ಬೆಳ್ತಂಗಡಿ, ಕಡಬ | ಧರ್ಮ ಪತ್ನಿಯ ಜತೆ ಸಾವಿನಡೆ ಜಂಟಿ ನಡಿಗೆ…
ಕೋವಿಡ್ ಸೋಂಕಿಗೆ ಅನೇಕರು ಸಾವನ್ನಪ್ಪುತಿದ್ದು ಇದೀಗ ಮೂಲತಃ ಬೆಳ್ತಂಗಡಿಯಲ್ಲಿ ಕೃಷಿಕರಾಗಿ ವಾಸಿಯಾಗಿರುವ ಇವರು ,ಕಡಬ ತಾಲೂಕಿನ ನೆಲ್ಯಾಡಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇದೀಗ ಒಂದೇ ಆಸ್ಪತ್ರೆಯಲ್ಲಿ ಒಂದೇ ದಿನ ಧರ್ಮಪತ್ನಿಯ ಜಂಟಿ ನಡಿಗೆ ನಡೆಸಿರೋ ಘಟನೆ ನಡೆದಿದೆ.
ಕೃಷಿಕರಾಗಿರುವ ವಗೀ೯ಸ್ ಪಿ. ವಿ. (74ವ.) ಹಾಗೂ ಅವರ ಪತ್ನಿ ಮೇರಿ ವಗೀ೯ಸ್ ಪಿ. ವಿ. (73ವ.)ಇವರು ಮೃತ ಪಟ್ಟಿದ್ದಾರೆ. ಇವರು ಬೆಳ್ತಂಗಡಿ ತಾಲೂಕಿನ ಕೊಕ್ಕಡ ಗ್ರಾಮದ ಪುನ್ನತ್ ನಾಥ್ ನಿವಾಸದವರು.
ಜೂ. 25 ರಂದು ದಂಪತಿಗಳಿಗೆ ಜ್ವರ ಬಂದಿದ್ದು ಔಷಧಿ ಪಡೆದು ಗುಣಮುಖರಾಗಿದ್ದು ನಂತರ ಪುನಃ ಜ್ವರ ಕಾಣಿಸಿಕೊಂಡ ಹಿನ್ನೆಲೆ ಯಲ್ಲಿ ಅವರಿಗೆ ಜು. 4ರಂದು ಮೊದಲು ಮಂಗಳೂರಿನ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ನೀಡಿ ಬಳಿಕ ಹೆಚ್ಚಿನ ಚಿಕಿತ್ಸೆ ಗಾಗಿ ಫಾದರ್ ಮುಲ್ಲಾರ್ ಆಸ್ಪತ್ರೆಗೆ ದಾಖಲಿಸಲಾಗಿದ್ದು,ತಪಾಸಣೆ ನಡೆಸಿದ ನಂತರ ಅವರಿಗೆ ಕೋವಿಡ್ ಪಾಸಿಟಿವ್ ಇರುವುದು ದೃಢಪಟ್ಟಿತ್ತು.
ಕೋವಿಡ್ ನಿಂದ ಗುಣಪಡಿಸಿಕೊಳ್ಳಲು ಚಿಕಿತ್ಸೆ ಪಡೆಯುತ್ತಿದ್ದ ದಂಪತಿಗಳಲ್ಲಿ,ಜು. 15ರಂದು ಮಧ್ಯಾಹ್ನ 1.30 ರ ವೇಳೆಗೆ ಮೇರಿ ವಗೀ೯ಸ್ ರವರು ನಿಧನರಾಗಿದ್ದು ನಂತರ ಸಂಜೆ 7 ಗಂಟೆಗೆ ಸರಿಯಾಗಿ ವಗೀ೯ಸ್ ಪಿ ವಿ. ಯವರು ನಿಧನರಾಗಿರುವುದಾಗಿ ತಿಳಿದು ಬಂದಿದೆ.
ಇವರಿಬ್ಬರ ಮೃತ ದೇಹದ ಅಂತ್ಯಕ್ರಿಯೆಯು ಕೋವಿಡ್ ನಿಯಮದಂತೆ ಜು. 16ರಂದು ನೆಲ್ಯಾಡಿ ಸಂತ ಅಲ್ಫೋನ್ಸ್ ಚಚ್೯ನಲ್ಲಿ ಧರ್ಮಗುರುಗಳ ನೇತೃತ್ವದಲ್ಲಿ ನಡೆದಿದೆ.