ಕೇವಲ 21 ವರ್ಷ ವಯಸ್ಸಿಗೇ ಜಿಲ್ಲಾ ಪಂಚಾಯತ್ ಅಧ್ಯಕ್ಷೆಯಾಗಿ ಕೂತಿದ್ದಾಳೆ ಈ ಸುಂದರ ತರುಣಿ

ಲಖನೌ: ಉತ್ತರ ಪ್ರದೇಶದ ಬಲರಾಂಪುರದಲ್ಲಿ 21 ವರ್ಷದ ಚಿಕ್ಕ ವಯಸ್ಸಿಗೇ ಇನ್ನೂ ಕಾಲೇಜು ಮುಗಿಸಿಲ್ಲದ ಯುವತಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆಯಾಗಿ ಆಯ್ಕೆಯಾಗಿದ್ದಾಳೆ.

 

ಆರತಿ ಎಂಎಲ್‌ಕೆ ಪಿಜಿ ಕಾಲೇಜಿನಲ್ಲಿ ಇದೀಗ 3ನೇ ವರ್ಷದ ಬಿಎ ಅಧ್ಯಯನ ಮಾಡುತ್ತಿರುವ ಹುಡುಗಿ. ಆಕೆಯನ್ನು ಮುಂದಿಟ್ಟುಕೊಂಡು ಅಲ್ಲಿನ ಬಿಜೆಪಿ ಚುನಾವಣೆ ಎದುರಿಸುತ್ತಿದೆ.

ಸದ್ಯಕ್ಕೆ ಆಕೆಗೆ ರಾಜಕೀಯದಲ್ಲಿ ಯಾವುದೇ ಅನುಭವ ಇಲ್ಲ. ಆಕೆಯ ಅಂಕಲ್ ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದು, ಆತನಿಗೆ ಆ ಕ್ಷೇತ್ರದಲ್ಲಿ ಹಿಂದೆ ಮಂಡಲ ಪ್ರಧಾನ ಆಗಿದ್ದವರು. ಸಮಾಜಸೇವೆಯಲ್ಲಿ ತೊಡಗಿಕೊಂಡಿದ್ದಾರೆ. ಈಗ ಅಲ್ಲಿನ ಜಿಲ್ಲಾ ಬಿಜೆಪಿ ಅಧ್ಯಕ್ಷ ಪ್ರದೀಪ್ ಸಿಂಗ್ ಅವರು ಈ ಹುಡುಗಿಯನ್ನು ಕಣಕ್ಕಿಳಿಸಿದ್ದಾರೆ. ಅತ್ಯಂತ ಹಿಂದುಳಿದ ಜಿಲ್ಲೆಯಾಗಿರುವ ಬಲರಾಂಪುರ್ ನಲ್ಲಿ ಉಳಿದ ಪಕ್ಷಗಳಲ್ಲಿ ಘಟಾನುಘಟಿ ನಾಯಕರು ಗಳಿದ್ದು ಅವರನ್ನು ಮಣಿಸಲು ಯುವನಾಯಕತ್ವದ ಹೋಗಿದ್ದಾರೆ ಅಲ್ಲಿನ ಬಿಜೆಪಿ ನಾಯಕರುಗಳು. ಅದೇ ಕಾರಣಕ್ಕೆ 21 ವರ್ಷದ ಫ್ರೆಶ್ ಬ್ಲಡ್ ನ ತರುಣಿ ಚುನಾವಣೆಯಲ್ಲಿ ಗೆದ್ದು ಈಗ ಜಿಲ್ಲಾಪಂಚಾಯಿತಿ ಸದಸ್ಯೆಯಾಗಿದ್ದಾರೆ.

ಆಕೆ ಹೆಚ್ಚಿನ ಅಂತರದೊಂದಿಗೆ ಜಯ ಸಾಧಿಸಿದ್ದಳು. ಇದೀಗ ಆಕೆಯನ್ನು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆಯಾಗಿ ಕೂಡಾ ಆಯ್ಕೆ ಮಾಡಲಾಗಿದೆ. ಆರತಿಯ ಜತೆ ಪಂಚಾಯಿತಿಯ 40 ನೂತನ ಸದಸ್ಯರು ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಹೊಸಬರನ್ನು, ಯುವಕರನ್ನು ಮುಂದೆ ಇಟ್ಟುಕೊಂಡು ಚುನಾವಣೆ ಗೆಲ್ಲುವ ರಣತಂತ್ರ ರೂಪಿಸಿದ್ದು ಬಿಜೆಪಿ ಹೆಮ್ಮೆಯಿಂದ ಬೀಗುತ್ತಿದೆ. ಅತ್ತ 21ನೇ ವಯಸ್ಸಿಗೆ ಜಿಲ್ಲಾ ಪಂಚಾಯಿತಿ ಎಂಬ ಅಧ್ಯಕ್ಷ ಪಟ್ಟ ಪಡೆದ ಹೆಗ್ಗಳಿಕೆಗೆ ಆರತಿ ಪಾತ್ರಳಾಗಿದ್ದಾಳೆ.

Leave A Reply

Your email address will not be published.