ಕಾರ್ಮಿಕ ಇಲಾಖೆಯ ಸರ್ಕಾರಿ ಸೌಲಭ್ಯಗಳನ್ನು ಸೇವಾ ಭಾರತಿ ಮೂಲಕ ವಿತರಣೆ ಖಂಡನೀಯ: ಎಸ್.ಡಿ.ಪಿ.ಐ

ಸರ್ಕಾರದ ಕಾರ್ಮಿಕ ಇಲಾಖೆಯಿಂದ ಕಟ್ಟಡ ಕಾರ್ಮಿಕರಿಗೆ ಮತ್ತು ಇತರ ಕಾರ್ಮಿಕರಿಗೆ ಸರ್ಕಾರದಿಂದ ನೀಡುತ್ತಿರುವ ಆಹಾರ ಕಿಟ್ ಗಳನ್ನು ಪಂಚಾಯತ್ ನ ಸದಸ್ಯರ ಮತ್ತು ಪಿಡಿಓಗಳ ಗಮನಕ್ಕೆ ತಾರದೆ ಬಿಜೆಪಿ/ಸಂಘಪರಿವಾರದ ಅಂಗ ಸಂಸ್ಥೆ ಯಾಗಿರುವ ಸೇವಾ ಭಾರತಿ ಎಂಬ ಖಾಸಗಿ ಸಂಸ್ಥೆಯ ಮೂಲಕ ಸರ್ಕಾರದ ಕಿಟ್ ಗಳನ್ನು ತಮ್ಮ ವೈಯಕ್ತಿಕ ಕಿಟ್ ನ ರೀತಿಯಲ್ಲಿ ನೀಡುತ್ತಿರುವ ಪ್ರಕ್ರಿಯೆಯನ್ನು ಎಸ್‌ಡಿಪಿಐ ಖಂಡಿಸುತ್ತದೆ.

 

ಖಾಸಗಿ ಸಂಸ್ಥೆಯ ಹೆಸರಿನಲ್ಲಿ ನೀಡುವುದಾದರೆ ಅದು ಅವರದೇ ಹಣದಲ್ಲಿ ನೀಡಲಿ ಅದು ಬಿಟ್ಟು ಜನರ ತೆರಿಗೆಯ ದುಡ್ಡಿನಿಂದ ಸರ್ಕಾರದ ಬಿಡುಗಡೆ ಗೊಳಿಸಿದ ಅನುದಾನಕ್ಕೆ ತಮ್ಮ ಸಂಘಟನೆಯ ಹೆಸರಿಟ್ಟು ಪುಕ್ಕಟೆ ಪ್ರಚಾರ ಪಡೆಯುವುದನ್ನು ನಿಲ್ಲಿಸಲಿ.
ಸಂಬಂಧಪಟ್ಟ ಇಲಾಖೆ ಇದನ್ನು ಗಂಭೀರವಾಗಿ ಪರಿಗಣಿಸಬೇಕು ಮತ್ತು ಪಂಚಾಯತ್ ಆಡಳಿತಕ್ಕೆ ತಿಳಿಯದೆ ಇವರಿಗೆ ನೇರವಾಗಿ ಆಹಾರ ಕಿಟ್ ಒದಗಿಸಿದವರ ವಿರುದ್ಧವು ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಎಸ್‌ಡಿಪಿಐ ಸುಳ್ಯ ವಿಧಾನ ಸಭಾ ಕ್ಷೇತ್ರ ಸಮಿತಿ ಅಧ್ಯಕ್ಷ ಅಬ್ದುಲ್ ಕಲಾಂ ಸುಳ್ಯ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ

Leave A Reply

Your email address will not be published.