ಬಂಟ್ವಾಳ | ವಿವಾಹಿತ ಮಹಿಳೆಯ ಮೇಲೆ ಅತ್ಯಾಚಾರ, ಆರೋಪಿಯ ಬಂಧನ
ಮನೆಯಲ್ಲಿ ಯಾರೂ ಇಲ್ಲದನ್ನು ಗಮನಿಸಿ ಮನೆಗೆ ನುಗ್ಗಿ ವಿವಾಹಿತ ಮಹಿಳೆಗೆ ಬೆದರಿಸಿ ಅತ್ಯಾಚಾರವೆಸಗಿದ ಘಟನೆ ನಡೆದಿದೆ.
ಬಿ.ಸಿ.ರೋಡಿನ ತಲಪಾಡಿಯ ವಿವಾಹಿತ ಮಹಿಳೆಯನ್ನು ಮೊಹಮ್ಮದ್ ಅಯ್ಯೂಬ್ ಎಂಬಾತನು ಸಾಮಾಜಿಕ ಜಾಲತಾಣದಲ್ಲಿ ಪರಿಚಯ ಮಾಡಿಕೊಂಡಿದ್ದ. ನಂತರ ಮಹಿಳೆಯ ಮೊಬೈಲ್ ನಂಬರ್ ಪಡೆದುಕೊಂಡು, ಮಹಿಳೆಗೆ ಕರೆ ಮಾಡಿ ನಿಮ್ಮನ್ನು ತುಂಬಾ ಪ್ರೀತಿಸುತ್ತೇನೆ ಮತ್ತು ಮದುವೆಯಾಗುವಂತೆ ಸದಾ ಪೀಡಿಸುತ್ತಿದ್ದ. ಈ ಬಗ್ಗೆ ಮಹಿಳೆ ವಿರೋಧಿಸಿದ್ದರೂ, ಆತ ಬೆದರಿಕೆ ಹಾಕುತ್ತಿದ್ದನು.
ಇತ್ತೀಚಿಗೆ ಮಹಿಳೆ ಬಿ.ಸಿ.ರೋಡಿನ ರಸ್ತೆ ಬದಿಯಲ್ಲಿ ನಿಂತಿದ್ದಾಗ,ಮೊಹಮ್ಮದ್ ಅಯ್ಯೂಬ್ ತನ್ನ ಕಾರಿನಲ್ಲಿ ಬಂದು ಒತ್ತಾಯಿಸಿ ಆಕೆಯನ್ನು ಕಾರಿನಲ್ಲಿ ಕುಳ್ಳಿರಿಸಿಕೊಂಡು ಪೇಟೆಗೆ ಬಿಡುತ್ತೇನೆ ಎಂದು ಹೇಳಿ, ಮಂಗಳೂರಿನ ವಿವಿಧ ಕಡೆ ಸುತ್ತಾಡಿಸಿದ್ದಾನೆ. ಹಾಗೆಯೇ ಮೊಬೈಲ್ ನಲ್ಲಿ ಪೋಟೋಗಳನ್ನು ತೆಗೆದು ಬಳಿಕ ತಲಪಾಡಿಯಲ್ಲಿ ಬಿಟ್ಟುಹೋಗಿದ್ದಾನೆ. ಆದರೆ ಈ ವಿಚಾರವನ್ನು ಯಾರಲ್ಲಿಯೂ ತಿಳಿಸದಂತೆ ಹೇಳಿದ್ದಾನೆ.
ಹಾಗೆಯೇ, ಹೇಳಿದರೆ ನಿನಗೆ ತೊಂದರೆಯಾದಿತು ಎಂದು ಬೆದರಿಸಿದ್ದಾನೆ. ಮಾತ್ರವಲ್ಲದೆ, ತನ್ನನ್ನು ಮದುವೆಯಾಗದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದಿದ್ದಾನೆ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.
ಆ ನಂತರ ಒಂದು ದಿನ ಮೊಹಮ್ಮದ್ ಅಯ್ಯೂಬ್ ಮಹಿಳೆಯ ಮನೆಯಲ್ಲಿ ಯಾರೂ ಇಲ್ಲದನ್ನು ಗಮನಿಸಿ, ಮನೆಗೆ ನುಗ್ಗಿ ಅತ್ಯಾಚಾರವೆಸಗಿದ್ದಾನೆ ಹಾಗೂ ಜೀವ ಬೆದರಿಕೆಯೊಡ್ಡಿದ್ದಾನೆ.
ನಂತರ ಮಹಿಳೆ ತನ್ನ ಮನೆಯವರಿಗೆ ವಿಷಯ ತಿಳಿಸುವ ಮೂಲಕ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಆಕೆಯ ದೂರಿನಂತೆ, ಆರೋಪಿಯಾದ ಮೊಹಮ್ಮದ್ ಅಯ್ಯೂಬ್ ನನ್ನು ಬಿಸಿರೋಡ್ ಪೊಲೀಸರು ಬಂಧಿಸಿದ್ದಾರೆ.