ಜುಲೈ 20ರ ಒಳಗೆ ಪಿಯುಸಿ ಫಲಿತಾಂಶ ಘೋಷಣೆ |ಎಸ್ಎಸ್ಎಲ್ ಸಿ ಸಹಿತ ಪಿಯುಸಿ ಯ ಅಂಕಗಳನ್ನು ಗಣನೆಗೆ ತೆಗೆದುಕೊಳ್ಳಲಿದೆ ಇಲಾಖೆ

ಪರೀಕ್ಷೆ ಇಲ್ಲದೇ ಕಳೆದ ಶೈಕ್ಷಣಿಕ ವರ್ಷದ ದ್ವಿತೀಯ ಪಿಯುಸಿಯ ಎಲ್ಲಾ ವಿದ್ಯಾರ್ಥಿಗಳನ್ನು ತೇರ್ಗಡೆ ಮಾಡುವ ನಿರ್ಧಾರವನ್ನು ರಾಜ್ಯ ಸರ್ಕಾರ ಕೈಗೊಂಡಿದೆ.ಅದಲ್ಲದೇ ಪಿಯುಸಿ ಪುನಾವರ್ತಿತ ವಿದ್ಯಾರ್ಥಿಗಳಿಗೂ ಅದೇ ಸಿಹಿ ಸುದ್ದಿ ಸಿಕ್ಕಿದ್ದು,ಎಲ್ಲಾ ರಿಪೀಟರ್ಸ್ ವಿದ್ಯಾರ್ಥಿಗಳನ್ನು ಪಾಸ್ ಮಾಡುವುದಾಗಿ ಸರ್ಕಾರ ಹೇಳಿಕೆ ನೀಡಿದೆ.ಈ ನಡುವೆ ದ್ವಿತೀಯ ಪಿಯುಸಿಯ ಖಾಸಗಿ ವಿದ್ಯಾರ್ಥಿ ಗಳಿಗೆ ಕೂಡಾ ಮುಂದಿನ ತಿಂಗಳು ಪರೀಕ್ಷೆ ನಡೆಸಲಾಗುತ್ತಿದ್ದು,ಆಗಸ್ಟ್ ತಿಂಗಳಲ್ಲಿ 17,477 ಖಾಸಗಿ ಶಾಲಾ ವಿದ್ಯಾರ್ಥಿಗಳು ಆಗಸ್ಟ್ 31ರೊಳಗೆ ದ್ವಿತೀಯ ಪಿಯುಸಿ ಪರೀಕ್ಷೆ ಬರೆಯ ಲಿದ್ದು, ದಿನಾಂಕವನ್ನು ಸದ್ಯದಲ್ಲೇ ನಿಗದಿಮಾಡಲಾಗುತ್ತದೆ. ಈ ನಡುವೆ ಪಿಯುಸಿ ವಿದ್ಯಾರ್ಥಿಗಳನ್ನು ಪಾಸ್​ ಮಾಡಿದ್ದರೂ ಸಹ ಫಲಿತಾಂಶ ಮತ್ತು ಅಂಕಕ್ಕೆ ಅನೇಕ ಮಾನದಂಡಗಳಿದ್ದು, ಜುಲೈ 20ರ ಒಳಗೆ ಫಲಿತಾಂಶ ನೀಡುವುದಾಗಿ ಪಿಯು ಬೋರ್ಡ್​ ತಿಳಿಸಿದೆ.

ಎಸ್ಸೆಸ್ಸೆಲ್ಸಿ, ಪ್ರಥಮ ಪಿಯುಸಿ ಮತ್ತು ದ್ವಿತೀಯ ಪಿಯುಸಿಯ ಆಯಾಯ ಅಸೆಸ್ಮೆಂಟ್ ಸಂಯೋಗದಲ್ಲಿ ವಿದ್ಯಾರ್ಥಿಗಳಿಗೆ ಅಂಕ ನೀಡಲಾಗುವುದು ಎಂದು ತಿಳಿದುಬಂದಿದೆ. ಎಸ್ ಎಸ್ ಎಲ್ ಸಿಯಲ್ಲಿ ಪಡೆದ ಅಂಕಗಳ ಶೇ. 45, ಪ್ರಥಮ ಪಿಯುಸಿಯ ಶೇ. 45 ಅಂಕ ಹಾಗೂ ದ್ವಿತೀಯ ಪಿಯುಸಿಯ ಅಸೆಸ್ಮೆಂಟ್ ಅಂಕ ಶೇ. 10ರಷ್ಟು ಪರಿಗಣನೆ ಮಾಡಿ ಅಂಕಗಳನ್ನ ನೀಡಲಾಗುವುದು ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಜುಲೈ 20ರೊಳಗೆ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಫಲಿತಾಂಶ ಸಿಗಲಿದೆ ಎನ್ನಲಾಗಿದೆ.

ದ್ವಿತೀಯ ಪಿಯುಸಿ ರಿಪೀಟರ್ಸ್ ವಿದ್ಯಾರ್ಥಿಗಳಿಗೆ ಕನಿಷ್ಠ ಶೇ. 35 ಅಂಕದ ಜೊತೆಗೆ ಶೇ. 5ರಷ್ಟು ಗ್ರೇಸ್ ಅಂಕಗಳನ್ನ ನೀಡಲಾಗುತ್ತದೆ ಎಂದು ಉಚ್ಚ ನ್ಯಾಯಾಲಯಕ್ಕೆ ಸರ್ಕಾರ ಸ್ಪಷ್ಟಪಡಿಸಿದೆ.ಪರೀಕ್ಷೆ ಇಲ್ಲದೆಯೇ ಪಾಸ್ ಆಗುವ ವಿದ್ಯಾರ್ಥಿಗಳಿಗೆ ಒಂದು ರೀತಿಯ ಖುಷಿ ಇದ್ದು, ಕಳೆದ ಬಾರೀ ಕಡಿಮೆ ಅಂಕ ತೆಗೆದು, ಈ ಬಾರೀ ಹೆಚ್ಚು ಅಂಕ ಪಡೆಯಲು ಇಚ್ಛಿಸಿರುವ ಕೆಲ ವಿದ್ಯಾರ್ಥಿಗಳಿಗೆ ಕೊಂಚ ಬೇಸರ ಮೂಡಿರುವುದು ಸಹಜ.

Leave A Reply

Your email address will not be published.