ಚಾರ್ಮಾಡಿ ಘಾಟಿಯಲ್ಲಿ ಪ್ರಯಾಣಿಕರ ನ್ಯೂಸೆನ್ಸ್ | ಅಪಾಯಕಾರಿ ಸ್ಥಳಗಳಲ್ಲಿ ಡ್ಯಾನ್ಸ್, ಕಾಲು ಜಾರಿದರೆ ಖಲಾಸ್ !!
ಚಾರ್ಮಾಡಿ ಘಾಟ್ ನ ರಸ್ತೆಯಲ್ಲಿ ಕೆಲ ಪ್ರವಾಸಿಗರು ಮಿತಿಮೀರಿದ ವರ್ತನೆಯಿಂದ ವಾಹನ ಸವಾರರಿಗೆ ತೊಂದರೆ ಮಾಡಿದ ಘಟನೆ ವರದಿಯಾಗಿದೆ.
ಚಾರ್ಮಾಡಿ ಘಾಟ್ ರಸ್ತೆಯ ಜಲಪಾತಗಳ ಮುಂದೆ ವಾಹನಗಳನ್ನು ನಿಲ್ಲಿಸಿಕೊಂಡು, ಜೋರಾಗಿ ಹಾಡು ಹಾಕುತ್ತಾ ಕೆಲ ಯುವಕರು ನೃತ್ಯವಾಡುತ್ತಿದ್ದರು. ಮಳೆಯನ್ನು ಲೆಕ್ಕಿಸದೇ ರಸ್ತೆ ಮಧ್ಯೆ, ಅಂಗಿ ಬಿಚ್ಚಿ ಕೆಲವು ಯುವಕರು ಡ್ಯಾನ್ಸ್ ಮಾಡುತ್ತಿದ್ದರು. ಯುವಕರ ಈ ಹುಚ್ಚಾಟದಿಂದ ಇತರೆ ಪ್ರವಾಸಿಗರೂ ಕಿರಿಕಿರಿ ಅನುಭವಿಸುವಂತಾಯಿತು.
ಬಂಡೆಯ ಮೇಲೆ ಹತ್ತಿ ಪ್ರವಾಸಿಗರು ಸೆಲ್ಫಿ ಕ್ಲಿಕ್ಕಿಸುವಲ್ಲಿ ನಿರತರಾಗಿದ್ದರು. ಇದು ಬಹಳ ಅಪಾಯಕಾರಿ ಸ್ಥಳಗಳಾಗಿದ್ದರೂ, ಕೆಲವು ಪ್ರವಾಸಿಗರು ಅದನ್ನು ಲೆಕ್ಕಿಸದೆ ಸೆಲ್ಫಿ, ಫೋಟೋ ಪಡೆಯುತ್ತಿದ್ದರು.
ಈ ಘಟನೆಯ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಪ್ರತಿಕ್ರಿಯಿಸಿದ ಚಿಕ್ಕಮಗಳೂರು ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ, ಪ್ರವಾಸಿಗರು, ಪ್ರಯಾಣಿಕರಿಗೆ ಏನಾದ್ರೂ ಈ ರೀತಿಯ ತೊಂದರೆ ಉಂಟಾದಲ್ಲಿ 112ಗೆ ಕರೆ ಮಾಡಿ, ದೂರು ಸಲ್ಲಿಸುವಂತೆ ತಿಳಿಸಿದ್ದಾರೆ.
ಇನ್ನು ರಸ್ತೆಯಲ್ಲೇ ವಾಹನಗಳನ್ನು ಪಾರ್ಕ್ ಮಾಡಿ ಸುಗಮ ಸಂಚಾರಕ್ಕೆ ಅಡಚಣೆ ಉಂಟು ಮಾಡಿದರು. ಇದು ಕೇವಲ ಇವತ್ತಿನ ವಿಷಯವಲ್ಲ, ಪ್ರತಿ ವರ್ಷ ಮಳೆಗಾಲದಲ್ಲಿ ಇದೇ ರೀತಿಯ ವರ್ತನೆಗಳು ಘಾಟ್ ನಲ್ಲಿ ಸಿಗುವುದು ಮಾಮೂಲಾಗಿದೆ.