ಅನ್ಯ ಕೋಮಿನಾತನ ಹಿಂದೆ ನಡೆದಳಾ ಯುವತಿ|ಮುಂದೆ ಕಾದಿತ್ತು ಆಕೆಗೆ ಅತ್ತೆ ಮನೆಯ ಕಿರುಕುಳ. ಸೊಸೆಯನ್ನು ಮಾವನೊಂದಿಗೆ ಮಂಚಕ್ಕೆ ಹತ್ತಲು ಒತ್ತಾಯಿಸಿದಳು ಮಾಮಿ!
ಆತ ಒಳ್ಳೆಯವ,ಆತನೇ ನನ್ನ ಸರ್ವಸ್ವ ಎಂದು ಆತನ ಹಿಂದೆ ಹೋದ ಯುವತಿಯೊಬ್ಬಳು ನ್ಯಾಯ ದೊರಕಿಸಿ ಕೊಡಲು ಪತ್ರದ ಮೂಲಕ ಜಮ್ಮು ಕಾಶ್ಮೀರ ಗವರ್ನರ್ ಬಳಿ ತೆರಳಿದ್ದಾಳೆ.ಇದೊಂದು ಲವ್ ಜಿಹಾದ್ ಆಗಿದ್ದು, ಅತ್ತೆ ಮನೆಯಲ್ಲಿನ ಕಿರುಕುಳ ತಾಳಲಾರದೆ ಯುವತಿ ಈ ಗಟ್ಟಿ ನಿರ್ಧಾರ ತೆಗೆದುಕೊಂಡಿದ್ದಾಳೆ.
ಯುವತಿಯು ಜಲಂಧರ್ ನ ಆಸ್ಪತ್ರೆಯೊಂದರಲ್ಲಿ ಕೆಲಸಕ್ಕಿದ್ದ ಸಂದರ್ಭದಲ್ಲಿ, ತನ್ನ ಬಾಲ್ಯ ಸ್ನೇಹಿತನಾದ ಓರ್ವ ಯುವಕನೊಂದಿಗೆ ಮದುವೆಯಾಗುತ್ತಾಳೆ. ಆದರೆ ಅದಾಗಲೇ ಆತನಿಗಿನ್ನೊಂದು ಮದುವೆಯಾಗಿದೆ ಎಂಬುದು ಆಕೆಗೆ ತಿಳಿದಿರಲಿಲ್ಲ. ಮದುವೆಯಾದ ಬಳಿಕ ಯುವಕನ ಮನೆಯವರ ಒಂದೊಂದೇ ಬಣ್ಣ ಬಯಲಾಗಿದ್ದು, ಇದಕ್ಕೆಲ್ಲ ಬೇಸತ್ತ ಯುವತಿ ಈ ನಿರ್ಧಾರಕ್ಕೆ ಬಂದಿದ್ದಾಳೆ .
ಮೊದಮೊದಲು ಯಾವುದಕ್ಕೂ ಕೊರತೆ ಬರದಂತೆ ನೋಡಿಕೊಂಡ ಯುವಕ ಮುಸ್ಲಿಂ ಹಾಗೂ ಹಿಂದೂ ಎರಡೂ ಸಮುದಾಯದ ಸಂಪ್ರದಾಯದಂತೆ ಯುವತಿಯನ್ನು ಮದುವೆಯಾಗಿದ್ದ.
ಈ ನಡುವೆ ಯುವಕನ ತಾಯಿ ಅನಾರೋಗ್ಯ ಪೀಡಿತೆಯಾಗಿದ್ದು, ತನ್ನ ಗಂಡನ ಚಾಕ್ರಿ ಮಾಡಲು ಆಕೆಗೆ ಸಾಧ್ಯವಾಗದ ಕಾರಣ ಗಂಡನಿಗೆ ಸುಖ ಕೊಡಲು ಸೊಸೆಯನ್ನು ಒತ್ತಾಯಿಸಿದ್ದು, ಇದಕ್ಕೆ ಯುವಕನು ಕೂಡಾ ಸಹಕರಿಸಿದ್ದಾನೆ ಎನ್ನಲಾಗಿದೆ.ಅತ್ತೆಯ ಬೇಡಿಕೆಗೆ ಯುವತಿ ಒಪ್ಪದೇ ಇದ್ದಾಗ ಹಲ್ಲೆ ನಡೆಸಿ ಬೆದರಿಕೆಯನ್ನು ಹಾಕಲಾಗಿದ್ದು, ಸದ್ಯ ಯುವತಿ ನ್ಯಾಯಕ್ಕಾಗಿ ಅಂಗಲಾಚುತ್ತಿರುವುದು ಕಂಡುಬದಿದೆ.