ಸವಣೂರು: ಅಂಬಾ ಬ್ರದರ್ಸ್ ವತಿಯಿಂದ ಹಡೀಲು ಬಿದ್ದ ಗದ್ದೆಯಲ್ಲಿ ಬೇಸಾಯಕ್ಕೆ ಚಾಲನೆ | ಗದ್ದೆಗಿಳಿಯೋಣ ಬಾ ಕಾರ್ಯಕ್ರಮದಲ್ಲಿ ಸಚಿವ ಎಸ್.ಅಂಗಾರ ಭಾಗಿ

ಸವಣೂರು : ಇಲ್ಲಿನ ಚಂದ್ರನಾಥ ಬಸದಿಯ ಸಮೀಪದ ಗದ್ದೆಯೊಂದು ಹಲವು ವರ್ಷಗಳಿಂದ ಬೇಸಾಯ ಮಾಡದೇ ಹಡೀಲು ಬಿದ್ದಿದ್ದು,ಸವಣೂರಿನ ಸಮಾನ ಮನಸ್ಕ ಯುವಕರ ತಂಡ ಅಂಬಾ ಬ್ರದರ್ಸ್ ಇದರ ವತಿಯಿಂದ ಈ ಗದ್ದೆಯಲ್ಲಿ ಈ ಬಾರಿ ಬೇಸಾಯ ನಡೆಯಲಿದೆ.

ಅಂಬಾ ಬ್ರದರ್ಸ್ ತಂಡವು ಈಗಾಗಲೇ ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದು,ಇದೀಗ ಹಡೀಲು ಬಿದ್ದ ಗದ್ದೆಯಲ್ಲಿ ಭತ್ತದ ಬೇಸಾಯಕ್ಕೆ ಮುಂದಾಗಿದ್ದು ಈ ವಿನೂತನ ಕಾರ್ಯಕ್ರಮ ಅಂಬಾ ಗದ್ದೆಗಿಳಿಯೋಣ ಬಾ ಕಾರ್ಯಕ್ರಮಕ್ಕೆ ರವಿವಾರ ಸವಣೂರು ಬಸದಿಯ ಆವರಣದ ಗದ್ದೆಯಲ್ಲಿ ಗದ್ದೆಯ ಮಾಲಕ ನ್ಯಾಯವಾದಿ ನಿರ್ಮಲ ಕುಮಾರ್ ಜೈನ್ ಚಾಲನೆ ನೀಡಿದರು.

ಈ ಕಾರ್ಯಕ್ರಮದಲ್ಲಿ ಬಂದರು ಹಾಗೂ ಒಳನಾಡು ಸಾರಿಗೆ ಸಚಿವ ಎಸ್‌.ಅಂಗಾರ ಅವರು ಅಪ್ಪಟ ರೈತನಾಗಿ ಕೆಸರು ಗದ್ದೆಗಿಳಿದು ನೇಜಿ ನಾಟಿ ಮಾಡಿದರು.

ಗದ್ದೆಗಿಳಿದು ಅಪ್ಪಟ ರೈತನಂತೆ ನೇಜಿ ನಾಟಿ ಮಾಡಿ ಯುವಕರ ಕಾರ್ಯಕ್ಕೆ ಅಭಿನಂದಿಸಿದರು.ಕೃಷಿ ಹಿನ್ನೆಲೆಯಿಂದ ಬಂದಿರುವ ಸಚಿವರು ಗದ್ದೆಯಲ್ಲಿ ಸಂಭ್ರಮಿಸಿದರು.

ಸಚಿವ ಅಂಗಾರ ಅವರನ್ನು ರಾಜ್‌ದೀಪಕ್ ಶೆಟ್ಟಿ ಮಠ ಗೌರವಿಸಿದರು.ಬಿಜೆಪಿ ಸುಳ್ಯ ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ ಅವರನ್ನು ಧನುಶ್ ಶೆಟ್ಟಿ ಗೌರವಿಸಿದರು.

ಈ ಸಂದರ್ಭದಲ್ಲಿ ಅಂಬಾ ಬ್ರದರ್ಸ್ ಸದಸ್ಯರು, ಸವಣೂರು ವಿದ್ಯಾರಶ್ಮಿ ಕಾಲೇಜಿನ ಎನ್ನೆಸೆಸ್ ಘಟಕದ ಸದಸ್ಯರು, ಸವಣೂರು ಮಾಜಿ ಅಧ್ಯಕ್ಷೆ ಇಂದಿರಾ ಬಿ.ಕೆ ,ಸವಣೂರು ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯೆ ರಾಜಲಕ್ಷ್ಮೀ ರೈ, ಆಡಳಿತಾಧಿಕಾರಿ ಅಶ್ವಿನ್ ಎಲ್.ಶೆಟ್ಟಿ,ಕಾಲೇಜಿನ ಎನ್ನೆಸೆಸ್ ಸಂಯೋಜಕ ವೆಂಕಟರಮಣ ಮೊದಲಾದವರಿದ್ದರು.

ಸುಳ್ಯ ವಿ.ಸ.ಕ್ಷೇತ್ರದ ಅಕ್ರಮ ಸಕ್ರಮ ಸಮಿತಿ ಸದಸ್ಯರ ರಾಕೇಶ್ ರೈ ಕೆಡೆಂಜಿ ಸ್ವಾಗತಿಸಿ, ಪ್ರಸ್ತಾವನೆಗೈದರು.ಬಾಲಚಂದ್ರ ರೈ ಕೆರೆಕ್ಕೋಡಿ ವಂದಿಸಿದರು.

Leave A Reply

Your email address will not be published.