ದೇ ಮೇಲುಗೈ ಆಗಿದೆ ಎಂದು ಅವರು ಆರೋಪಿಸಿದ್ದಾರೆ.

ಇದೀಗ ಕನ್ನಡಿಗರಿಗೆ ನಪುಂಸಕ ಎಂದ ಭಗವಾನ್ ಬಗ್ಗೆ ಪ್ರತಿಭಟನೆಯ ಕಿಡಿ ಎದ್ದಿದೆ. ಈ ಹಿಂದೆ ಹಿಂದುಗಳನ್ನು ಮತ್ತು ಹಿಂದೂ ದೇವರುಗಳನ್ನು ಅವಮಾನಿಸಿದ ಭಗವಾನ್ ಮೇಲೆ ಹಲವು ಸಂಘಟನೆಗಳು ಈಗಾಗಲೇ ಪ್ರತಿಭಟನೆಗೆ ಇಳಿದಿವೆ. ”ಕನ್ನಡ ಭಾಷೆಯಲ್ಲಿ ಬ್ಯಾಂಕಿಂಗ್‌ ಪರೀಕ್ಷೆ ನಡೆಸಬೇಕು ಎನ್ನುವ ಬಗ್ಗೆ ಇದುವರೆಗೆ ಸಶಕ್ತ ಹೋರಾಟ ನಡೆಸಿಲ್ಲ. ಆ ರೀತಿಯಲ್ಲಿ ಕನ್ನಡಿಗರು ನಪುಂಸಕರು”ಎಂದು ಭಗವಾನ್ ಹೇಳಿದ್ದಾರೆ. ಅಲ್ಲದೆ ಮೇಕೆದಾಟು ವಿಷಯದಲ್ಲಿ ತಮಿಳುನಾಡಿನ ಎಲ್ಲಾ ರಾಜಕೀಯ ಪಕ್ಷಗಳೂ ಒಗ್ಗಟ್ತಾಗಿ ಕೇಂದ್ರಕ್ಕೆ ಮನವಿ ಸಲ್ಲಿಸಿದೆ. ಆದರೆ ನಮ್ಮಲ್ಲಿ ಒಗ್ಗಟ್ಟಿಲ್ಲ, ರಾಜಕೀಯ ಪಕ್ಷಗಳು ಒಂದಾಗಿಲ್ಲ” ಅವರು ಆರೋಪಿಸಿದ್ದಾರೆ.

Leave A Reply

Your email address will not be published.