ದ್ವಿತೀಯ ಪಿಯುಸಿ ರೆಪೀಟರ್ಸ್ ಸೇರಿ ಎಲ್ಲರೂ ಪಾಸ್ | ಹೈಕೋರ್ಟ್ ಗೆ ಮಾಹಿತಿ ನೀಡಿದ ಕರ್ನಾಟಕ ಸರಕಾರ
ದ್ವಿತೀಯ ಪಿಯುಸಿ ರೆಪೀಟರ್ಸ್ ಎಲ್ಲರೂ ಪಾಸ್. ಶೇಕಡ ನೂರರಷ್ಟು ಪಾಸ್. ರೆಪೀಟರ್ಸ್ ಎಲ್ಲರನ್ನೂ ಪಾಸ್ ಮಾಡಿ ಸರಕಾರ ಆದೇಶ ನೀಡಿದೆ.
ಆದರೆ ಸರಕಾರವು ಕೆಲ ಕಂಡೀಷನ್ ಅನ್ನು ಹಾಕಿದೆ. ರೆಪೀಟರ್ಸ್ ಒಮ್ಮೆಯಾದರೂ ಪರೀಕ್ಷೆಗೆ ಕೂತಿರಬೇಕು. ಪರೀಕ್ಷೆಗೆ ಕೂತು ಎರಡು ಮೂರು ಬಾರಿ ಮೇಲಾಗಿದ್ದರೂ ಪರವಾಗಿಲ್ಲ. ಒಮ್ಮೆಯಾದರೂ ಪರೀಕ್ಷೆಗೆ ಕೂತಿರಲೆಬೇಕು. ಎಕ್ಸಂ ಅಟೆಂಡ್ ಆಗಿ ಫೇಲ್ ಆದವರಿಗೆ ಮಾತ್ರ ಅನ್ವಯ.
ಪಿಯೂಸಿ ಪ್ರೆಶರ್ಸ್ ಗೆ :
ಪಿಯುಸಿ ಪ್ರೇಶರ್ಸ್ ಗೆ 45 % ಮಾರ್ಕ್ ಪರಿಗಣನೆ ಮಾಡಿ ಮಾರ್ಕು ನೀಡಲಾಗುತ್ತದೆ
10 % ಮಾರ್ಕ್ಸ್ ಆಸೈನ್ ಮೆಂಟ್ ನಿಂದ ಪರಿಗಣನೆ.
ಈ ಬಗ್ಗೆ ಹೈಕೋರ್ಟ್ ಗೆ ಮಾಹಿತಿ ನೀಡಿದ ಸರಕಾರ. ಈ ಮೊದಲು ಸರ್ಕಾರ ದ್ವಿತೀಯ ಪಿಯು ವಿದ್ಯಾರ್ಥಿಗಳಿಗೆ ಗ್ರೇಡ್ ನೀಡೋ ಮೂಲಕ ಪಾಸ್ ಮಾಡಲು ನಿರ್ಧರಿಸಿತ್ತು. ಬಳಿಕ ವಿದ್ಯಾರ್ಥಿಗಳ ಭವಿಷ್ಯದ ದೃಷ್ಠಿಯಿಂದ ಅಂಕಗಳನ್ನು ನೀಡಲಾಗುತ್ತದೆ ಎಂಬುದಾಗಿ ಪ್ರಕಟಿಸಿತ್ತು. ದ್ವಿತೀಯ ಪಿಯು ಎಲ್ಲಾ ವಿದ್ಯಾರ್ಥಿಗಳನ್ನು ಪಾಸ್ ಮಾಡಲು ನಿರ್ಧರಿಸಿರಲಿಲ್ಲ. ಇದರಿಂದಾಗಿ ರಿಪೀಟರ್ಸ್ ವಿದ್ಯಾರ್ಥಿಗಳ ಪೋಷಕರು, ವಿದ್ಯಾರ್ಥಿಗಳು ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ಇಂದು ನಡೆಸಿದಂತ ಸಂದರ್ಭದಲ್ಲಿ ಸರ್ಕಾರ ರಿಪೀಟರ್ಸ್ ವಿದ್ಯಾರ್ಥಿಗಳನ್ನು ಪಾಸ್ ಮಾಡೋ ನಿರ್ಧಾರವನ್ನು ಕೋರ್ಟ್ ಗೆ ತಿಳಿಸಿದೆ. ಆ ಮೂಲಕ 76,000 ವಿದ್ಯಾರ್ಥಿಗಳು ಎಲ್ಲರೂ ಪಾಸ್ ಆಗಲಿದ್ದಾರೆ. ಫೇಲ್ ಆಗುವುದು ಗ್ಯಾರಂಟೀ ಇದ್ದ ಹುಡುಗ ಹುಡುಗಿಯರ ಮುಖ ಸಂತೋಷದಿಂದ ಇಷ್ಟಗಲ ಅರಳಿದೆ.